w
Headlines
Home » ಸೊರಬ:ವಿದ್ಯುತ್ ತಗುಲಿ ಮಹಿಳೆ ಸಾವು ಪ್ರಕರಣ,ಕುಟುಂಬಕ್ಕೆ ಸಾಂತ್ವಾನ

ಸೊರಬ:ವಿದ್ಯುತ್ ತಗುಲಿ ಮಹಿಳೆ ಸಾವು ಪ್ರಕರಣ,ಕುಟುಂಬಕ್ಕೆ ಸಾಂತ್ವಾನ

ಸೊರಬ: ಆಕಸ್ಮಿಕವಾಗಿ ವಿದ್ಯುತ್ ತಗುಲಿ ಮಹಿಳೆ ಮೃತಪಟ್ಟ ಘಟನೆ ಮಂಗಳವಾರ ಸಂಜೆ ಸಮೀಪದ ಕತ್ವಾಯಿ ಗ್ರಾಮದಲ್ಲಿ ನಡೆದಿತ್ತು.ಇಂದು ಅವರ ಮನೆಗೆ ಬಿಜೆಪಿ ಮುಖಂಡ ಕಡಸೂರು ಶಿವಕುಮಾರ್ ಭೇಟಿ ನೀಡಿ ಸಾಂತ್ವಾನ ಹೇಳಿದರು.
ಕುಟುಂಬದವರಿಗೆ ಸಾಂತ್ವಾನ ಹೇಳಿ ಅವರ ಸಮಸ್ಯೆಗಳಿಗೆ ಸ್ಪಂದಿಸಿದ ಅವರು ಕುಟುಂಬದವರಲ್ಲಿ ಮುಂದಿನ ದಿನಗಳಲ್ಲಿ ಜೊತೆಯಲ್ಲಿರುತ್ತೇವೆ ಎಂದು ಧೈರ್ಯ ತುಂಬಿದರು.
 ಈ ಸಂದರ್ಭದಲ್ಲಿ ಪಂಚಾಯಿತಿ ಸದಸ್ಯರಾದ ಸಲೀಂ, ಮುಖಂಡರಾದ ದಿನೇಶ್ ಹೆಚ್ ನಾಯ್ಕ, ಕನದಾಸ ಕಲ್ಲಂಬಿ, ಪಕ್ಕೀರಪ್ಪ ದ್ಯಾಮಪ್ಪ ಆನಂದಣ್ಣ ಮತ್ತಿತರರು ಇದ್ದರು.

ಮಂಗಳವಾರ ನಡೆದಿತ್ತು ಭೀಕರ ಅವಘಡ

ತಾಲೂಕಿನ ಚಂದ್ರಗುತ್ತಿ ಹೋಬಳಿಯ ಕತ್ವಾಯಿ ಗ್ರಾಮದ ಸುಜಾತ (40) ಮೃತಪಟ್ಟ ದುರ್ದೈವಿಯಾಗಿದ್ದು, ಗ್ರಾಮ ಪಂಚಾಯಿತಿಯ ಕುಡಿಯುವ ನೀರಿನ ವಿದ್ಯುತ್ ಸಂಪರ್ಕದ ಬೋರ್ಡನ್ನು ಜಮೀನಿನ ರಕ್ಷಣೆಗೆ ಹಾಕಿದ ತಂತಿಬೇಲಿಯ ಹತ್ತಿರ ಅಳವಡಿಸಿದ್ದು, ಬೋರ್ಡಿನಿಂದ ವಿದ್ಯುತ್ ತಂತಿ ಬೇಲಿಗೆ ಪಸರಿಸಿದ ಪರಿಣಾಮ ಅದೇ ಮಾರ್ಗದಲ್ಲಿ ಮಹಿಳೆ ಕಾಲು ದಾರಿಯಲ್ಲಿ ನಡೆದುಕೊಂಡು ಹೋಗುವಾಗ ವಿದ್ಯುತ್ ತಗುಲಿ ಸ್ಥಳದಲ್ಲಿಯೇ ಸಾವನಪ್ಪಿದ್ದರು.




ವರದಿ : ವೆಂಕಟೇಶ್ ಸೊರಬ

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.