ಮಲೆನಾಡಿಗರ ನಿದ್ರೆಗೆಡಿಸಿರುವ ಮಂಗನ ಖಾಯಿಲೆ :ಇಂದು ಜಿಲ್ಲೆಯಲ್ಲಿ ಎರಡನೇ ಪ್ರಕರಣ ದಾಖಲು
ಆಯನೂರಿನ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರಲ್ಲಿ ಮಂಗನಕಾಯಿಲೆ (ಕೆಎಫ್‌ಡಿ) ಪತ್ತೆಯಾಗಿದೆ. ಇದೇ ತಿಂಗಳಲ್ಲಿ ಕಂಡುಬಂದ ಎರಡನೇ ಪ್ರಕರಣ ಇದಾಗಿದೆ. ಶಾಲೆಯ ಶಿಕ್ಷಕ ರಾಘವೇಂದ್ರ ಅವರಲ್ಲಿ ಸೋಂಕು ಪತ್ತೆಯಾಗಿದ್ದು, ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಒಂದು ವಾರದಿಂದ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹೌದು, ಮಲೆನಾಡಿಗರನ್ನು ಈ ಪರಿ ನಿದ್ದೆಗೆಡುವಂತೆ ಮಾಡಿದೆ ಮಂಗನ ಕಾಯಿಲೆ. ಕ್ಯಾಸನೂರ್ ಡಿಸೀಸ್ ಎಂದೂ ಕರೆಯಲ್ಪಡುವ ಮಂಗನ ಕಾಯಿಲೆ ಈಗಾಗಲೇ ಜಿಲ್ಲೆಯಲ್ಲಿ ಇಬ್ಬರಲ್ಲಿ ಆವರಿಸಿದೆ. ಏನಿದು ಮಂಗನ ಕಾಯಿಲೆ? ಮಂಗನ ಕಾಯಿಲೆ ಕೆ ಎಫ್…