Headlines

ರಿಪ್ಪನ್‌ಪೇಟೆ – ಕೊಳೆತ ಸ್ಥಿತಿಯಲ್ಲಿ ಪುರುಷನ ಶವ ಪತ್ತೆ|deadbody

ರಿಪ್ಪನ್‌ಪೇಟೆ – ಕೊಳೆತ ಸ್ಥಿತಿಯಲ್ಲಿ ಪುರುಷನ ಶವ ಪತ್ತೆ ರಿಪ್ಪನ್‌ಪೇಟೆ : ಇಲ್ಲಿನ ತೀರ್ಥಹಳ್ಳಿ ರಸ್ತೆಯ ಬೆಟ್ಟಿನಕೆರೆ ಗ್ರಾಮದ ಮನೆಯೊಂದರಲ್ಲಿ ಪುರುಷನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬೆಟ್ಟಿನಕೆರೆ ನಿವಾಸಿ ಜೋಸ್ (ಆಲುವ) ಎಂಬ ವ್ಯಕ್ತಿ ಮೃತಪಟ್ಟಿದ್ದಾನೆ ಎನ್ನಲಾಗುತಿದೆ. ಈತನು ಮನೆಯಲ್ಲಿ ಒಬ್ಬನೇ ವಾಸ ಮಾಡುತಿದ್ದು ಪತ್ನಿ ಮತ್ತು ಮಕ್ಕಳು ಹಲವು ವರ್ಷಗಳ ಹಿಂದೆಯೇ ಈತನನ್ನು ಬಿಟ್ಟು ಹೋಗಿದ್ದರು. ಮನೆಯಲ್ಲಿ ಒಬ್ಬನೇ ವಾಸ ಮಾಡುತಿದ್ದ ಈತನು ನಾಲ್ಕು ದಿನಗಳ ಹಿಂದೆ ಈತ ಮೃತಪಟ್ಟಿರಬಹುದು ಎನ್ನಲಾಗುತ್ತಿದೆ. ಈತ ಮನೆಮನೆಗೆ…

Read More

ರಿಪ್ಪನ್‌ಪೇಟೆಯ ಜೆ ಎನ್ ಆರ್ ರೈಸ್ ಮಿಲ್ ಮಾಲೀಕ ಜೆ ಎನ್ ರುದ್ರಪ್ಪಗೌಡ ನಿಧನ|Rpet

ರಿಪ್ಪನ್‌ಪೇಟೆ : ಪಟ್ಟಣದ ಶಿವಮೊಗ್ಗ ರಸ್ತೆಯ ಜೆ ಎನ್ ಆರ್ ರೈಸ್ ಮಿಲ್ ಮಾಲೀಕರಾಗಿದ್ದ ಜೆ ಎನ್ ರುದ್ರಪ್ಪ ಗೌಡರು (93) ತಮ್ಮ ಸ್ವಗೃಹದಲ್ಲಿ ಇಂದು ಬೆಳಿಗ್ಗೆ ವಯೋಸಹಜ ನಿಧನರಾದರು. ಮೂಲತಃ ಜಂಬಳ್ಳಿ ಮನೆತನದವರಾದ ಜೆ ಎನ್ ರುದ್ರಪ್ಪ ಗೌಡರು ಕಳೆದ 70 ವರ್ಷಗಳ ಹಿಂದೆ ರಿಪ್ಪನ್‌ಪೇಟೆಯ ಶಿವಮೊಗ್ಗ ರಸ್ತೆಯಲ್ಲಿ ಜೆ ಎನ್ ಆರ್  ರೈಸ್ ಮಿಲ್ ಪ್ರಾರಂಭಿಸಿದ್ದರು. ಮೃತರಿಗೆ ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರಿದ್ದಾರೆ. ಮೃತರ ಅಂತ್ಯಕ್ರಿಯೆ ಸ್ವಗ್ರಾಮ ಜಂಬಳ್ಳಿಯಲ್ಲಿ ಇಂದು ಸಂಜೆ 5…

Read More

ಡೆತ್ ನೋಟ್ ಬರೆದಿಟ್ಟು ಯಡಗುಡ್ಡೆ ಬೆಟ್ಟದ ಮೇಲೆ ಅಗ್ನಿಸ್ಪರ್ಶ ಮಾಡಿಕೊಂಡ ಮಹಿಳೆ…!!!! ಜ್ಯೋತಿಷಿ ಮಾತು ಕೇಳಿ ಮೋಕ್ಷ ಪ್ರಾಪ್ತಿಗೆ ಆತ್ಮಹತ್ಯೆ ಮಾಡಿಕೊಂಡರಾ ಜಯಶ್ರೀ…????ಈ ಸುದ್ದಿ ನೋಡಿ|sucide

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಯಡಗುಡ್ಡೆ ಗ್ರಾಮದಲ್ಲಿ ನಾಪತ್ತೆಯಾಗಿದ್ದ ಮಹಿಳೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಕಳೆದ ಸೋಮವಾರದಿಂದ ಹೊದಲ ಗ್ರಾಪಂ ವ್ಯಾಪ್ತಿಯ ಯಡಗುಡ್ಡೆ ಸಮೀಪದ ಹೊಸಳ್ಳಿ ಗ್ರಾಮದ ಜಯಶ್ರೀ (52) ಎಂಬುವರು ನಾಪತ್ತೆಯಾಗಿದ್ದರು.  ಜ. 23 ರಂದು ಸಂಜೆ ವಾಕಿಂಗ್ ಹೋದವರು ಮನೆಗೆ ಹಿಂದಿರುಗಿಲ್ಲ. ಎಂದು ದೂರು ದಾಖಲಾಗಿತ್ತು. ಜ. 27ರಂದು ಯಡಗುಡ್ಡೆ ಗ್ರಾಮದ ಗುಡ್ಡದ ಮೇಲೆ ಜಯಶ್ರೀ ಅವರ ಶವ ಅರೆಬರೆ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ….

Read More

ಹೊಸನಗರ ತಾಲೂಕ್ ತಹಶೀಲ್ದಾರ್ ವಿ ಎಸ್ ರಾಜೀವ್ ವರ್ಗಾವಣೆ – ಜಿಲ್ಲೆಯ ಮೂವರು ತಹಶೀಲ್ದಾರ್ ವರ್ಗಾವಣೆ|transfer

ಹೊಸನಗರ ತಾಲೂಕಿನ ತಹಶೀಲ್ದಾರ್ ವಿ ಎಸ್ ರಾಜೀವ್ ರವರನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಹೊಸನಗರ ತಾಲೂಕಿನ ತಹಶೀಲ್ದಾರ್ ರಾಜೀವ್ ವಿ.ಎಸ್ ಕೊಡಗು ಚುನಾವಣೆ ತಹಶೀಲ್ದಾರ್ ಆಗಿ ವರ್ಗಾವಣೆಗೊಂಡಿದ್ದಾರೆ. ರಾಜೀವ್ ಸೇರಿದಂತೆ  ಶಿವಮೊಗ್ಗ ಜಿಲ್ಲೆಯ ಮೂವರು ತಹಶೀಲ್ದಾರ್ ಗಳು ವರ್ಗಾವಣೆಗೊಂಡಿದ್ದಾರೆ. ಭದ್ರಾವತಿ, ಹೊಸನಗರ ಮತ್ತು ಶಿವಮೊಗ್ಗ ತಹಶೀಲ್ದಾರ್ ವರ್ಗಾವಣೆಗೊಂಡಿದ್ದಾರೆ. ಭದ್ರಾವತಿ ತಹಶೀಲ್ದಾರ್ ಪ್ರದೀಪ್ ನಿಕ್ಕಂ ಉಡುಪಿಯ ಚುನಾವಣೆ ತಹಶೀಲ್ದಾರ್ ಆಗಿ ವರ್ಗಾವಣೆಗೊಂಡಿದ್ದರೆ, ಹೊಸನಗರ ತಾಲೂಕಿನ ರಾಜೀವ್ ವಿ.ಎಸ್ ಕೊಡಗು ಚುನಾವಣೆ ತಹಶೀಲ್ದಾರ್ ಆಗಿ ವರ್ಗಾವಣೆಗೊಂಡಿದ್ದಾರೆ. ಶಿವಮೊಗ್ಗ ತಾಲೂಕು…

Read More

ಕ್ಯಾಂಟರ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿ – ಇಬ್ಬರಿಗೆ ತೀವ್ರ ಗಾಯ|accident

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಸಮೀಪ ಕ್ಯಾಂಟರ್ ಹಾಗೂ ಕಾರಿನ ನಡುವೆ ಡಿಕ್ಕಿ…!!! ಸಾಗರ ತಾಲೂಕಿನ ಆನಂದಪುರ ಪೊಲೀಸ್ ಸ್ಟೇಷನ್ ಸಮೀಪದಲ್ಲಿ ಕ್ಯಾಂಟರ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾದ ಘಟನೆ ನಡೆದಿದೆ. ಆನಂದಪುರದಿಂದ ಸಾಗರದ ಕಡೆಗೆ ತೆರಳುತ್ತಿದ್ದ ಟಿಪ್ಪರ್ ಲಾರಿ ಹಾಗೂ ಸಿದ್ದೇಶ್ವರ ಕಾಲೋನಿಯಿಂದ ಆನಂದಪುರದ ಕಡೆಗೆ ಸಾಗುತ್ತಿದ್ದ ಮಾರುತಿ ಸ್ವಿಫ್ಟ್ ಕಾರಿನ(KA 17 M 9578)  ನಡುವೆ ಮುಖಾಮುಖಿ ಡಿಕ್ಕಿಯಾದ ಘಟನೆ ನಡೆದಿದೆ. ಈ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರಿಗೆ ತೀವ್ರವಾದ ಗಾಯವಾಗಿದ್ದು…

Read More

ಆಸ್ಪತ್ರೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ತೀರ್ಥಹಳ್ಳಿ ಮೂಲದ ರೋಗಿ|sucide

ಶಿವಮೊಗ್ಗ : ನಗರದ ಪ್ರತಿಷ್ಠಿತ ಮಾನಸಿಕ ಚಿಕಿತ್ಸಾ ಆಸ್ಪತ್ರೆಯಲ್ಲೇ ಮಾನಸಿಕ ಅಸ್ವಸ್ಥ ರೋಗಿಯೊಬ್ಬ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.  ಕಳೆದ 20 ವರ್ಷದಿಂದ ಮಾನಸಿಕ ಅಸ್ವಸ್ಥರಾಗಿದ್ದ ತೀರ್ಥಹಳ್ಳಿ ತಾಲೂಕಿನ ಸಿಂಗನ ಬಿದರಿ ಗ್ರಾಮದ ಶ್ರೀನಿವಾಸ್ ರವರನ್ನು ವಾರದ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಹೋದರ ತಿಂಡಿ ತರಲು ಹೊರಗೆ ಹೋದಾಗ ಶ್ರೀನಿವಾಸ್‌ ಮೇಲೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಜ.29 ರಂದು ಆಸ್ಪತ್ರೆಗೆ ದಾಖಲಾದ ಶ್ರೀನಿವಾಸ್ ಆಸ್ಪತ್ರೆಯ ಖಾಲಿ ರೂಂ ಗೆ ಹೋಗಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ….

Read More

ಹೆರಿಗೆಯಾದ ಕೆಲವೇ ಗಂಟೆಗಳಲ್ಲಿ ನವಜಾತ ಶಿಶು ಸಾವು – ಆಸ್ಪತ್ರೆಯ ಗಾಜು ಒಡೆದು ಕುಟುಂಬಸ್ಥರ ಆಕ್ರೋಶ|hospital

ಶಿವಮೊಗ್ಗ: ನಗರದ ಸುಬ್ಬಯ್ಯ ಆಸ್ಪತ್ರೆಯಲ್ಲಿ ಹೆರಿಗೆಯಾದ ಕೆಲವೇ ಗಂಟೆಯಲ್ಲಿ ನವಜಾತ ಶಿಶು ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯದಿಂದಲೇ ಮಗು ಸಾವಿಗೀಡಾಗಿದೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಪೂಜಿ ನಗರದ ಭಾಗ್ಯ ಮತ್ತು ನಾಗರಾಜ್ ದಂಪತಿಗಳಿಗೆ ಚೊಚ್ಚಲ ಗಂಡು ಮಗುವಿಗೆ ನಿನ್ನೆ ಜನ್ಮ ನೀಡಿದ್ದಾರೆ. ಮಗು ಹುಟ್ಟಿದ ತಕ್ಷಣ ತೂಕಹಾಕಿಲ್ಲ ಮಗುವಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡದೆ ವೈದ್ಯರೇ ಸಾವಿಗೆ ಕಾರಣವಾಗಿದ್ದಾರೆ ಎಂದು ಪೋಷಕರು ಮತ್ತು ಪೋಷಕರ ಕಡೆಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಗು ಸಾವಿಗೆ ಮುಂಚೆ ವೈದ್ಯರು ಉಸಿರಾಟ ತೊಂದರೆ…

Read More

ರಿಪ್ಪನ್‌ಪೇಟೆ : ಸರ್ಕಾರಿ ಹಾಸ್ಟೆಲ್ ನಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಪ್ರಕರಣ – ಗ್ರಾಪಂ ಅಧ್ಯಕ್ಷರು ,ಉಪಾಧ್ಯಕ್ಷರ ಸದಸ್ಯತ್ವ ವಜಾಕ್ಕೆ ಆಮ್ ಆದ್ಮಿ ಮನವಿ|AAP

ರಿಪ್ಪನ್‌ಪೇಟೆ : ಇಲ್ಲಿನ ಬಿಸಿಎಂ ವಿದ್ಯಾರ್ಥಿನಿ ನಿಲಯದಲ್ಲಿ ಬಿಜೆಪಿ ಪಕ್ಷದ ವಿಜಯ ಸಂಕಲ್ಪ ಅಭಿಯಾನದ ಅಂಗವಾಗಿ ಸದಸ್ಯತ್ವ ಅಭಿಯಾನ ನಡೆಸಿರುವ ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಸದಸ್ಯತ್ವವನ್ನು ಕೂಡಲೇ ವಜಾ ಮಾಡುವಂತೆ ಹೊಸನಗರ ತಾಲೂಕ್ ಆಮ್ ಆದ್ಮಿ ಪಕ್ಷದ ನೇತೃತ್ವದಲ್ಲಿ ನಾಡಕಛೇರಿ ಉಪತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಮನವಿ ಸಲ್ಲಿಸಿ ಮಾತನಾಡಿದ ಹೊಸನಗರ ತಾಲ್ಲೂಕು ಎಎಪಿ ಪಕ್ಷದ ಅಧ್ಯಕ್ಷ ಗಣೇಶ್ ಸೋಗೋಡು 27-01-2023 ರ ಶುಕ್ರವಾರ ಸಂಜೆ ಪಟ್ಟಣದ ಬಿಸಿಎಂ ವಿದ್ಯಾರ್ಥಿನಿಯರ ಹಾಸ್ಟೆಲ್ ಗೆ …

Read More

ರಿಪ್ಪನ್‌ಪೇಟೆ : ಪ್ರಾರ್ಥನಾ ಮಂದಿರದ ಬಳಿ ಮದ್ಯದಂಗಡಿ ಪ್ರಾರಂಭಕ್ಕೆ ಯತ್ನ – ಸರ್ವಪಕ್ಷಗಳಿಂದ ಬೃಹತ್ ಪ್ರತಿಭಟನೆ|protest

ರಿಪ್ಪನ್‌ಪೇಟೆ : ಇಲ್ಲಿನ ಹೊಸನಗರ-ಕುಂದಾಪುರ ರಾಜ್ಯ ಹೆದ್ದಾರಿಯಲ್ಲಿನ ಜುಮ್ಮಾ ಮಸೀದಿ ಮುಂಭಾಗದ ರಾಯಲ್ ಕಂಫರ್ಟ್ ಕಟ್ಟಡದಲ್ಲಿ ಮದ್ಯದಂಗಡಿ ಆರಂಭಿಸುವ ಹುನ್ನಾರ ನಡೆಯುತ್ತಿದ್ದು ಇದನ್ನು ವಿರೋಧಿಸಿ ಇಂದು ರಿಪ್ಪನ್‌ಪೇಟೆ ಮೊಹಿಯುದ್ದೀನ್ ಜುಮ್ಮಾ ಮಸೀದಿ ಸಮಿತಿ ಮತ್ತು ಸರ್ವ ಪಕ್ಷಗಳಿಂದ ಪ್ರತಿಭಟನೆ ನಡೆಸಿದರು. ಕಳೆದ ಒಂದು ವಾರದ ಹಿಂದೆ ಶಿವಮೊಗ್ಗ ಅಬಕಾರಿ ಜಿಲ್ಲಾಧಿಕಾರಿಗಳಿಗೂ ಮತ್ತು ಜಿಲ್ಲಾಧಿಕಾರಿಗಳ ಕಛೇರಿಗೆ ಪಟ್ಟಣದಿಂದ ಸರ್ವಪಕ್ಷಗಳ ನಿಯೋಗ ತೆರಳಿ ಯಾವುದೇ ಕಾರಣಕ್ಕೂ ಪ್ರಾರ್ಥನಾ ಮಂದಿರದ ಸನಿಹದಲ್ಲಿ ಸಿಎಲ್-7 ಮದ್ಯದಂಗಡಿ ತೆರೆಯಲು ಅನುಮತಿ ನೀಡಬಾರದು ಎಂದು ಆಗ್ರಹಿಸಿ…

Read More

ಬಸ್ ಮತ್ತು ಬೈಕ್ ನಡುವೆ ಅಪಘಾತ – ಇಬ್ಬರು ಯುವಕರು ಸ್ಥಳದಲ್ಲೇ ಸಾವು|accident

ಶಿವಮೊಗ್ಗದ ಕುಂಸಿ ಬಳಿಯ ಕೆರೆ ಎರಿ ಮೇಲೆ ಶ್ರೀನಿವಾಸ್ ಬಸ್ ಹಾಗೂ ಬೈಕ್ ನಡುವೆ ರಸ್ತೆ ಅಪಘಾತ ವಾಗಿದ್ದು ಬೈಕ್ ಸವಾರರಿಬ್ಬರು ಸ್ಥಳದಲ್ಲೆ ಮೃತಪಟ್ಟ ಘಟನೆ ವರದಿಯಾಗಿದೆ. ಶಿವಮೊಗ್ಗದಿಂದ ಶಿಕಾರಿಪುರಕ್ಕೆ ಹೋಗುತ್ತಿದ್ದ ಶ್ರೀನಿವಾಸ್ ಬಸ್ ಹಾಗೂ ಹೊಸನಗರ ದಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದ ಬೈಕ್ ಗಳ ನಡುವೆ ಈ ಘಟನೆ ನಡೆದಿದೆ.  ಮೃತಪಟ್ಟ ಯುವಕರು ಶಿವಮೊಗ್ಗದ ಗುರುಪುರ ಮತ್ತು ಇಂದಿರಾ ನಗರದ ನಿವಾಸಿಗಳು ಎಂದು ತಿಳಿದು ಬಂದಿದೆ. ಮೃತದೇಹವನ್ನು ಶಿವಮೊಗ್ಗದ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.  ಸ್ಥಳಕ್ಕೆ ಕುಂಸಿ  ಠಾಣೆ…

Read More