Headlines

ಸಚಿವ ಕೆ ಎಸ್ ಈಶ್ವರಪ್ಪ ಕೈ ತಪ್ಪಿದ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ : ನೂತನ ಉಸ್ತುವಾರಿಯನ್ನಾಗಿ ಗೌಡರನ್ನು ನೇಮಿಸಿದ ರಾಜ್ಯ ಸರ್ಕಾರ

ರಾಜ್ಯ ಸರ್ಕಾರ ಕೋವಿಡ್ ಉಸ್ತುವಾರಿ ಹಾಗೂ ಜಿಲ್ಲಾ ಉಸ್ತುವಾರಿಗಳನ್ನು ಬದಲಾಯಿಸಿ ಆದೇಶ ಹೊರಡಿಸಿದ್ದು ಶಿವಮೊಗ್ಗ ಜಿಲ್ಲೆ ಸಚಿವ ಕೆ ಎಸ್ ಈಶ್ವರಪ್ಪರವರ ಕೈ ತಪ್ಪಿದೆ. ಈಶ್ವರಪ್ಪನವರಿಗೆ ಚಿಕ್ಕಮಗಳೂರು ಜಿಲ್ಲೆಯ ಉಸ್ತುವಾರಿ ಹೊಣೆ ಹೊರಿಸಲಾಗಿದೆ.ಹಾಗೇಯೆ ಯುವಜನ ಸಬಲೀಕರಣ ಮತ್ತು ಕ್ರೀಡೆ ಹಾಗೂ ರೇಷ್ಮೆ ಇಲಾಖೆ ಸಚಿವ ಕೆ‌.ಸಿ ನಾರಾಯಣ್ ಗೌಡರಿಗೆ ಶಿವಮೊಗ್ಗ ಜಿಲ್ಲೆಯ ಉಸ್ತುವಾರಿಯನ್ನು ನೀಡಲಾಗಿದೆ. ಇಲ್ಲಿಯವರೆಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಚಿಕ್ಕಮಗಳೂರು ಉಸ್ತುವಾರಿ ಸಚಿವರಾಗಿದ್ದರು. ಇನ್ಮುಂದೆ ಅವರು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಜವಾಬ್ದಾರಿ…

Read More

ಶವವಾಗಿ ಪತ್ತೆಯಾದ ಪ್ರಕಾಶ್ ಟ್ರಾವೆಲ್ಸ್ ಮಾಲೀಕ : ಸತತ ಮೂರು ದಿನಗಳ ಕಾರ್ಯಾಚರಣೆ ನಂತರ ಪತ್ತೆ

ಸಾಗರದ ಪ್ರಕಾಶ್ ಟ್ರಾವೆಲ್ಸ್ ಮಾಲಿಕ ಪ್ರಕಾಶ್ ರವರ ಶವ ಕೊನೆಗೂ ಪಟಗುಪ್ಪ ಹೊಳೆಯಲ್ಲಿ  ಪತ್ತೆಯಾಗಿದೆ. ಕಳೆದ ಶುಕ್ರವಾರ ಸಂಜೆ ನಾಪತ್ತೆಯಾಗಿದ್ದ ಪ್ರಕಾಶ್,ಶನಿವಾರ ಅವರ ಮೊಬೈಲ್ ಹಾಗೂ ಕಾರು ಪಟಗುಪ್ಪೆ ಸೇತುವೆ ಬಳಿ ಪತ್ತೆಯಾಗಿದ್ದವು.ಕೂಡಲೇ ಕ್ಷಿಪ್ರ ಕಾರ್ಯಾಚರಣೆಗಿಳಿದಿದ್ದ ಅಗ್ನಿಶಾಮಕದಳ ಹಾಗೂ ಮುಳುಗು ತಜ್ಞರಿಂದ ಶೋಧ ಕಾರ್ಯ ನಡೆದಿತ್ತು.ಆದರೆ ಮೂರು ದಿನ ಸತತವಾಗಿ ಶೋಧ ಕಾರ್ಯ ನಡೆಸಿದರು ಪತ್ತೆಯಾಗಿರಲಿಲ್ಲ. ಸೋಮವಾರ ಬೆಳ್ಳಗ್ಗೆ ಪ್ರಕಾಶ್ ಅವರ ಶವ ಪಟಗುಪ್ಪೆ ಹೊಳೆಯಲ್ಲಿಯೇ ಪತ್ತೆಯಾಗಿದೆ. ಅವರ ಹಿತೈಷಿಗಳು ಮತ್ತು ಕುಟುಂಬಸ್ಥರು ಈ ಪ್ರಕರಣದ ಹಿಂದೆ…

Read More

ಶಿವಮೊಗ್ಗ ಜಿಲ್ಲೆಯಲ್ಲಿ ಕೊರೋನ ಹೆಚ್ಚು ಪತ್ತೆಯಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯ 9 ಕಾಲೇಜು 4 ಶಾಲೆಗಳಿಗೆ ನಾಳೆ ರಜೆ ಘೋಷಣೆ

ಶಿವಮೊಗ್ಗ ಜಿಲ್ಲೆಯಲ್ಲಿ ಕೊರೋನ ಹೆಚ್ಚಳದ ಹಿನ್ನಲೆಯಲ್ಲಿ ನಾಳೆ ಜಿಲ್ಲೆಯ ಒಂಬತ್ತು ಕಾಲೇಜುಗಳು ಹಾಗೂ ನಾಲ್ಕು ಶಾಲೆಗಳಿ ರಜೆ ಘೋಷಿಸಲಾಗಿದೆ. ಮಕ್ಕಳಲ್ಲಿ ಕೊರೋನ ಹೆಚ್ಚಳವಾದರೆ ಕ್ಲಸ್ಟರ್ ರೀತಿ ಪರಿಗಣಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಕೊರೋನ ಪ್ರಗತಿ ಪರಿಶೀಲನ ಸಭೆಯಲ್ಲಿ ಸಚಿವ ಈಶ್ವರಪ್ಪ ಇಂದು ಸಂಜೆ ಯಾವ ಯಾವ ಶಾಲೆಗಳು ನಾಳೆ ರಜೆ ಘೋಷಿಸಲಿವೆ ಎಂದು ತಿಳಿಸಿದ್ದರು. ಅದರಂತೆ ರಾಗಿಗುಡ್ಡದ ಅಂಬೇಡ್ಕರ್ ವಸತಿ ಶಾಲೆ, ಮುರಾರ್ಜಿ ಶಾಲೆ, ಮುರಾರ್ಜಿ ಕಾಲೇಜು, ತೀರ್ಥಹಳ್ಳಿಯ ಬಸವಾನಿ,…

Read More

ಮೃತ ಕಗ್ಗಲಿ ವೀರಭದ್ರಪ್ಪ ಗೌಡ ರವರ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿದ ಗೃಹ ಸಚಿವ ಆರಗ ಜ್ಞಾನೇಂದ್ರ

ರಿಪ್ಪನ್ ಪೇಟೆ : ಇಲ್ಲಿನ ಸಮೀಪದ ಕಗ್ಗಲಿ ಗ್ರಾಮದ ಹಿರಿಯರು,ರೈತ ಹೋರಾಟಗಾರರಾದ ಕೆ ಸಿ ವೀರಭದ್ರಪ್ಪ ಗೌಡ (88) ಶನಿವಾರ ಸ್ವಗೃಹದಲ್ಲಿ ನಿಧನರಾಗಿದ್ದರು. ಈ ಹಿನ್ನಲೆಯಲ್ಲಿ ರಾಜ್ಯದ ಗೃಹ ಸಚಿವರಾದ ಆರಗ ಜ್ಞಾನೇಂದ್ರ ರವರು ಮೃತ ಕಗ್ಗಲಿ ವೀರಭದ್ರಪ್ಪ ಗೌಡರ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿದರು. ರೈತ ಸಂಘಟನೆಯ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಕಗ್ಗಲಿ ವೀರಭದ್ರಪ್ಪ ಗೌಡರು 80 ರ ದಶಕದಲ್ಲಿ ರೈತ ಪರ ಹೋರಾಟದಲ್ಲಿ ಧಾರವಾಡ ಹಿಂಡಲಗಾ ಜೈಲಿನಲ್ಲಿ 21 ದಿನ ಜೈಲು ವಾಸ…

Read More

ಬೈಕ್ ಅಪಘಾತ : ಪೆಸಿಟ್ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು

ಪುರುದಾಳು ಗ್ರಾಮದ ಫಾರೆಸ್ಟ್ ಚೆಕ್ ಪೋಸ್ಟ್ ಬಳಿ ಬೈಕ್ ಅಪಘಾತವಾಗಿ ಪೆಸಿಟ್ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಮೃತ ಪಟ್ಟಿದ್ದಾನೆ.  ಅತಿವೇಗ ಮತ್ತು ಅಜಾಗರೂಕತೆಯಿಂದ ಬೈಕ್ ಚಲಾಯಿಸಿದ್ದರ ಪರಿಣಾಮ ಬೈಕ್ ನಿಂದ ಬಿದ್ದು ಇಂಜಿನಿಯರಿಂಗ್ ವಿದ್ಯಾರ್ಥಿ ಸುಧನ್ವ ಮೃತಪಟ್ಟಿದ್ದಾನೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು ತಾಲೂಕಿನ ಸುಧನ್ವ ಎಂಬ 21 ವರ್ಷದ ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯು ತನ್ನ ಸ್ನೇಹಿತರೊಂದಿಗೆ ಪುರುದಾಳು ಗ್ರಾಮದಿಂದ ಶಿವಮೊಗ್ಗಕ್ಕೆ ಬೈಕ್ ನಲ್ಲಿ ತೆರಳಿದ್ದಾರೆ. ಫಾರೆಸ್ಟ್ ಚೆಕ್ ಪೋಸ್ಟ್ ಬಳಿ ಸ್ನೇಹಿತ ಮನೋಜ್…

Read More

ಅನ್ನದಾತ ಮಾಲೀಕನನ್ನು ಹುಡುಕಿಕೊಡುವಂತೆ ಆಗ್ರಹಿಸಿ ಪ್ರಕಾಶ್ ಟ್ರಾವೆಲ್ಸ್ ಕಾರ್ಮಿಕರಿಂದ ಹೊಸನಗರ ಪೊಲೀಸ್ ಠಾಣೆ ಎದುರು ಪ್ರತಿಭಟನೆ :

ಹೊಸನಗರ:-  ಪ್ರಕಾಶ್ ಟ್ರಾವೆಲ್ಸ್ ನ ಮಾಲೀಕರಾದ ಪ್ರಕಾಶ್ ಕಳೆದ ಮೂರು ದಿನಗಳಿಂದ ಕಾಣೆಯಾಗಿರುವುದು ಟ್ರಾವೆಲ್ಸ್ ನ ಕಾರ್ಮಿಕರಲ್ಲಿ ಅನುಮಾನಗಳ ಹುತ್ತ ಬೆಳೆದಿದೆ ಅಲ್ಲದೇ ನುಂಗಲಾರದ ತುತ್ತಾಗಿದ್ದು, ಇಂದು ಪಟ್ಟಣದ ಪೋಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸುವುದರ ಮೂಲಕ ಮಾಲೀಕರನ್ನು ಕೂಡಲೇ ಹುಡುಕಿ ಕೊಡುವಂತೆ ಮನವಿ ಮಾಡಿದರು.  ತಮ್ಮ ಕುಟುಂಬದ ಸದಸ್ಯರು ಸೇರಿದಂತೆ ಸುಮಾರು ಎರಡು ಸಾವಿಕ್ಕೂ ಹೆಚ್ಚು  ಜನರಿಗೆ ಅನ್ನದಾತರಾದ ಟ್ರಾವೆಲ್ಸ್ ನ‌ ಮಾಲೀಕರನ್ನು ಕೂಡಲೇ ಪತ್ತೆ ಹಚ್ಚಿಕೊಡಬೇಕೆಂದು ಪ್ರಕಾಶ್ ಟ್ರಾವೆಲ್ಸ್ ನಲ್ಲಿ ಕೆಲಸ ನಿರ್ವಹಿಸುತ್ತಿರುವ ಚಾಲಕ,…

Read More

ಪ್ರಕಾಶ್ ಬಸ್ ಮಾಲೀಕರ ಶೋಧ ಕಾರ್ಯಾಚರಣೆ : ಕಾಫ಼ಿ ಡೇ ಸಿದ್ದಾರ್ಥ ಪ್ರಕರಣ ಮರುಕಳಿಸುವ ಆತಂಕದಲ್ಲಿ ಮಲೆನಾಡಿಗರು..!!!!!

ಶುಕ್ರವಾರ ಸಂಜೆ ಸಾಗರದಿಂದನಾಪತ್ತೆಯಾಗಿದ್ದ ಸಾಗರದ ಪ್ರಖ್ಯಾತ ಟ್ರಾವೆಲ್ಸ್ ಕಂಪನಿ ಮಾಲೀಕರಾದ ಪ್ರಕಾಶ್ ರವರ ಕಾರು, ಮೊಬೈಲ್ ಮತ್ತು ಕನ್ನಡಕ ಹೊಸನಗರ ಸಮೀಪದ ಪಟಗುಪ್ಪೆ ಸೇತುವೆ ಮೇಲೆ ಪತ್ತೆಯಾಗಿರುವ  ಹಿನ್ನಲೆಯಲ್ಲಿ ಪ್ರಕಾಶ್ ರವರ ಪತ್ತೆಗಾಗಿ ಅಗ್ನಿಶಾಮಕ ದಳ ತನ್ನ ಶೋಧಕಾರ್ಯವನ್ನು ಎರಡನೇ ದಿನಕ್ಕೆ ಮುಂದುವರೆಸಿದೆ. ಸೊರಬದಿಂದ ಒಬಿಎಂ ಬೋಟ್ ನ್ನು ತರಿಸಲಾಗಿದ್ದು ನಾಲ್ವರು ಬೋಟ್ ನಲ್ಲಿ ಶೋಧಕಾರ್ಯದಲ್ಲಿ ತೊಡಗಿದ್ದಾರೆ. ಸ್ಥಳೀಯ ಮೀನುಗಾರರು ತೆಪ್ಪ ತಂದು ಅದರಲ್ಲಿ ಶೋಧಕಾರ್ಯದಲ್ಲಿ ತೊಡಗಿದ್ದಾರೆ. ರಾಜ್ಯದಲ್ಲಿಯೇ ಅತೀ ಉದ್ದದ ಸೇತುವೆಯಾದ ಪಟಗುಪ್ಪ ಸೇತುವೆ ಇತ್ತೀಚೆಗಷ್ಟೇ…

Read More

ರಾಜ್ಯ ಗೃಹಮಂತ್ರಿಗಳ ಸಾಮ್ರಾಜ್ಯದಲ್ಲಿ ಇದೆಂತಹ ಪರಿಸ್ಥಿತಿ…!!

ರಿಪ್ಪನ್‌ಪೇಟೆ: ಕೋಡೂರು ಮತ್ತು ಅಮೃತ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶಾಂತಪುರ – ಗರ್ತಿಕರೆ ಸಂಪರ್ಕಿಸುವ ಸುಮಾರು 10 ಕಿ.ಮೀ.ಉದ್ದದ ಜಿಲ್ಲಾ ಮುಖ್ಯರಸ್ತೆ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಸಾರ್ವಜನಿಕರು, ವಿದ್ಯಾರ್ಥಿಗಳು ಮತ್ತು ರೈತನಾಗರೀಕರು ಓಡಾಡದಂತಾಗಿದ್ದರೂ ಕೂಡಾ ಕ್ಷೇತ್ರದ ಶಾಸಕರು ಹಾಗೂ ರಾಜ್ಯ ಗೃಹ ಸಚಿವರ ಕಣ್ಣಿಗೆ ಇನ್ನೂ ಬಿದ್ದಿಲ್ಲವೊ..! ಎಂಬ ಅನುಮಾನ ಇಲ್ಲಿನ ಜನರನ್ನು ಕಾಡುವಂತಾಗಿದೆ. 1995 ರಲ್ಲಿ ನಬಾರ್ಡ್ ಯೋಜನೆಯಡಿ ಡಾಂಬರೀಕರಣಗೊಂಡ ಶಾಂತಪುರ-ಗರ್ತಿಕೆರೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಹಾಳಾಗಿದ್ದು ರಸ್ತೆಯಲ್ಲಿ ಹೊಂಡಗಳಿದೆಯೋ ಅಥವಾ ಹೊಂಡಗಳಲ್ಲಿ ರಸ್ತೆ…

Read More

ಆಯಾ ತಪ್ಪಿ ಬಿದ್ದು ಐದು ವರ್ಷದ ಮಗು ಸಾವು : ವಿಧಿಯ ಕ್ರೂರತನಕ್ಕೆ ಬಲಿಯಾದ ಪುಟ್ಟ ಕಂದಮ್ಮ

ಸಾಗರ : ಮನೆಯಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಆಯಾ ತಪ್ಪಿ ಬಿದ್ದು ಐದು ವರ್ಷದ ಮಗು ಮೃತಪಟ್ಟಿರುವ ಘಟನೆ ನಗರದಲ್ಲಿ ಶನಿವಾರ ಸಂಜೆ ನಡೆದಿದೆ. ಶನಿವಾರ ಸಂಜೆ ಸುಮಾರು 5-00 ಗಂಟೆಯ ಸುಮಾರಿಗೆ ಸಾಗರ ನಗರಸಭೆ ವ್ಯಾಪ್ತಿಯ ಅಣಲೇಕೊಪ್ಪದಲ್ಲಿ ವಾಸವಾಗಿದ್ದ ಮೂರ್ತಿಹಾಗೂ ರಾಜೇಶ್ವರಿ ದಂಪತಿಯ ಎರಡನೆ ಮಗು ಆಟವಾಡುವಾಗ ಆಯಾ ತಪ್ಪಿ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಕ್ರಿಶಾ (5) ಮೃತಳಾದ ದುರ್ದೈವಿ.  ಮೂರ್ತಿಹಾಗೂ ರಾಜೇಶ್ವರಿ ದಂಪತಿಗಳುಮೂಲತಃ ಸಾಗರ ತಾಲೂಕಿನ ಹೆಗ್ಗೋಡು ಗ್ರಾ.ಪಂ ವ್ಯಾಪ್ತಿಯ ಹೈತೂರಿನ ಕ್ವಾಗೇರಿರವರಗಿದ್ದಾರೆ. ಮೂರ್ತಿ…

Read More

ಸಾಹಿತ್ಯ ಪರಿಷತ್ತಿನ ಸಂಘಟನೆಗೆ ಒತ್ತು ನೀಡಲು ತೀರ್ಮಾನ :

ಹೊಸನಗರ : ಹೊಸನಗರ ತಾಲೂಕಿನಲ್ಲಿ ಸಾಹಿತ್ಯ ಪರಿಷತ್ತಿನ ಸಂಘಟನೆಗೆ ಒತ್ತು ನೀಡಲು ಕಸಾಪ ತಾಲೂಕು ಕಾರ್ಯಕಾರಿ ಸಮಿತಿ ಸರ್ವಾನುಮತದಿಂದ ತೀರ್ಮಾನಿಸಿದೆ. ಜನವರಿ 21 ನೇ ಶುಕ್ರವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ತಾಲೂಕು ಅಧ್ಯಕ್ಷ ತ.ಮ. ನರಸಿಂಹ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಈ ತೀರ್ಮಾನ ಕೈಗೊಂಡಿದೆ.  ಜಿಲ್ಲಾಧ್ಯಕ್ಷ  ಡಿ ಮಂಜುನಾಥ್ ರವರ ನಿರ್ದೇಶನದಂತೆ ಪರಿಷತ್ತಿನ ಸಂಘಟನೆಗೆ ಪೂರಕವಾಗಿ ಹೋಬಳಿ ಸಮಿತಿಗಳ ರಚನೆ, ಮತ್ತು ಸಂಪನ್ಮೂಲ ಕ್ರೂಢೀಕರಣ, ಹಾಗೂ ದತ್ತಿನಿಧಿ ಕಾರ್ಯಕ್ರಮ ಮತ್ತು ಸದಸ್ಯತ್ವ…

Read More