ರಿಪ್ಪನ್‌ಪೇಟೆ : ಮಹಾತ್ಮಗಾಂಧಿಜೀ ಹಾಗೂ ಲಾಲ್‌ಬಹದ್ದೂರು ಶಾಸ್ತ್ರೀಯವರು ಸರಳ ಸಜ್ಜನಿಕೆಯಿಂದ ಪ್ರಪಂಚದ ಜನಮಾನಸದಲ್ಲಿ ಉಳಿದಿದ್ದಾರೆ.ಅದರೆ ಇಂದಿನ ರಾಜಕಾರಣಿಗಳು ಜಾತಿ ಧರ್ಮ ಹಾಗೂ ಭಷ್ಟಾಚಾರವನ್ನೇ ಅಧಾರವಾಗಿಟ್ಟುಕೊಂಡು ಮುನ್ನಡೆಯುತ್ತಿರುವುದು ನಮ್ಮ ರಾಷ್ಟ ನಾಯಕರುಗಳಿಗೆ ಮಾಡಿದಂತಹ ಅವಮಾನ ಎಂದು ಜನಪರ ಹೋರಾಟ ವೇದಿಕೆ ಅಧ್ಯಕ್ಷ ಆರ್.ಎನ್.ಮಂಜುನಾಥ ಹೇಳಿದರು.
ಪಟ್ಟಣದ ಗ್ರಾಮ ಪಂಚಾಯ್ತಿಯ ಕುವೆಂಪು ಸಭಾಂಗಣದಲ್ಲಿ ರಾಷ್ಟç ಪಿತ ಮಹಾತ್ಮ ಗಾಂಧಿಜೀ ಹಾಗೂ ಮಾಜಿ ಪ್ರಧಾನಿ ಭಾರತ ರತ್ನ ಲಾಲ್‌ಬಹದ್ದೂರು ಶಾಸ್ತಿಜೀಯವರ ಜನ್ಮ ದಿನದ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು
ಸಾರ್ವಜನಿಕ ಹಣವನ್ನು ಇಂದಿನ ರಾಜಕಾರಣಿಗಳು ಲೂಟಿ ಹೊಡೆಯಲು ಒಬ್ಬರ ಮೇಲೆ ಒಬ್ಬರು ಪೈಪೂಟಿ ನಡೆಸುತ್ತಿದ್ದು ಸಮಾಜದ ಮುಂದೆ ಬಂದು ನಾನು ಅಭಿವೃದ್ದಿ ಪರ ಜನಪರ ಸಮಾಜ ಸೇವಕ ಎಂಬ ಮುಖವಾಡ ಧರಿಸಿಕೊಂಡು ದೇಶದ ಜನತೆಯನ್ನು ವಂಚಿಸುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ ಅವರು ಸ್ವಚ್ಚಭಾರತ ಎಂಬ ಪರಿಕಲ್ಪನೆಯನ್ನು ಜಗತ್ತಿಗೆ ಸಾರಿದ ಗಾಂಧಿಜೀಯವರ ಜನ್ಮ ದಿನದಲ್ಲಿ ಸ್ವಚ್ಚತಾ ಅಂದೋಲನ ಮಾಡಿದರೆ ಸಾಲದು ಗ್ರಾಮದಲ್ಲಿನ ಸ್ವಚ್ಚತೆಯ ಬಗ್ಗೆ ಗ್ರಾಮಾಡಳಿತ ಹಾಗೂ ನಾಗರೀಕರು ಒಟ್ಟಾಗಿ ಗಮನ ಹರಿಸಬೇಕು ಆಗ ಮಾತ್ರ ಸ್ವಚ್ಚತೆಯ ಕಾರ್ಯ ನಿರಂತರವಾಗಿ ಮುಂದುವರಿಯುತ್ತದೆ ಎಂದರು.
ನಂತರ ಮಾತನಾಡಿದ ಶಿವಮೊಗ್ಗ ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಆರ್.ಎನ್.ಮಂಜಪ್ಪ ಮಾನವ ಜಗತ್ತು ಕಂಡ ಬಹುದೊಡ್ಡ ಇತಿಹಾಸ ಮೂರ್ತಿ ಶ್ರೇಷ್ಟ ಚಿಂತಕ ದಾರ್ಶನಿಕ ರಾಷ್ಟ ಪ್ರೇಮಿ ನುಡಿದಂತೆ ನಡೆದವರು.ಸತ್ಯ ಅಹಿಂಸೆ ಮತ್ತು ಮೌಲ್ಯಾದರ್ಶಗಳ ಸತ್ವದಿಂದಲೇ ಭಾರತಕ್ಕೆ ಸಮರ್ಥ ರಾಜಕೀಯ ಮತ್ತು ಸಾಮಾಜಿಕ ನಾಯಕತ್ವ ನೀಡಿದವರು ಮಹಾತ್ಮ ಗಾಂಧಿಜೀ.ಪ್ರಸ್ತುತ ಸಮಾಜದಲ್ಲಿ ಗಾಂಧಿಜೀಯವರ ಚಿಂತನೆಗಳು ಅದರ್ಶಗಳು ತತ್ವಗಳು ಕಣ್ಮುರೆಯಾಗುತ್ತಿದ್ದು ಇಂದಿನ ಯುವ ಸಮೂಹ ಎತ್ತಸಾಗುತ್ತಿದೆ ಎಂಬುದು ಭಯನಕವಾಗಿ ಕಾಡುತ್ತಿದ್ದು ಸಂವಿಧಾನದ ನಾಲ್ಕನೇ ಅಂಗವಾದ ಮಾಧ್ಯಮಗಳು ಸಹ ದಾರಿತಪ್ಪುವಂತೆ ಮಾಡುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳ ಗೈರುಹಾಜರಿ ಎದ್ದು ಕಾಣುತಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮಾಧ್ಯಕ್ಷೆ ಮಂಜುಳ ಕೇತಾರ್ಜಿರಾವ್ ವಹಿಸಿದ್ದರು.
ಪಿಡಿಓ ಜಿ.ಚಂದ್ರಶೇಖರ್ ಗ್ರಾಪಂ ಸದಸ್ಯರಾದ ಸುಂದರೇಶ್, ಆರ್.ವಿ.ನಿರೂಪ್ ಕುಮಾರ್,ಆರ್,ಪ್ರಕಾಶಪಾಲೇಕರ್, ವಿನೋಧ,ಅನುಪಮ,ಅಶ್ವಿನಿ ರವಿಶಂಕರ,ವನಮಾಲ,ದೀಪಾಸುದೀರ್, ಧನಲಕ್ಷಿö್ಮ,ಜಿ.ಡಿ.ಮಲ್ಲಿಕಾರ್ಜುನ,ಗಣಪತಿ, ಮುಖಂಡರಾದ ಆರ್ ಟಿ ಗೋಪಾಲ್ ,ಆರ್ ರಾಘವೇಂದ್ರ ಹಸನಬ್ಬ, ಕುಕ್ಕಳಲೇ ಈಶ್ವರ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಪಂಚಾಯ್ತಿ ಸಿಬ್ಬಂದಿವರ್ಗ ಹಾಜರಿದ್ದು ನಂತರ ಸ್ವಚ್ಚತಾ ಕಾರ್ಯದೊಂದಿಗೆ ಶ್ರಮದಾನ ಮಾಡಿದರು.
About The Author
ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು.
ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.”
ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ.
ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ.
ಮುಂದಿನ ಹಂತದಲ್ಲಿ ನಾವು ಔಟ್ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ.
ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು.
– ರಫ಼ಿ ರಿಪ್ಪನ್ ಪೇಟೆ
ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್
Leave a Reply