ವೃತ್ತಿಪರ ಶಿಕ್ಷಣದಿಂದ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬಹುದು : ಶಾಸಕ ಹರತಾಳು ಹಾಲಪ್ಪ

ರಿಪ್ಪನ್‌ಪೇಟೆ: ಆಧುನಿಕ ತಂತ್ರಜ್ಞಾನ ಯುಗದಲ್ಲಿ  ಕೌಶಲ್ಯ ಮತ್ತು ವೃತ್ತಿಪರ ಶಿಕ್ಷಣವನ್ನು ಸಮಾಜದಲ್ಲಿನ ಬಡವರು ಮತ್ತುಮಧ್ಯಮ ವರ್ಗದವರು ಪಡೆದುಕೊಂಡು ಶ್ರಮವಹಿಸಿ ಬರುವ ಆದಾಯದಿಂದ ಹೆಚ್ಚು ಅನುಕೂಲಸ್ಥರಾಗುವ ಮೂಲಕ ತಮ್ಮಲ್ಲಿರುವ ಕೀಳರಿಮೆಯನ್ನು ದೂರ ಮಾಡಿ ಸ್ವಾಭಿಮಾನದಿಂದ ಬದುಕಲು ಸಾಧ್ಯವೆಂದು ಶಾಸಕ ಹಾಗೂ ಎಂಎಸ್ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪ ಹೇಳಿದರು. ರಿಪ್ಪನ್‌ಪೇಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೆರೆಹಳ್ಳಿ ಗ್ರಾಮದಲ್ಲಿ ಸುಮಾರು 2.45 ಕೋಟಿ ರೂ. ವೆಚ್ಚದ ಸುಸಜ್ಜಿತ ಸರ್ಕಾರಿ ಐಟಿಐ ಕಾಲೇಜ್ ನೂತನ ಕಟ್ಟಡವನ್ನು ಲೋಕಾರ್ಪಣೆಗೊಳಿಸಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ,…

Read More

MSIL ರಾಯಭಾರಿಯಾಗಿ ಆಯ್ಕೆಯಾದ ರಾಷ್ಟ್ರೀಯ ಹಾಕಿ ಕ್ರೀಡಾಪಟು ರಿಪ್ಪನ್‌ಪೇಟೆಯ ಪೂಜಿತಗೌಡ : 5 ಲಕ್ಷದ ಚೆಕ್ ವಿತರಿಸಿದ ಹರತಾಳು ಹಾಲಪ್ಪ

ಹಾಕಿ ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವ ರಿಪ್ಪನ್ ಪೇಟೆಯ ಪ್ರತಿಭಾನ್ವಿತ ಕ್ರೀಡಾ ತಾರೆ ಪೂಜಿತ ಗೌಡ 5 ವರ್ಷಕ್ಕೆ ಕರ್ನಾಟಕ ಎಂಎಸ್ ಐಎಲ್ ಸಂಸ್ಥೆಯ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾಗಿದ್ದಾರೆ.  ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕರು ಮತ್ತು ಎಂಎಸ್ ಐಎಲ್ ಅಧ್ಯಕ್ಷರಾದ ಹರತಾಳು ಹಾಲಪ್ಪ ರವರು ಕ್ರೀಡಾ ಪ್ರತಿಭೆ ಪೂಜಿತ ಗೌಡ ರವರಿಗೆ ಎಂಎಸ್ ಐ ಎಲ್ ವತಿಯಿಂದ ಚೆಕ್ ವಿತರಿಸಿದರು. ನಂತರ ಮಾತನಾಡಿದ ಶಾಸಕರು ಗ್ರಾಮೀಣ ಭಾಗದ ಹಾಕಿ ಪ್ರತಿಭೆಯೊಬ್ಬಳು  ರಾಷ್ಟ್ರ ಮಟ್ಟದಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶನ…

Read More

ಸೂಡೂರು ಸಮೀಪ ಟ್ಯಾಂಕರ್ ಹಾಗೂ ಇನ್ನೊವಾ ಕಾರಿನ ನಡುವೆ ಮುಖಾಮುಖಿ ಡಿಕ್ಕಿ :

ಪೆಟ್ರೋಲ್ ಟ್ಯಾಂಕರ್ ಮತ್ತು ಇನ್ನೋವಾ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಉಂಟಾಗಿದ್ದು ಕಾರಿನಲ್ಲಿರುವ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸೂಡೂರು ಸಮೀಪದ ತಿರುವಿನಲ್ಲಿ ಶಿವಮೊಗ್ಗ ಕಡೆಯಿಂದ ಕುಂದಾಪುರ ಕಡೆಗೆ ತೆರಳುತಿದ್ದ ಪೆಟ್ರೋಲ್ ಟ್ಯಾಂಕರ್ ಮತ್ತು ರಿಪ್ಪನ್‌ಪೇಟೆ ಕಡೆಯಿಂದ ಆಯನೂರು ಗೆ ತೆರಳುತಿದ್ದ ಇನ್ನೋವ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಉಂಟಾಗಿದ್ದು ಕಾರು ಸಂಪೂರ್ಣ ನಜ್ಜುಗುಜ್ಜಾಗಿವೆ. ಕಾರಿನಲ್ಲಿ ಪ್ರಯಾಣ ಮಾಡುತಿದ್ದ ನಾಲ್ವರು ಪ್ರಯಾಣಿಕರಿಗೆ ಗಾಯಗಳಾಗಿವೆ. ಆದರೆ ಪ್ರಾಣಾಪಾಯವಿಲ್ಲವೆಂದು ತಿಳಿದು ಬಂದಿದೆ. ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಪ್ರಕರಣ…

Read More

ಮುಂದುವರೆದ ಭಾರಿ ಮಳೆ : ಹೊಸನಗರ,ಸಾಗರ ಮತ್ತು ತೀರ್ಥಹಳ್ಳಿ‌‌ ತಾಲೂಕಿನ ಶಾಲೆಗಳಿಗೆ ನಾಳೆಯೂ ರಜೆ ಘೋಷಣೆ :

ಮಲೆನಾಡಿನಾದ್ಯಂತ ಮಳೆ ಅಬ್ಬರ ಮುಂದುವರೆದಿದ್ದು ಈ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಗುರುವಾರ(07-07-2022) ಸಹ ತೀರ್ಥಹಳ್ಳಿ, ಹೊಸನಗರ ಮತ್ತು ಸಾಗರ ತಾಲೂಕಿನ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.    ಜಿಲ್ಲೆಯ ಹೊಸನಗರ ತೀರ್ಥಹಳ್ಳಿ ಸಾಗರ ತಾಲ್ಲೂಕುಗಳಲ್ಲಿ ಅತಿ ಹೆಚ್ಚು ಮಳೆ ಬೀಳುತ್ತಿರುವ ಕಾರಣ ಮೂರು ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ನಾಳೆ ರಜೆ ಘೋಷಿಸಲಾಗಿದೆ ಎಂದು ಮಾನ್ಯ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

Read More

ಹೆಣ್ಣು ಮಕ್ಕಳು ಮನಸ್ಸು ಮಾಡಿದರೆ ಸಶಕ್ತವಾದ ಸ್ವಾಭಿಮಾನಿ ಸಮಾಜ ನಿರ್ಮಿಸಬಹುದು : ಸೀಮಾ ಕಿರಣ್

ರಿಪ್ಪನ್‌ಪೇಟೆ : ಹೆಣ್ಣು ಮಕ್ಕಳು ರಾಷ್ಟ್ರದ ಶಕ್ತಿಯಾಗಿದ್ದಾರೆ, ಹೆಣ್ಣು ಮಕ್ಕಳು ಮನಸ್ಸು ಮಾಡಿ ನಿಂತರೆ ಸಾಕು ಸಶಕ್ತವಾದ ಸಧೃಡ ಸ್ವಾಭಿಮಾನಿ ಸಮಾಜವನ್ನು ಸುಲಭವಾಗಿ ನಿರ್ಮಿಸಬಹುದಾಗಿದೆ ಎಂದು ಜೆಸಿಐ ಅಧ್ಯಕ್ಷೆ  ಸೀಮಾ ಕಿರಣ್ ಹೇಳಿದರು ಅವರು ಪಟ್ಟಣದ ಶ್ರೀ ರಾಮ ಸಭಾ ಭವನ ಮಹಿಳೆಯರು ನೂತನವಾಗಿ ಆರಂಭಿಸಿದ ಹೊಸನಗರ ತಾಲೂಕ್ ರೈಸ್ ಅಂಡ್ ಶೈನ್ ಬ್ಯೂಟಿಷಿಯನ್ ಅಸೋಶಿಯೇಷನ್ ಸಂಘವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಮನೆ, ಕುಟುಂಬ ಸೇರಿದಂತೆ ಇಡೀ ಸಮಾಜವನ್ನು ಸಶಕ್ತವಾಗಿ ಸದೃಡವಾಗಿ ಮುನ್ನಡೆಸುವ ಶಕ್ತಿಯು ಹೆಣ್ಣು…

Read More

ಭಾರಿ ಮಳೆಯ ಹಿನ್ನಲೆ ಹೊಸನಗರ,ಸಾಗರ ಮತ್ತು ತೀರ್ಥಹಳ್ಳಿ ತಾಲ್ಲೂಕಿನ ಶಾಲೆಗಳಿಗೆ ರಜೆ ಘೋಷಣೆ :

ಮಲೆನಾಡಿನಾದ್ಯಂತ ಮಳೆ ಅಬ್ಬರಿಸುತ್ತಿದ್ದು ಈ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬುಧವಾರ ತೀರ್ಥಹಳ್ಳಿ, ಹೊಸನಗರ ಮತ್ತು ಸಾಗರ ತಾಲೂಕಿನ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.    ಜಿಲ್ಲೆಯ ಹೊಸನಗರ ತೀರ್ಥಹಳ್ಳಿ ಸಾಗರ ತಾಲ್ಲೂಕುಗಳಲ್ಲಿ ಹೆಚ್ಚು ಮಳೆ ಬೀಳುತ್ತಿರುವ ಕಾರಣ ಮೂರು ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ನಾಳೆ ರಜೆ ಘೋಷಿಸಲಾಗಿದೆ ಎಂದು ಮಾನ್ಯ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

Read More

ರಿಪ್ಪನ್ ಪೇಟೆ ಗುಡ್ ಶೆಫರ್ಡ್ ಚರ್ಚ್ ಬಳಿ ಭೀಕರ ರಸ್ತೆ ಅಪಘಾತ : ಬೈಕ್ ಸವಾರನ ಸಾವು

ರಿಪ್ಪನ್ ಪೇಟೆ : ಪಟ್ಟಣದ ತೀರ್ಥಹಳ್ಳಿ ರಸ್ತೆಯ ಗುಡ್ ಶಫರ್ಡ್ ಶಾಲೆಯ ಸಮೀಪ ಇಂದು ಸಂಜೆ ನಡೆದ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ. ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಮ್ಮಡಿ ಕೊಪ್ಪ ಗ್ರಾಮದ ದಿನೇಶ್ ಪಿಸಾಳೆ (42) ಮೃತಪಟ್ಟ ದುರ್ಧೈವಿಯಾಗಿದ್ದಾರೆ. ಮೃತರು ಇಂದು ಸಂಜೆ ರಿಪ್ಪನ್ ಪೇಟೆ ಪಟ್ಟಣದಿಂದ ತನ್ನ ಸ್ವಗ್ರಾಮ ತಮ್ಮಡಿಕೊಪ್ಪ  ಹೋಗುತ್ತಿರುವಾಗ ಕ್ಯಾಂಟರ್ ವಾಹನವೊಂದು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.  ರಾಜ್ಯ…

Read More

ಕವಲೆದುರ್ಗ ಗ್ರಾಮದ ಕೆರೆಯಲ್ಲಿ ಯುವಕನ ಶವ ಪತ್ತೆ !!! ಸಾವಿನ ಸುತ್ತ ಅನುಮಾನದ ಹುತ್ತ!!!!????

ತೀರ್ಥಹಳ್ಳಿ:  ಸಹಕಾರಿ ಕ್ಷೇತ್ರದ ನಾಯಕ ಕಟ್ಟೆಗದ್ದೆ ಹಾಲಪ್ಪ ಅವರ ಪುತ್ರ ಆಕರ್ಷ ರಾಜ್ ಅವರ ಶವ ಮಂಗಳವಾರ ತಾಲೂಕಿನ ಕವಲೇದುರ್ಗ  ಕೆರೆಯಲ್ಲಿ ಪತ್ತೆಯಾಗಿದೆ. ಭಾನುವಾರ ರಾತ್ರಿಯಿಂದ ಕಾಣೆಯಾಗಿದ್ದ ಬಿಇ ಪದವೀಧರ ಕಟ್ಟೆಗದ್ದೆ ಆಕರ್ಷ ರಾಜ್ (26) ಮೃತದೇಹ ಸಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದುರ್ಗಾ ಕ್ರಾಸ್ ಸಮೀಪದ ಕೆರೆಯಲ್ಲಿ ಮುಂಜಾನೆ ಪತ್ತೆಯಾಗಿದ್ದು ಇದೀಗ ಹಲವು ಅನುಮಾನ ವ್ಯಕ್ತವಾಗುತ್ತಿದೆ. ಗುತ್ತಿಗೆದಾರರಾಗಿದ್ದ ಆಕರ್ಷ ರಾಜ್ ಬೆಂಗಳೂರಿನಲ್ಲಿ ಬಿಇ ಪದವಿ ಪಡೆದಿದ್ದರು. ಭಾನುವಾರ ಸಂಜೆ ಸಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕವಲೇದುರ್ಗ…

Read More

ಕ್ಯಾನ್ಸರ್ ರೋಗಿಗಳಿಗೆ ಕೂದಲು ದಾನ ನೀಡಿ ಯುವ ಸಮಾಜಕ್ಕೆ ಪ್ರೇರಣೆಯಾದ ಕಾಲೇಜಿನ ಯುವತಿ :

ರಿಪ್ಪನ್‌ಪೇಟೆ : ದಾನ ಮಾಡುವವರಿಗೆ ಇಂತಹದೇ ಎಂಬ ನಿಯಮವೇನು ಇಲ್ಲ ಯಾವುದಾದರೇನು ಕೊಡುವ ಮನಸ್ಸು ಇದ್ದರೆ ಏನು ಬೇಕಾದರೂ ಕೊಡಬಹುದು ಎಂಬುದಕ್ಕೆ ಇಲ್ಲಿನ ಶಬರೀಶ್ ನಗರದ ನಿವಾಸಿ ಕುಮಾರಿ ಚಂದನ ಜಿ.ನಾಯಕ್ ಮಾದರಿಯಾಗಿದ್ದಾಳೆ. ಕಣ್ಣು-ರಕ್ತ – ವಸ್ತ-ಅನ್ನದಾನ-ವಿದ್ಯಾದಾನ ಗೋ ದಾನ, ಧನ ದಾನ ಹೀಗೆ ಹತ್ತು ಹಲವು ವಿಧದಲ್ಲಿ ದಾನ ಮಾಡುವುದನ್ನು ನಾವು  ಕೇಳಿರುತ್ತೇವೆ ಅದರೆ ಇಲ್ಲಿನ ಯುವತಿಯೊಬ್ಬಳು ತನ್ನ ಕೇಶವನ್ನು ಕ್ಯಾನ್ಸರ್ ರೋಗಿಗಳಿಗೆ ನೀಡಿ ಧೈರ್ಯ ತುಂಬುವ ಕೆಲಸ ಮಾಡಿದ್ದಾಳೆ. ಕ್ಯಾನ್ಸರ್ ರೋಗಿಗಳಿಗೆ ಮಾರಕ ರೋಗದ…

Read More

ಜೋಗ ಪ್ರವಾಸಕ್ಕೆ ಬಂದಿದ್ದ ಬೆಂಗಳೂರು ಮೂಲದ ಮಹಿಳೆ ಕಾಲುಜಾರಿ ಬಿದ್ದು ಸಾವು :

ಜೋಗ ಪ್ರವಾಸಕ್ಕೆ ಬಂದಿದ್ದ ಮಹಿಳೆ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ಸಾಗರ ತಾಲೂಕಿನ ಜೋಗದಲ್ಲಿ ನಡೆದಿದೆ. ಬೆಂಗಳೂರು ಮೂಲದ ನಿಶಾ(24) ಮೃತ ದುರ್ಧೈವಿಯಾಗಿದ್ದಾರೆ. ಕಳೆದ ಒಂದು ವರ್ಷದ ಹಿಂದೆಯಷ್ಟೇ ನಾಗೇಶ್ ಎಂಬುವವರ ಜೊತೆ ವಿವಾಹವಾಗಿದ್ದ ನಿಶಾ, ಪತಿ ನಾಗೇಶ್​ ಅವರೊಂದಿಗೆ ಜೋಗ ಜಲಪಾತ ವೀಕ್ಷಿಸಲು ಬಂದಿದ್ದರು.  ಜೋಗದ ಜಂಗಲ್ ರೆಸಾರ್ಟ್ ಸಮೀಪದ ಹಿನ್ನೀರಿನ ಬಳಿ ನಿಶಾ ಕಾಲು ಜಾರಿ ಬಿದ್ದಿದ್ದು, ತಕ್ಷಣವೇ ಸ್ಥಳೀಯರ ಸಹಾಯದಿಂದ ನಾಗೇಶ್​ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ದುರಾದೃಷ್ಟವಶಾತ್​ ನಿಶಾ ಸಾವನ್ನಪ್ಪಿದ್ದಾರೆ. ನಿಶಾ…

Read More