ANANDAPURA | ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ
ರಾಷ್ಟ್ರೀಯ ಹೆದ್ದಾರಿ 69ರ ಸಾಗರ ರಸ್ತೆಯ ನೇದರಹಳ್ಳಿ ಬಳಿ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.
ಶಿವಮೊಗ್ಗದಿಂದ ಸಾಗರಕ್ಕೆ ತೆರಳುತಿದ್ದ ಕಾರು ನೇದರಹಳ್ಳಿ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಆಗಿದ್ದು ಕಾರಿನಲ್ಲಿ ಗಂಡ, ಹೆಂಡತಿ, ಪುತ್ರಿ ಮೂರು ಜನರು ಪ್ರಯಾಣಿಸುತ್ತಿದ್ದರು.
ಸದ್ಯ ಯಾವುದೇ ಪ್ರಾಣಾಪಾಯವಾಗದೆ ಮೂವರಿಗೂ ಸಣ್ಣ ಪುಟ್ಟ ಗಾಯಗಳಾಗಿವೆ. ಕಾರು ಪಲ್ಟಿಯಾದ ತಕ್ಷಣ ಸಾಗರ ಶಿವಮೊಗ್ಗಕ್ಕೆ ತೆರಳುತ್ತಿದ್ದ ಬಸ್ಸಿನಿಂದ ಪ್ರಯಾಣಿಕರು ಇವರನ್ನು ರಕ್ಷಿಸಿದ್ದಾರೆ.
ಕಾರಿನಲ್ಲಿದ್ದ ಕುಟುಂಬವು ಸಾಗರದ ಎಸ್. ಎನ್. ನಗರದ ಮೂಲದವರು ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.