
ಬಸ್ ಪಲ್ಟಿ – ಹಲವು ಪ್ರಯಾಣಿಕರಿಗೆ ಗಂಭೀರ ಗಾಯ
ಬಸ್ ಪಲ್ಟಿ – ಹಲವು ಪ್ರಯಾಣಿಕರಿಗೆ ಗಂಭೀರ ಗಾಯ ಸಿಟಿ ಬಸ್ ಪಲ್ಟಿಯಾಗಿ ಬಿದ್ದ ಪರಿಣಾಮ 20 ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ವಿನೋಬನಗರದ ಪಿ ಆಂಡ್ ಟಿ ಕಾಲೋನಿಯಲ್ಲಿ ನಡೆದಿದೆ. ವಿರಭದ್ರೇಶ್ವರ ಹೆಸರಿನ ಸಿಟಿ ಬಸ್, ಬೊಮ್ಮನಕಟ್ಟೆ ಕಡೆಗೆ ಪ್ರಯಾಣಿಸುತ್ತಿತ್ತು. ಈ ವೇಳೆ ಪಿ ಆಂಡ್ ಟಿ ಕಾಲೋನಿಯಲ್ಲಿ ರಸ್ತೆ ತಿರುವಿನಲ್ಲಿ ಬಸ್ ಪಲ್ಟಿಯಾಗಿ ಬಿದ್ದಿದೆ. ಚಾಲಕನ ನಿಯಂತ್ರಣತಪ್ಪಿ ಬಸ್ ಪಲ್ಟಿಯಾಗಿದ್ದು, ಬಸ್ ನಲ್ಲಿದ್ದ ನಾಲ್ವರು ವಿದ್ಯಾರ್ಥಿಗಳು ಸೇರಿದಂತೆ 20 ಜನರು ಗಾಯಗೊಂಡಿದ್ದಾರೆ….