ಮತಾಂತರ ನಿಷೇಧ ಮಸೂದೆ ಜಾರಿಗೆ ತರಲು ಆಗ್ರಹಿಸಿ ಮನವಿ ಸಲ್ಲಿಸಿದ ತೀರ್ಥಹಳ್ಳಿ ಭಜರಂಗದಳದ ಕಾರ್ಯಕರ್ತರು
ತೀರ್ಥಹಳ್ಳಿ : ರಾಜ್ಯದಲ್ಲಿ ಬಲವಂತದ ಮತಾಂತರ ನಡೆಯುತ್ತಿದೆ. ಹಲವಾರು ಕಡೆ ಜನರ ಬಡತನ, ಅನಾರೋಗ್ಯವನ್ನೇ ದುರುಪಯೋಗಪಡಿಸಿ, ಜನರ ಭಾವನೆಯೊಂದಿಗೆ ಆಟವಾಡಿ, ಆಸೆ ಆಮಿಷಗಳನೊಡ್ಡಿ `ಮತಾಂತರದಿಂದ ನಿಮ್ಮ ಮೋಸದ ಪ್ರಚಾರ,ಮಾತಿನ ಮೋಡಿಗಳಿಂದ ಭ್ರಮೆಗೊಳಪಟ್ಟು ಸಮಸ್ಯೆಗಳು ನೀಗುತ್ತವೆ ಎಂದು ಮತಾಂತರಗೊಳಿಸಿ “ಸ್ವಇಚ್ಚೆಯ ಮತಾಂತರ” ಎಂದು ಬಿಂಬಿಸಲಾಗುತ್ತಿದೆ. ಇದರಿಂದ ಸಮಾಜದಲ್ಲಿ ಮತೀಯ ಸಾಮರಸ್ಯಕ್ಕೆ ಧಕ್ಕೆಯಾಗುತ್ತಿದೆ. ಕುಟುಂಬದಲ್ಲಿ ಒಬ್ಬರು ಮತಾಂತರಗೊಂಡರೆ ಕುಟುಂಬದ ಇತರ ವ್ಯಕ್ತಿಗಳ ಧಾರ್ಮಿಕ ಹಕ್ಕಿಗೆ ಧಕ್ಕೆ ಬಂದು ಮನೆಯ ಸದಸ್ಯರು ತೀವ್ರ ಮಾನಸಿಕ ಆಘಾತಕ್ಕೊಳಗಾಗುತ್ತಿರುವುದು ಕಂಡು ಬರುತ್ತಿದ್ದು ಅವರ ಮಾನಸಿಕ…