RIPPONPETE | ಏನಾದರೂ ನಾ ತೆಗೆಯಲ್ಲ – ಹಾಗಾದರೇ ನಾನು ಬಿಡೋ ಪ್ರಶ್ನೆನೇ ಇಲ್ಲಾ  | ಇದು ತಹಶೀಲ್ದಾರ್ ರಶ್ಮಿ ಖಡಕ್ ಕಾರ್ಯಾಚರಣೆ ಶೈಲಿ

ಏನಾದರೂ ನಾ ತೆಗೆಯಲ್ಲ – ಹಾಗಾದರೇ ನಾನು ಬಿಡೋ ಪ್ರಶ್ನೆನೇ ಇಲ್ಲಾ  | ಇದು ತಹಶೀಲ್ದಾರ್ ರಶ್ಮಿ ಖಡಕ್ ಕಾರ್ಯಾಚರಣೆ ಶೈಲಿ

ರಿಪ್ಪನ್‌ಪೇಟೆ ಪಟ್ಟಣದ ಬಹುದಿನಗಳ ಬೇಡಿಕೆಯ ರಸ್ತೆ ಅಗಲೀಕರಣ ಕಾಮಗಾರಿಗೆ ಅಡ್ಡಿಯಾಗಿದ್ದ ಸಾಗರ ರಸ್ತೆಯ ಖಾಸಗಿ ಕಟ್ಟಡವನ್ನು ಹೊಸನಗರ ತಹಶೀಲ್ದಾರ್ ರಶ್ಮಿ ಹಾಲೇಶ್ ನೇತ್ರತ್ವದಲ್ಲಿ ದಿಡೀರ್  ತೆರವುಗೊಳಿಸುವ ಕಾರ್ಯಾಚರಣೆ ಕೈಗೊಳ್ಳುವ ಮೂಲಕ ಕಟ್ಟಡದ ಮಾಲೀಕರಿಗೆ ಶಾಕ್ ನೀಡಿದ್ದಾರೆ.

ಕಳೆದ ಒಂದು ವರ್ಷದಿಂದ ಈ ಅನಧೀಕೃತ ಕಟ್ಟಡದಿಂದಾಗಿ ದ್ವಿಪಥ ರಸ್ತೆ ಕಾಮಗಾರಿ ಸ್ಥಗಿತಗೊಂಡು ಸಾರ್ವಜನಿಕರು ಪರದಾಡುವ ಸ್ಥಿತಿ ಎದುರಾಗಿತ್ತು ಈ ಬಗ್ಗೆ ಪೋಸ್ಟ್ ಮ್ಯಾನ್ ನ್ಯೂಸ್ ನಲ್ಲಿ ವಿಸ್ಕೃತವಾದ ಸರಣಿ ವರದಿ ಪ್ರಸಾರ ಮಾಡಲಾಗಿತ್ತು ಆದರೆ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಜಾಣಕಿವುಡುತನ ಪ್ರದರ್ಶಿಸುತ್ತಾ ಕಟ್ಟಡ ಮಾಲೀಕನ ಋಣಭಾರ ತೀರಿಸುತಿತ್ತು.

ಇದಕ್ಕೆ ಸಂಬಂಧಪಟ್ಟಂತೆ ರಿಪ್ಪನ್‌ಪೇಟೆ ಗ್ರಾಪಂ ಮಾಜಿ ಉಪಾಧ್ಯಕ್ಷ ರವೀಂದ್ರ ಕೆರೆಹಳ್ಳಿ ಅರ್ಜಿಯ ಮೇರೆಗೆ ಹಿಂದಿನ ಗ್ರಾಪಂ ಪಿಡಿಓ ಮಧುಸೂಧನ್ ವಿಶೇಷ ಕಾಳಜಿ ವಹಿಸಿ ಜಾಗಕ್ಕೆ ಸಂಬಂಧಿಸಿದ 9-11 ಅನುಮತಿಯನ್ನು ರದ್ದುಪಡಿಸಲು ಸಂಬಂಧಿಸಿದ ಇಲಾಖೆಗೆ ಪತ್ರ ಬರೆದಿದ್ದರು ಇದರನ್ವಯ ಈ ಕಟ್ಟಡದ 9-11 ವಜಾಗೊಳಿಸಲಾಗಿತ್ತು.ಆ ನಂತರದಲ್ಲಿ ಕಟ್ಟಡದ ಮಾಲೀಕ ಕೋರ್ಟ್ ಸ್ಟೇ ತಂದಿದ್ದೇನೆ ಎಂದು ಬೆದರಿಸುತ್ತಾ ಕಟ್ಟಡ ತೆರವು ಕಾರ್ಯಾಚರಣೆ ಒಂದು ವರ್ಷದವರೆಗೂ ಮುಂದುವರೆಯಿತು.

ಶಾಸಕ ಬೇಳೂರು ಗೋಪಾಲಕೃಷ್ಣ ರವರ ಸೂಚನೆ ಮೇರೆಗೆ ಇಂದು ಸ್ಥಳಕ್ಕಾಗಮಿಸಿದ ತಹಶೀಲ್ದಾರ್ ರಶ್ಮಿ ಹಾಲೇಶ್ ಯಾವ ಬೆದರಿಕೆಗಳಿಗೂ ಬಗ್ಗದೇ ಸ್ಥಳೀಯ ಠಾಣಾಧಿಕಾರಿ ಪ್ರವೀಣ್ ಎಸ್ ಪಿ ಸಹಕಾರದೊಂದಿಗೆ ಕಟ್ಟಡವನ್ನು ತೆರವುಗೊಳಿಸಲು ಮುಂದಾಗಿದ್ದಾರೆ.

ಇಂದು ಸಂಜೆ ಕಟ್ಟಡ ತೆರವು ಕಾರ್ಯಾಚರಣೆ ಸಂಧರ್ಭದಲ್ಲಿ ಕಟ್ಟಡದ ಮಾಲೀಕರು ಹೈಡ್ರಾಮ‌ ನಡೆಸಿದ್ದಾರೆ ಅಂಗಡಿಗೆ ಸಂಬಂಧಿಸಿದ ಕೆಲವೊಂದು ವಸ್ತುಗಳನ್ನು ತೆಗೆಯದೇ ಪಟ್ಟು ಹಿಡಿದಿದ್ದಾರೆ ಈ ಸಂಧರ್ಭದಲ್ಲಿ ಮಾತಿನ ಚಕಮಕಿ‌ ಕೂಡಾ ನಡೆದಿದೆ.ಒಂದು ಹಂತದ ಕಾರ್ಯಾಚರಣೆ ನಡೆಸಿ ಸ್ವಲ್ಪ ಕಾಲವಕಾಶ ನೀಡಿದ ತಹಶೀಲ್ದಾರ್ ರಶ್ಮಿ ಮತ್ತೆ ರಾತ್ರಿ 8 ಗಂಟೆಗೆ ಪುನಃ ಕಾರ್ಯಾಚರಣೆ ಕೈಗೊಂಡಿದ್ದಾರೆ.

ರಸ್ತೆ ಅಗಲೀಕರಣದಿಂದಾಗಿ ಶಾಲಾ, ಕಾಲೇಜ್ ಸೇರಿದಂತೆ ಸಾರ್ವಜನಿಕರು ಮಳೆಗಾಲದಲ್ಲಿ ಕಲುಷಿತ ನೀರಿನ ಅಭೀಷೇಕ ಮಾಡಿಕೊಳ್ಳುವ ಸ್ಥಿತಿ, ಈಗ ಬೇಸಿಗೆ ಕಾಲದ ಕಾರಣ ದೂಳು ತುಂಬಿ ವಾತಾವರಣ ಕಲುಷಿತಗೊಂಡು ಉಸಿರಾಟಕ್ಕೂ ತೊಂದರೆಯಾಗುವಂತಾಗಿದ್ದು ಸಾಕಷ್ಟು ದ್ವಿಚಕ್ರ ವಾಹನ ಸವಾರರು ಭಾರಿ ವಾಹನಗಳು ಹಿಂದೆ ದೂಳಿನ ಕಾರಣ ಕಣ್ಣು ಕಾಣದಂತಾಗಿ ಅಪಘಾತಗಳು ಸಂಭವಿಸಿರುವ ಘಟನೆಗಳು ನಡೆದಿದ್ದು ಈ ಬಗ್ಗೆ ತಹಶೀಲ್ದಾರ್ ರಶ್ಮಿ ಹಾಲೇಶ್ ನೇತೃತ್ವದಲ್ಲಿ ಕಾಮಗಾರಿಗೆ ಅಡ್ಡಿಯಾಗಿರುವ ಅನಧಿಕೃತ ಕಟ್ಟಡವನ್ನು ತೆರವುಗೊಳಿಸುವ ಕಾರ್ಯಾಚರಣೆಗೆ ಮುಂದಾಗಿ ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದ್ದಾರೆ.

ಒಟ್ಟಾರೆಯಾಗಿ ಚರಂಡಿಯಿಂದ 5 ಅಡಿಯಷ್ಟು ಕಟ್ಟಡವನ್ನು ತೆರವುಗೊಳಿಸುವ ಮೂಲಕ ಸುಂದರ ರಿಪ್ಪನ್‌ಪೇಟೆ ಪಟ್ಟಣ ಕಟ್ಟುವುದಕ್ಕೆ ಮುನ್ನುಡಿ ಬರೆದಿದ್ದು ಎಲ್ಲಾ ರಸ್ತೆಗಳಲ್ಲೂ ಪುಟ್ ಪಾತ್ ಗೆ 5 ಅಡಿ ಸಿಕ್ಕರೆ ಮುಂದಿನ ಹಲವಾರು ವರ್ಷದವರೆಗೂ ಯಾವುದೇ ಪಟ್ಟಣದಲ್ಲಿ ಪಾರ್ಕಿಂಗ್ ಸಮಸ್ಯೆ ಉದ್ಬವಿಸುವುದಿಲ್ಲ ಎನ್ನಬಹುದಾಗಿದೆ.

ರಿಪ್ಪನ್‌ಪೇಟೆ ಪಟ್ಟಣದ ಬಹುದಿನಗಳ ಜ್ವಲಂತ ಸಮಸ್ಯೆಯನ್ನು ದಿಡೀರ್ ಕಾರ್ಯಾಚರಣೆ ನಡೆಸುವ ಮೂಲಕ ಯಾವುದೇ ಆಮಿಷ ,ಬೆದರಿಕೆಗಳಿಗೆ ಬಗ್ಗದೇ ತನ್ನದೇ ಧಾಟಿಯಲ್ಲಿ ಅಧಿಕಾರವನ್ನು ಜನೋಪಯೋಗಿ‌ ಕೆಲಸಕ್ಕೆ ಬಳಸಿಕೊಂಡ ಖಡಕ್ ತಹಶೀಲ್ದಾರ್ ರಶ್ಮಿ ಹಾಲೇಶ್ ರವರಿಗೆ ಪೋಸ್ಟ್ ಮ್ಯಾನ್ ನ್ಯೂಸ್ ಸಂಸ್ಥೆಯ ವತಿಯಿಂದ ವಿಶೇಷ ಅಭಿನಂದನೆಗಳು…..

ಕೊನೆಯಲ್ಲಿ ಸ್ವಾರ್ಥ, ಮೋಸದ ಹುಯಿಲು ಪತ್ರಕ್ಕಿಂತ ನಮ್ಮ ಸಂವಿಧಾನದ ಅಡಿಯಲ್ಲಿ ರಚನೆಯಾಗಿರುವ ಕಾನೂನಿಗೆ ಹೆಚ್ಚು ಪ್ರಾಶಸ್ತ್ಯ…..

Leave a Reply

Your email address will not be published. Required fields are marked *