ಭಾರತೀಯ ಜನತಾ ಪಾರ್ಟಿ ಅಲ್ಲ ಭ್ರಷ್ಟ ಜನತಾ ಪಾರ್ಟಿ – ಡಿ ಕೆ ಶಿವಕುಮಾರ್|DK
ಭಾರತೀಯ ಜನತಾ ಪಾರ್ಟಿ ಅಲ್ಲ ಭ್ರಷ್ಟ ಜನತಾ ಪಾರ್ಟಿ – ಡಿ ಕೆ ಶಿವಕುಮಾರ್ ತೀರ್ಥಹಳ್ಳಿ : ಬಿಜೆಪಿ ಸರ್ಕಾರ ಬಂದು ಆರಗ ಜ್ಞಾನೇಂದ್ರ ಗೃಹ ಸಚಿವರಾದಾಗ ಸಂತೋಷವಾಗಿತ್ತು. ಅವರಿಗೆ ಒಳ್ಳೆಯ ಸಂಸ್ಕೃತಿ ಇದೆ ಅಂದುಕೊಂಡಿದ್ದೆ ಆದರೆ ಪೊಲೀಸ್ ಅನ್ನು ಉಪಯೋಗಿಸಿಕೊಂಡು ದುರಾಡಳಿತ ಮಾಡುತ್ತಿದ್ದಾರೆ. ನಿಮ್ಮ ಆಡಳಿತಾವಧಿಯಲ್ಲಿ ಇನ್ಸ್ಪೆಕ್ಟರ್ ಹುದ್ದೆಗೆ ಓ.ಎಂ.ಆರ್. ಶೀಟ್ ತಿದ್ದುವ ಕೆಲಸ ಮಾಡಿದ್ರು. ಆರಗ ಜ್ಞಾನೇಂದ್ರ ಅವರೇ ಕೇಸ್ ಹಾಕಿಸ್ತೀರೋ ಹಾಕಿಸಿ ಇನ್ನು 60 ದಿನದಲ್ಲಿ ಎಲ್ಲಾ ಬದಲಾಗಲಿದೆ ನಿಮ್ಮ ಅಧಿಕಾರ ಕೊನೆಗೊಳ್ಳಲಿದೆ…