POSTMAN NEWS

ನೈಜ ಸುದ್ದಿ ನೇರ ಬಿತ್ತರ..

ರಿಪ್ಪನ್ ಪೇಟೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಈ ವರ್ಷದ ಮೊದಲ ವರ್ಷಧಾರೆ ::

ರಿಪ್ಪನ್ ಪೇಟೆ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಇಂದು ಸಂಜೆ ಈ ವರ್ಷದ ಮೊದಲ ವರ್ಷಧಾರೆಯಿಂದ ಪ್ರಾಣಿಗಳ ಸಂಕುಲಕ್ಕೆ ಮತ್ತು ನಾಗರಿಕರಿಗೆ ಸಂತಸವಾಗಿದೆ.


ಕಳೆದ 5 ತಿಂಗಳಿಂದ ಮಳೆಯಿಲ್ಲದೆ ಬೇಸತ್ತು ಹೋಗಿದ್ದ ಪ್ರಾಣಿ ಸಂಕುಲಕ್ಕೆ. ಗಿಡಮರ ಮರಗಳಿಗೆ. ಸಸ್ಯ ಜೀವಿಗಳಿಗೆ  ಹಾಗೂ ನಾಗರೀಕರಿಗೆ ಇಂದು ಸಂಜೆ ಸುರಿದ ಮಳೆಯಿಂದ  ಸಂತಸದ ಜೊತೆಗೆ ರಣ ತಾಪಕ್ಕೆ ಬೇಸತ್ತು ಹೋಗಿದ್ದ ಮನಗಳಿಗೆ ಹಾಗೂ ಜೀವಸಂಕುಲಕ್ಕೆ ತಂಪೇರದಂತಾಗಿದೆ


 ಕಳೆದ 5 ತಿಂಗಳಿನಿಂದ ರಿಪ್ಪನ್ ಪೇಟೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಳೆಯ ಅಭಾವದಿಂದ ಕುಡಿಯುವ ನೀರಿಗೂ ಸಹ ತೊಂದರೆಯಾಗುವ ಸಂಭವವಿತ್ತು. ಇಂದು ಸುರಿದ ಮಳೆಯಿಂದ ಅದರಲ್ಲೂ ವಿಶೇಷವಾಗಿ ಪ್ರಾಣಿ ಸಂಕುಲಕ್ಕೆ ಮತ್ತು ಸಸ್ಯ ಜೀವಿಗಳಿಗೆ  ಸ್ವಲ್ಪಮಟ್ಟಿಗಾದರೂ ನೀರಿನ ಜೊತೆಗೆ  ತಂಪಿನ ವಾತಾವರಣ ದೊರೆತಂತಾಗಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.