ರಿಪ್ಪನ್‌ಪೇಟೆ – ಮಂಗಳೂರು ಯೆನೆಪೊಯೋ ಆಸ್ಪತ್ರೆಗೆ KSRTC ಬಸ್ | ಬಹುದಿನಗಳ ಬೇಡಿಕೆ ಈಡೇರಿಸಿದ ಶಾಸಕ ಬೇಳೂರು
ರಿಪ್ಪನ್‌ಪೇಟೆ : ಇಲ್ಲಿನ ಜನತೆಯ ಬಹುದಿನಗಳ ಬೇಡಿಕೆಯಾಗಿದ್ದ ಮಂಗಳೂರಿನ ಯೆನೆಪೊಯೋ ಆಸ್ಪತ್ರೆಗೆ ಸಂಪರ್ಕ ಕಲ್ಪಿಸುವ ಸರ್ಕಾರಿ ಬಸ್ ಸೌಲಭ್ಯ ಕೊನೆಗೂ ಈಡೇರಿದೆ.

ಸಾಗರದಿಂದ – ರಿಪ್ಪನ್‌ಪೇಟೆ – ಹೊಸನಗರ – ಮಾಸ್ತಿಕಟ್ಟೆ – ಮಂಗಳೂರಿಗೆ ನೂತನವಾಗಿ ಆರಂಭಗೊಂಡಿರುವ ಕೆಎಸ್ಆರ್‌ಟಿಸಿ ರಾಜಹಂಸ ಬಸ್ ಸಂಚಾರಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬುಧವಾರ ಹಸಿರು ನಿಶಾನೆ ತೋರಿಸುವ ಮೂಲಕ ಈ ಭಾಗದ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದ್ದಾರೆ.
ನೂತನ ರಾಜಹಂಸ ಬಸ್ ಸಾಗರದಿಂದ ರಾತ್ರಿ 10.10ಕ್ಕೆ ಹೊರಡಲಿದ್ದು ರಿಪ್ಪನ್ ಪೇಟೆಗೆ 11ಕ್ಕೆ ಬರಲಿದ್ದು ಬೆಳಗಿನ ಜಾವ 4ಕ್ಕೆ ಮಂಗಳೂರು , 4.45ಕ್ಕೆ ಯನಪೋಯ ಆಸ್ಪತ್ರೆ ತಲುಪುತ್ತದೆ.
ಮಂಗಳೂರಿನಿಂದ ರಾತ್ರಿ 10.10ಕ್ಕೆ ಹೊರಡುವ ಬಸ್ ಬೆಳಗಿನ ಜಾವ 3.30 ಕ್ಕೆ ರಿಪ್ಪನ್‌ಪೇಟೆಗೆ ಬಂದು 4.30ಕ್ಕೆ ಸಾಗರ ತಲುಪುತ್ತದೆ.

ಈ ಬಗ್ಗೆ ಮಾತನಾಡಿದ ಕರ್ನಾಟಕ ರಾಜ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಹಾಗೂ ಶಾಸಕ ಬೇಳೂರು ಗೋಪಾಲಕೃಷ್ಣ ಈ ಭಾಗದಿಂದ ಮಂಗಳೂರಿನ ವೆನ್ ಲಾಕ್, ಎನಪೋಯಾ ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಚಿಕಿತ್ಸೆಗೆ ತೆರಳುವುದರಿಂದ ಅವರ ಬೇಡಿಕೆಯಂತೆ ನೂತನ ಬಸ್ ಸಂಚಾರ ಆರಂಭಿಸಲಾಗಿದೆ ಹಾಗೂ ರಿಪ್ಪನ್‌ಪೇಟೆ ಜನತೆಗೆ ನೀಡಿದ್ದ ಆಶ್ವಾಸನೆಯಂತೆ ಆ ಮಾರ್ಗವಾಗಿ ಬಸ್ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದರು.
ಈ ಸಂಧರ್ಭದಲ್ಲಿ ಪಕ್ಷದ ಮುಖಂಡರು ಹಾಗೂ ಕೆಎಸ್ಆರ್ ಟಿ ಸಿ ಅಧಿಕಾರಿಗಳು ,ಸಿಬ್ಬಂದಿಗಳು ಇದ್ದರು.
ಆನಂದಪುರರದಿ ರಾತ್ರಿ 8.30 ರ ನಂತರ ರಿಪ್ಪನ್‌ಪೇಟೆಗೆ ಯಾವುದೇ ಬಸ್ ಸಂಚಾರವಿಲ್ಲದೇ ಇದ್ದಿದ್ದರಿಂದ ಜನರಿಗೆ ಅನಾನುಕೂಲವಾಗಿ ಈಗ ರಾತ್ರಿ 10.45 ಕ್ಕೆ ಆನಂದಪುರದಿಂದ ರಿಪ್ಪನ್‌ಪೇಟೆಗೂ ಬಸ ಸಂಚಾರ ವ್ಯವಸ್ಥೆ ಕಲ್ಪಿಸಿದಂತಾಗಿದೆ.ಭಾನುವಾರದಿಂದ ಬಸ್ ಸಂಚಾರ ಪ್ರಾರಂಭವಾಗಲಿದೆ.