ಹೊಂಬುಜಾ ಪದ್ಮಾವತಿ ದೇವಿಗೆ ಬಳೆಗಳ ಅಲಂಕಾರ

ಧಾರ್ಮಿಕ ಕಂಕಣ ಬದ್ಧತೆಯ ಪ್ರತೀಕ ಬಳೆಗಳು, “ಸಮೃದ್ಧ ಸಂಸಾರಕ್ಕೆ ಸೋಪಾನವಾಗಲಿ” ; ಶ್ರೀಗಳು

ರಿಪ್ಪನ್‌ಪೇಟೆ : ಜೀವನದಲ್ಲಿ ಧಾರ್ಮಿಕ ಪ್ರಜ್ಞೆಯಿಂದ ಕಂಕಣ ಬದ್ಧರಾಗಿ ನಿರ್ದಿಷ್ಟ ಕಾರ್ಯದಲ್ಲಿ ತಲ್ಲೀನರಾಗುವುದರಿಂದ ಯಶಸ್ಸು ನಿಶ್ಚಿತ. ಬಳೆಗಳನ್ನು ಅಭೀಷ್ಠವರಪ್ರದಾಯಿನಿ ಜಗದಾಂಬೆ ಯಕ್ಷಿ ಶ್ರೀ ಪದ್ಮಾವತಿ ದೇವಿಯ ಸನ್ನಿಧಿಯಲ್ಲಿ ಭಕ್ತಿಪೂರ್ವಕ ಸಮರ್ಪಿಸುವುದರಿಂದ ಭಕ್ತರಿಗೆ ಸಮೃದ್ಧ ಸಂಸಾರ ಸುಖ-ಶಾಂತಿ-ಆರೋಗ್ಯ ಲಭಿಸುವಂತಾಗುತ್ತದೆ ಎಂದು ಶ್ರೀ ಜೈನ ಮಠದ ಪೀಠಾಧೀಶರಾದ ಜಗದ್ಗುರು ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರ ತಿಳಿಸಿದರು.

ಹೊಂಬುಜ ಅತಿಶಯ ಶ್ರೀಕ್ಷೇತ್ರದ ಅಧಿನಾಯಕ ಶ್ರೀ ಪಾರ್ಶ್ವನಾಥ ಸ್ವಾಮಿ, ಶ್ರೀ ಮಠದ ಶ್ರೀ ನೇಮಿನಾಥ ಸ್ವಾಮಿ, ಮಕ್ಕಳ ಜಿನಾಲಯ, ತ್ರಿಕೂಟ ಜಿನಾಲಯ, ನಗರ ಜಿನಾಯಲದಲ್ಲಿ ನವರಾತ್ರಿಯ ಆರನೇ ದಿನದ ರಾತ್ರಿ ಅಷ್ಟಾವಧಾನ ಶ್ರೀ ಕ್ಷೇತ್ರಪಾಲ, ಶ್ರೀ ಕೂಷ್ಮಾಂಡಿನಿ ದೇವಿ, ಶ್ರೀ ಸರಸ್ವತಿ ದೇವಿ ಸನ್ನಿಧಿಯಲ್ಲಿ ವಿಶೇಷ ಅಲಂಕಾರದೊಂದಿಗೆ ಪೂಜೆಯನ್ನು ನೆರವೇರಿಸಿ ಅಶೀರ್ವಚನ ನೀಡಿ ಜೀವನ ಸೋಪಾನವಾಗಲೆಂದು ಹರಸಿದರು.

ಆರ್ಯಿಕಾರತ್ನ ಶ್ರೀ 105 ಶಿವಮತಿ ಮಾತಾಜಿಯವರು ಸ್ತ್ರೋತ್ರಗಳನ್ನು ಪಠಿಸಿ ಪೂಜಾ ವಿಧಿಗಳಲ್ಲಿ ಉಪಸ್ಥಿತರಿದ್ದರು. ಪಂಚಕೂಟ ಬಸದಿಯಲ್ಲಿ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.

ಆಶ್ವಯುಜ ಶುಕ್ಲ ಷಷ್ಠಿಯಂದು ಶರನ್ನವರಾತ್ರಿ ಉತ್ಸವಕ್ಕೆ ಪ್ರಾತಃಕಾಲ ಕುಮದ್ವತಿ ತೀರ್ಥದಿಂದ ಅಗ್ರೋದಕವನ್ನು ಮಂತ್ರಘೋಷ, ಜಿನಭಜನೆಯೊಂದಿಗೆ ಶ್ರೀಕ್ಷೇತ್ರದ ಸನ್ನಿಧಿಗೆ ತರಲಾಯಿತು. ಶ್ರೀ ಜೈನ ಮಠದ ಪೀಠಾಧೀಶರಾದ ಜಗದ್ಗುರು ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರ ದಿವ್ಯ ನೇತೃತ್ವ, ಸಾನಿಧ್ಯ ಮತ್ತು ಮಾರ್ಗದರ್ಶನದಲ್ಲಿ ಜಿನಾಗಮೋಕ್ತ ವಿಧಿಗಳು ಸಾಂಗವಾಗಿ ಜರುಗಿದವು.

ನವರಾತ್ರಿಯ ಆರನೇ ದಿನದ ರಾತ್ರಿ ಅಷ್ಟಾವಧಾನ, ಉತ್ಸವ, ವಿಶೇಷ ಪೂಜೆಗಳಲ್ಲಿ ಭಕ್ತವೃಂದದವರು, ಶ್ರೀ ಕುಂದಕುಂದ ವಿದ್ಯಾಪೀಠದ ವಿದ್ಯಾರ್ಥಿಗಳು, ಊರ-ಪರವೂರ ಭಕ್ತರು ಪಾಲ್ಗೊಂಡು ಧನ್ಯರಾದರು.

ಯಥೋಚಿತ ಅನ್ನಪ್ರಸಾದ ಸ್ವೀಕರಿಸಿದ ಭಕ್ತರು ಶ್ರೀ ಕ್ಷೇತ್ರದ ಜಿನಾಲಯಗಳ ದರ್ಶನ ಪಡೆದರು. ವಾದ್ಯಗೋಷ್ಠಿ, ಜಿನಭಜನೆ ಶ್ರೀಕ್ಷೇತ್ರದಲ್ಲಿ ಧರ್ಮಜಾಗೃತಿ ಪರಿಸಿತು.

Leave a Reply

Your email address will not be published. Required fields are marked *