w
Headlines
Home » ತೀರ್ಥಹಳ್ಳಿ: ನವವಿವಾಹಿತೆಯನ್ನು ಬಲಿ ತೆಗೆದುಕೊಂಡ ನಾಯಿ ಚೈನ್…! ವಾಕಿಂಗ್ ವೇಳೆ ಆಕಸ್ಮಿಕವಾಗಿ ಕೆರೆಗೆ ಬಿದ್ದು ಸಾವು

ತೀರ್ಥಹಳ್ಳಿ: ನವವಿವಾಹಿತೆಯನ್ನು ಬಲಿ ತೆಗೆದುಕೊಂಡ ನಾಯಿ ಚೈನ್…! ವಾಕಿಂಗ್ ವೇಳೆ ಆಕಸ್ಮಿಕವಾಗಿ ಕೆರೆಗೆ ಬಿದ್ದು ಸಾವು

ತೀರ್ಥಹಳ್ಳಿ: ಸಾಕುನಾಯಿಯನ್ನು ಕರೆದುಕೊಂಡು ವಾಯುವಿಹಾರಕ್ಕೆ ಹೋಗಿದ್ದ ವೇಳೆ ಆಕಸ್ಮಿಕವಾಗಿ ನವ ವಿವಾಹಿತೆಯೊಬ್ಬಳು ಕೆರೆಗೆ  ಬಿದ್ದು ಸಾವನ್ನಪ್ಪಿದ ಘಟನೆ ತೀರ್ಥಹಳ್ಳಿ ತಾಲೂಕು ಕೈಮರದಲ್ಲಿ ನಡೆದಿದೆ.

ನಿಶ್ಮಿತಾ(26) ಮೃತ ವಿವಾಹಿತೆ.ತೀರ್ಥಹಳ್ಳಿಯ ಕೈಮರದ ನಾಗಪ್ಪ ಗೌಡ ಅವರ ಪುತ್ರ ಮಂಜುನಾಥ್ ಅವರ ಪತ್ನಿ ನಿಶ್ಮಿತಾ ಮೂಲತಃ ಹೊಸನಗರ ತಾಲೂಕು ಹುಲಿಕಲ್ ಗ್ರಾಮದವರು. ಕಳೆದ 3 ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು.

ಶನಿವಾರ ಬೆಳಿಗ್ಗೆ ಸಾಕುನಾಯಿಯನ್ನು ಕರೆದುಕೊಂಡು ವಾಯು ವಿಹಾರಕ್ಕೆ ಹೋಗಿದ್ದಾಳೆ. ಈ ವೇಳೆ ಕರೆದಂಡೆ ಮೇಲೆ ಹೋಗುವಾಗ ನಾಯಿ ಚೈನ್ ಎಳೆದು ಓಡಿದೆ. ಆಗ ಆಕಸ್ಮಿಕವಾಗಿ ಕೆರೆಗೆ ಜಾರಿ ಬಿದ್ದಿದ್ದಾಳೆ.ಆಯತಪ್ಪಿ ಬಿದ್ದ ಪರಿಣಾಮ ಮೃತಪಟ್ಟಿರುವ ಸಾಧ್ಯತೆ ಇದೆ.

ಶನಿವಾರ ವಾಕಿಂಗ್ ಹೋಗಿದ್ದ ನಿಶ್ಮಿತ ಮನೆಗೆ ಹಿಂದಿರುಗಿ ಬರದೇ ಇದ್ದಿದ್ದನ್ನು ಮನಗಂಡ ಮನೆಯವರು ತಡರಾತ್ರಿವರೆಗೂ ಸಂಬಂಧಿಕರ ಮನೆಯಲ್ಲಿ ಹುಡುಕಿದರೂ ಸಿಕ್ಕಿರಲಿಲ್ಲ.ಭಾನುವಾರ ನಿಶ್ಮಿತಳ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ.


ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

 

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.