w
Headlines
Home » ಅಕಾಲಿಕ ಮಳೆಗೆ ಬ್ಯಾಡರಕೊಪ್ಪದಲ್ಲಿ ಬಿದ್ದ ಮನೆಗೆ ಶಾಸಕ ಹೆಚ್ ಹರತಾಳು ಹಾಲಪ್ಪ ಭೇಟಿ. ತತಕ್ಷಣ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚನೆ !!

ಅಕಾಲಿಕ ಮಳೆಗೆ ಬ್ಯಾಡರಕೊಪ್ಪದಲ್ಲಿ ಬಿದ್ದ ಮನೆಗೆ ಶಾಸಕ ಹೆಚ್ ಹರತಾಳು ಹಾಲಪ್ಪ ಭೇಟಿ. ತತಕ್ಷಣ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚನೆ !!

ರಾಜ್ಯದಲ್ಲಿ ಅಕಾಲಿಕ ಮಳೆಗೆ ಇದೀಗ ರಾಜ್ಯವೇ ತತ್ತರಿಸಿದೆ. ಮಳೆಯ ಅವಾಂತರ ಸೃಷ್ಟಿಸಿದ ಅವಾಂತರ ಒಂದೆರಡಲ್ಲ. 
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಹೊಸೂರು ಗ್ರಾ.ಪಂ ಬ್ಯಾಡರಕೊಪ್ಪದ ಹನುಮಮ್ಮ ರಂಗೇಗೌಡ ಇವರ ಮನೆ ಕುಸಿದು ಹಾನಿಗೊಳಗಾಗಿದ್ದು.ಸಂಪೂರ್ಣ ಕುಟುಂಬವೇ ಪರಿತಪಿಸುವಂತಾಗಿದೆ.
ಘಟನೆಯ ಬಗ್ಗೆ ಮಾಹಿತಿ ತಿಳಿದ ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಹೆಚ್.ಹಾಲಪ್ಪ ನವರು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಸರ್ಕಾರದಿಂದ ಪರಿಹಾರ ಕಲ್ಪಿಸಿಕೊಡುವ ಭರವಸೆ ನೀಡಿದರು.ಕೂಡಲೇ ಸಂಬಂದ ಪಟ್ಟ ಅಧಿಕಾರಿಗಳಿಗೆ ಸ್ಥಳದಿಂದಲೇ ಕರೆ ಮಾಡಿದ ಶಾಸಕರು ಕೂಡಲೇ ಸಂತ್ರಸ್ತ ಕುಟುಂಬಕ್ಕೆ ಸಹಾಯ ಮಾಡುವಂತೆ ತಾಕೀತು ಮಾಡಿದರು.
ಶಾಸಕರ ಸ್ಪಂದನೆ ಜನಸಾಮಾನ್ಯರ ಪ್ರಶಂಸೆಗೆ ಪಾತ್ರವಾಗಿದೆ.
ಈ ಸಂಧರ್ಭದಲ್ಲಿ ಚೇತನರಾಜ್ ಕಣ್ಣೂರು, ಅಡೂರು ದೇವರಾಜ್, ಕೊಟ್ರಪ್ಪ, ಕಾನುಗೋಡು ಗಣಪತಿ, ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.
ವರದಿ : ಪವನ್ ಕುಮಾರ್ ಕಠಾರೆ

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.