w
Headlines
Home » ಶವ ಸಾಗಿಸಲು ರಸ್ತೆ ಸಂಪರ್ಕ ಇಲ್ಲದೆ ಮೌನಿಯಾಯಿತೆ ಬಡ ಕುಟುಂಬ ? ಗೌತಮಪುರ ದಲ್ಲೊಂದು ಹೃದಯ ವಿದ್ರಾವಕ ಘಟನೆ!!!

ಶವ ಸಾಗಿಸಲು ರಸ್ತೆ ಸಂಪರ್ಕ ಇಲ್ಲದೆ ಮೌನಿಯಾಯಿತೆ ಬಡ ಕುಟುಂಬ ? ಗೌತಮಪುರ ದಲ್ಲೊಂದು ಹೃದಯ ವಿದ್ರಾವಕ ಘಟನೆ!!!

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರ ಸಮೀಪದ ಗೌತಮಪುರ ಗ್ರಾಮ ಇದೀಗ ಹೃದಯವಿದ್ರಾವಕ ಘಟನೆಗೆ ಸಾಕ್ಷಿಯಾಯಿತು.
ಬಲಿಪಾಡ್ಯಮಿಯ ದಿನ ನಿನ್ನೆ ರಾಜಮ್ಮ 70  ವರ್ಷ ವಯೋ ಸಹಜತೆಯಿಂದ ಸಾವಿಗೀಡಾಗಿದ್ದಾರೆ 
ಸುಮಾರು ಇಪ್ಪತ್ತು ವರ್ಷದಿಂದ ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ರಸ್ತೆ ತಡೆ ಹಾಕಿದ್ದು ನಂತರ  ಗ್ರಾಮಸಭೆಯಲ್ಲಿ ತೀರ್ಮಾನವಾದರೂ  ರಸ್ತೆ ತೆರವುಗೊಳಿಸಲು ಆದೇಶ ನೀಡಿದ್ದರೂ ಗ್ರಾಮಾಡಳಿತವಾಗಲಿ ಅಥವಾ ತಾಲ್ಲೂಕು ಆಡಳಿತವಾಗಲೀ ಈ ಕೆಲಸಕ್ಕೆ ಮುಂದಾಗಲಿಲ್ಲ.

ಇದರ ಪರಿಣಾಮ ರಾಜಮ್ಮ ಮರಣಹೊಂದಿ 24 ಘಂಟೆ ಯಾದರೂ ಕೂಡ ಶವ ಸಾಗಿಸಲು ರಸ್ತೆ ಇಲ್ಲದೆ ಕುಟುಂಬಸ್ಥರು ಇದೀಗ ಕೈಚೆಲ್ಲಿ ಕೂತಿದ್ದಾರೆ.

ಶವ ಇದೀಗ ದುರ್ವಾಸನೆ ಬೀರುವ ಸ್ಥಿತಿಗೆ ಬಂದಿದ್ದು ಶವ ಸಾಗಿಸಲು ಹೇಗಾದರೂ ರಸ್ತೆಯನ್ನು ಮಾಡಿಕೊಡುವಂತೆ ಇದೀಗ ಕುಟುಂಬಸ್ಥರು ಆಡಳಿತ ವರ್ಗಕ್ಕೆ ಕಣ್ಣೀರಿನೊಂದಿಗೆ ಬೇಡುವಂತಹ ಪರಿಸ್ಥಿತಿಗೆ ಬಂದಿದ್ದಾರೆ.

ಪೋಲಿಸ್ ಸುಭದ್ರತೆಯೊಂದಿಗೆ ಇನ್ನಾದರೂ ತಾಲ್ಲೂಕು ಆಡಳಿತ ಹಾಗೂ ಗ್ರಾಮಾಡಳಿತ ಶವ ಸಾಗಿಸಲು ತತ್ತಕ್ಷಣ ರಸ್ತೆ ಸಂಪರ್ಕ ಮಾಡಿಕೊಡಲಿ ಎಂಬುದೇ ನಮ್ಮ ಆಶಯ.



ವರದಿ: ಪವನ್ ಕುಮಾರ್ ಕಠಾರೆ..

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.