Headlines

ಮಾಜಿ ಸಚಿವ ಹರತಾಳು ಹಾಲಪ್ಪ ಹುಟ್ಟುಹಬ್ಬದ ಅಂಗವಾಗಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ

ಮಾಜಿ ಸಚಿವ ಹರತಾಳು ಹಾಲಪ್ಪ ಹುಟ್ಟುಹಬ್ಬದ ಅಂಗವಾಗಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ

ರಿಪ್ಪನ್ ಪೇಟೆ:  ರಾಜ್ಯಬಿಜೆಪಿ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಹರತಾಳು ಹಾಲಪ್ಪ ಅವರ ಹುಟ್ಟುಹಬ್ಬವನ್ನು ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನಿಸುವುದರ ಮೂಲಕ 07-03-2025 ರಂದು ಅರ್ಥಪೂರ್ಣವಾಗಿ  ಆಚರಿಸಲಾಗುವುದು ಎಂದು ಕೆರೆಹಳ್ಳಿ ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷರಾದ ಎನ್ ಸತೀಶ್ ತಿಳಿಸಿದರು

ಈ ಕುರಿತಾಗಿ ಇಂದು ಭೂಪಾಳಂ ಚಂದ್ರಶೇಖರಯ್ಯ ಸಭಾಂಗಣದಲ್ಲಿ ಬಿಜೆಪಿ ಮುಖಂಡರುಗಳು ಹಾಗೂ ಹರತಾಳು  ಹಾಲಪ್ಪ ಅಭಿಮಾನಿ ಬಳಗ ಏರ್ಪಡಿಸಿದ್ದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಮಾಜಿ ಸಚಿವರು ನಮ್ಮ ನಾಯಕರಾದ ಹರತಾಳು ಹಾಲಪ್ಪನವರ ಹುಟ್ಟು ಹಬ್ಬದ ದಿನದಂದು ನಮ್ಮ ಕೆರೆಹಳ್ಳಿ ಹೋಬಳಿ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದಿರುವ ಅನೇಕ ಸಾಧಕರನ್ನು ಗೌರವಿಸಿ ಸನ್ಮಾನಿಸುವುದರ ಜೊತೆಗೆ ಸಾಗರ ಹೊಸನಗರ ಕ್ಷೇತ್ರದ ಅಭಿವೃದ್ಧಿಗೆ ಸಾವಿರಾರು ಕೋಟಿ ಅನುದಾನ ತಂದು ಅಭಿವೃದ್ಧಿಪಡಿಸಿರುವ ಅಭಿವೃದ್ಧಿ ಹರಿಕಾರನಿಗೆ ಹೃದಯಪೂರ್ವಕ ಧನ್ಯವಾದ ಹೇಳುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ.ಹಾಗೂ ಆ ದಿನ ಬೆಳಿಗ್ಗೆಯಿಂದ ಸಂಜೆಯವರೆಗೂ ಹಲವು ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಲಾಗುವುದು ಎಂದರು.

ನಂತರ ಮಾತನಾಡಿದ ಮುಖಂಡರಾದ ಮೆಣಸೆ ಆನಂದ್ ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರದ ವಿವಿದೆಡೆಯಲ್ಲಿ ವಿವಿಧ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಾಲಪ್ಪ ಅಭಿಮಾನಿ ಬಳಗ ಹಾಗೂ ಬಿಜೆಪಿ ಕಾರ್ಯಕರ್ತರು ಹಮ್ಮಿಕೊಂಡಿದ್ದಾರೆ. ಸಾಗರದ ಗಣಪತಿ ಕೆರೆ ಸ್ವಚ್ಛತೆ ಕಾರ್ಯಕ್ರಮ, ರಕ್ತದಾನ ಶಿಬಿರ, ರಾಮಚಂದ್ರ ಪುರ ಮಠ ಹಾಗೂ ನಂದಗೋಕುಲ ಮತ್ತು ಇನ್ನಿತರೆ ಗೋಶಾಲೆಯ ಗೋವುಗಳಿಗೆ ಮೇವುಗಳನ್ನ ವಿತರಿಸುವುದು ಹಾಗೂ ಬಿಜೆಪಿ ಯುವ ಮೋರ್ಚ ವತಿಯಿಂದ ಕೆಲ ಪ್ರಯಾಣಿಕ ತಂಗುದಾಣ ಗಳಿಗೆ ಬಣ್ಣವನ್ನು ಹೊಡೆಯುವುದು ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಹಾಗೆಯೇ ಸಾಗರದ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರವನ್ನು ಮತ್ತು ತಾಲೂಕಿನ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸುವ ಮೂಲಕ ಜೊತೆಗೆ ಅದೇ ದಿನ ರಾತ್ರಿ 10 ಗಂಟೆಗೆ ಅವಿನಹಳ್ಳಿಯಲ್ಲಿ ಬಳೆ ಕೋಲಾಟ ಕಾರ್ಯಕ್ರಮವನ್ನು ಏರ್ಪಡಿಸಿದ್ದು ಹಾಲಪ್ಪನವರ ಅಭಿಮಾನಿಗಳು ಮತ್ತು ಬಿಜೆಪಿ ಕಾರ್ಯಕರ್ತರು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನಮ್ಮ ನಾಯಕರ  ಹುಟ್ಟುಹಬ್ಬವನ್ನು ಆಚರಿಸೋಣ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಎಂ ಬಿ ಮಂಜುನಾಥ್, ಸುರೇಶ್ ಸಿಂಗ್, ಸುಂದರೇಶ್, ನಾಗಾರ್ಜುನ ಸ್ವಾಮಿ, ಮಲ್ಲಿಕಾರ್ಜುನ್, ಎ ಟಿ ನಾಗರತ್ನ, ನಾಗರತ್ನ ದೇವರಾಜ್ ಇನ್ನಿತರ ಮುಖಂಡರುಗಳಿದ್ದರು.

Leave a Reply

Your email address will not be published. Required fields are marked *