ಸಮಯಕ್ಕೆ ಸರಿಯಾಗಿ ಸಿಗದ ಆಂಬುಲೆನ್ಸ್ : 45 ದಿನದ ಮಗು ಸಾವು
ತುಮರಿ ಗ್ರಾಮ ಎಂಬ ಮಾನವ ನಿರ್ಮಿತ ದ್ವೀಪದಲ್ಲಿ 108 ಅವ್ಯವಸ್ಥೆ, ಹೊಸ ಆಂಬುಲೆನ್ಸ್ ಬಂದರೂ ಸಕಾಲಕ್ಕೆ ತುರ್ತು ಆರೋಗ್ಯ ವಾಹನ ಸಿಗದೆ 45 ದಿನಗಳ ಮಗು ಉಸಿರಾಟ ಸಮಸ್ಯೆಯಿಂದ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ಬ್ಯಾಕೋಡು ಸಮೀಪದ ಸಸಿಗೊಳ್ಳಿಯಲ್ಲಿ ನಡೆದಿದೆ. ಕಳೆದ ನಾಲ್ಕು ದಿನದಿಂದ ದ್ವೀಪದ ಹೊಸ ಆಂಬುಲೆನ್ಸ್ ಸೇವೆಯಲ್ಲಿ ಇಲ್ಲದ ಹಿನ್ನೆಲೆಯಲ್ಲಿ ಸಸಿಗೊಳ್ಳಿ ಸಮೀಪದ ಎಲ್ದಮಕ್ಕಿ ಹಳ್ಳಿಯ ಗೀತಾ ಮತ್ತು ಉಮೇಶ್ ದಂಪತಿಗಳ 45 ದಿನಗಳ ಹಸುಗೂಸಿಗೆ ಉಸಿರಾಟ ತೊಂದರೆಯಾಗಿ 108 ಅಲಭ್ಯತೆಯಿಂದ ತಡವಾಗಿ…