POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಹರೀಶ್ ಪ್ರಭು ಬಿಜೆಪಿ ಪಕ್ಷದ ಕಾರ್ಯಕರ್ತನಲ್ಲ – ಸುರೇಶ್ ಸಿಂಗ್

GridArt 20240819 151135586.jpg

ಹರೀಶ್ ಪ್ರಭು ಬಿಜೆಪಿ ಪಕ್ಷದ ಕಾರ್ಯಕರ್ತನಲ್ಲ – ಸುರೇಶ್ ಸಿಂಗ್

ರಿಪ್ಪನ್‌ಪೇಟೆ : ಪಟ್ಟಣದ ಹರೀಶ್ ಪ್ರಭು ಎಂಬುವವರು ನಾನು ಕಟ್ಟಾ ಬಿಜೆಪಿ ಕಾರ್ಯಕರ್ತನಾದರೂ ಕಾಂಗ್ರೆಸ್ ಶಾಸಕರ ಗೆಲುವಿಗಾಗಿ ಹರಕೆ ಮಾಡಿಕೊಂಡಿದ್ದೇ ಎನ್ನುವ ವಿಚಾರ ಸತ್ಯಕ್ಕೆ ದೂರವಾದ ವಿಷಯವಾಗಿದ್ದು ಅವರು ಬಿಜೆಪಿ ಪಕ್ಷದ ಕಾರ್ಯಕರ್ತನೇ ಅಲ್ಲ ಅವರೊಬ್ಬ ಸಾಮಾನ್ಯ ಮತದಾರನಷ್ಟೇ ಎಂದು ಬಿಜೆಪಿ ಹಿರಿಯ ಮುಖಂಡ ಎಂ ಸುರೇಶ್ ಸಿಂಗ್ ಹೇಳಿದ್ದಾರೆ.

ಪೋಸ್ಟ್ ಮ್ಯಾನ್ ನ್ಯೂಸ್ ನೊಂದಿಗೆ ಮಾತನಾಡಿದ ಅವರು ಶನಿವಾರದಂದು  ಹರೀಶ್ ಪ್ರಭು ಎಂಬುವವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾನು ಬಿಜೆಪಿ ಪಕ್ಷದ ಕಾರ್ಯಕರ್ತನಾಗಿದ್ದರೂ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗಾಗಿ ಪಟ್ಟಣದ ಪುರಾಣ ಪ್ರಸಿದ್ದ ಶ್ರೀ ಸಿದ್ದಿವಿನಾಯಕ ಸ್ವಾಮಿಗೆ ಹರಕೆ ಮಾಡಿಕೊಂಡಿದ್ದೇ ಆ ಪ್ರಕಾರದಲ್ಲಿ ಹರಕೆ ತೀರಿಸಿದ್ದೇನೆ ಎಂದು ಮಾದ್ಯಮಗಳಲ್ಲಿ ತಿಳಿಸಿದ್ದಾರೆ ಆದರೆ ಹರೀಶ್ ಪ್ರಭು ಎಂಬುವವರು ಸಾಮಾನ್ಯ ಮತದಾರನೇ ಹೊರತು ನಮ್ಮ ಪಕ್ಷದ ಪ್ರಾಥಮಿಕ ಸದಸ್ಯತ್ವ ಕೂಡ ಹೊಂದಿರುವುದಿಲ್ಲ ಎಂದು ತಿಳಿಸಿದ್ದಾರೆ.

ನಾನು ಬಿಜೆಪಿ ಕಟ್ಟಾ ಕಾರ್ಯಕರ್ತ ಹಾಗೂ ನನ್ನ ನರನಾಡಿಗಳಲ್ಲಿ ಬಿಜೆಪಿ ಪಕ್ಷದ ತತ್ವ ಸಿದ್ದಾಂತ ಇದೆ ಎಂದು ಹೇಳುವ ಅವರಿಗೂ ನಮ್ಮ ಪಕ್ಷಕ್ಕೆ ಯಾವುದೇ ಸಂಬಂಧವಿಲ್ಲ, ಈ ರೀತಿಯಾಗಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಿದರೆ ಸಹಿಸಲು ಸಾಧ್ಯವಿಲ್ಲ ಎಂದು ಅವರು ಈ ಸಂಧರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.