ಬೆಳೆಯುವ ಮಕ್ಕಳಲ್ಲಿ ಸಂಸ್ಕಾರ ಅರಳಬೇಕು: ಆರಗ ಜ್ಞಾನೇಂದ್ರ
ರಿಪ್ಪನ್‌ಪೇಟೆ: ಒಂದು ಶಾಲೆ ಮಕ್ಕಳ ವ್ಯಕ್ತಿತ್ವವನ್ನು ರೂಪಿಸುತ್ತದೆ. ಆ ಶಾಲೆಯಿಂದ ಮಕ್ಕಳ ಮನಸ್ಸಿನಲ್ಲಿ ಸಂಸ್ಕಾರ ಅರಳುವಂತಾಗಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಹೆದ್ದಾರಿಪುರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ 25 ಲಕ್ಷ ರೂ ವೆಚ್ಚದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ ಶಾಲೆಗಳು ದೇವಸ್ಥಾನಕ್ಕೆ ಸಮ. ದೇವಸ್ಥಾನಕ್ಕೆ ಕೊಡುವುದನ್ನು ಶಾಲೆಗಳಿಗೆ ಕೊಟ್ಟರೆ ಅಂತಹ ದಾನಿಗಳಿಗೆ ಹತ್ತು ಪಟ್ಟು ಹೆಚ್ಚು ಪುಣ್ಯಪ್ರಾಪ್ತಿಯಾಗುತ್ತದೆ. ಭಾಷಣದಿಂದ ಸಮಾಜ ಪರಿವರ್ತನೆಯಾಗವುದಿಲ್ಲ. ಅಧ್ಯಾಪಕರ ಪ್ರಮಾಣಿಕ ಪ್ರಯತ್ನದಿಂದ ಇಲ್ಲಿನ ಹಣತೆಗಳನ್ನು ದೇಶ ಬೆಳಗಲು ಪ್ರೇರೇಪಿಸಬಹುದು…