ರಿಪ್ಪನ್‌ಪೇಟೆ ಸುತ್ತಮುತ್ತಲಿನ ಈ ಗ್ರಾಪಂ ವ್ಯಾಪ್ತಿಯಲ್ಲಿ ನಾಳೆ (09-01-2025) 3 ಫೇಸ್ ವಿದ್ಯುತ್ ಇರಲ್ಲ
ರಿಪ್ಪನ್ ಪೇಟೆ : ಪಟ್ಟಣದ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ನಾಳೆ 09/01/25 ರಂದು ಬೆಳಿಗ್ಗೆ 09-00 ರಿಂದ ಸಂಜೆ 06.00 ಗಂಟೆಯವರೆಗೆ “3 ಫೇಸ್” ವಿದ್ಯುತ್ ಸರಬರಾಜು ಇರುವುದಿಲ್ಲ.
ಶಿವಮೊಗ್ಗದ ಎಂ ಆರ್ ಎಸ್ ನಲ್ಲಿ ತುರ್ತು ದುರಸ್ತಿ ಕಾರ್ಯವಿರುವುದರಿಂದ ರೈತರ ಪಂಪ್ ಸೆಟ್ , ಹಾಗೂ ಯಂತ್ರೋಪಕರಣಗಳ ಬಳಕೆಗೆ ಪೂರಕವಾಗುವ 3 ಫೇಸ್ ವಿದ್ಯುತ್ ಇರುವುದಿಲ್ಲ ಉಳಿದಂತೆ ವಿದ್ಯುತ್ ಸರಬರಾಜಿನಲ್ಲಿ ಯಾವುದೇ ವ್ಯತ್ಯಯವಿರುವುದಿಲ್ಲ ಎಂದು ಮೆಸ್ಕಾಂ ಇಲಾಖೆಯ ಇಂಜಿನಿಯರ್ ಅಶ್ವಲ್ ಪತ್ರೀಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಿಪ್ಪನ್‌ಪೇಟೆ ಶಾಖಾ ವ್ಯಾಪ್ತಿಯ ರಿಪ್ಪನ್‌ಪೇಟೆ, ಹೆದ್ದಾರಿಪುರ, ಕೆಂಚನಾಲ, ಅಮೃತ (ಗರ್ತಿಕೆರೆ), ಹುಂಚ, ಬೆಳ್ಳೂರು, ಬಾಳೂರು, ಅರಸಾಳು, ಕೋಡೂರು, ಚಿಕ್ಕಜೇನಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರದೇಶಗಳಿಗೆ “3 ಫೇಸ್” ವಿದ್ಯುತ್ ಸರಬರಾಜು ಇರುವದಿಲ್ಲ. ಆದ್ದರಿಂದ ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಇಲಾಖೆ ಪತ್ರಿಕಾ ಪ್ರಕಟಣೆ ಮೂಲಕ ಕೋರಿದೆ.