Headlines

ಈದ್ಗಾ ಮೈದಾನಕ್ಕೆ ಬೇಲಿ – ಸ್ಥಳದಲ್ಲಿ ಬಿಗುವಿನ ವಾತಾವರಣ | ಎಸ್ ಪಿ ಮಿಥುನ್ ಕುಮಾರ್ ಮಧ್ಯಸ್ಥಿಕೆಯಿಂದ ತಿಳಿಗೊಂಡ ಪರಿಸ್ಥಿತಿ

SHIVAMOGGA | ಈದ್ಗಾ ಮೈದಾನಕ್ಕೆ ಬೇಲಿ – ಸ್ಥಳದಲ್ಲಿ ಬಿಗುವಿನ ವಾತಾವರಣ | ಎಸ್ ಪಿ ಮಿಥುನ್ ಕುಮಾರ್ ಮಧ್ಯಸ್ಥಿಕೆಯಿಂದ ತಿಳಿಗೊಂಡ ಪರಿಸ್ಥಿತಿ

ಶಿವಮೊಗ್ಗ : ಜಿಲ್ಲಾಧಿಕಾರಿ ಕಚೇರಿ ಮುಂದಿನ ಮೈದಾನದ ವಿವಾದ ಮತ್ತೆ ಮುನ್ನೆಲೆಗೆ ಬಂದಿದ್ದು, ಇಲ್ಲಿನ ಈದ್ಗಾ ಮೈದಾನದಲ್ಲಿ ಹಿಂದೂ ಕಾರ್ಯಕರತರು ಹಾಗೂ ಪೊಲೀಸರು ನಡುವೆ ಮಾತಿನ ಚಕಮಕಿ ನಡೆದಿದ್ದು ಬಿಗುವಿನ ವಾತಾವರಣ ನಿರ್ಮಾಣಗೊಂಡಿದೆ.

ರಂಜಾನ್‌ ಪ್ರಾರ್ಥನೆ ನಂತರ ವಿವಾದಿತ ಮೈದಾನಕ್ಕೆ ಬೇಲಿ ಹಾಕಲಾಗಿದ್ದು, ಸಾರ್ವಜನಿಕ ಸ್ಥಳದಲ್ಲಿ ಬೇಲಿ ಹಾಕಿದ್ದು ಯಾರು ಎಂದು ಬೇಲಿ ಹಾಕಿರೋದನ್ನ ಖಂಡಿಸಿ ಹಿಂದೂಪರ ಹೋರಾಟಗಾರ ಆಕ್ರೋಶ ಹೊರಹಾಕಿದ್ದಾರೆ.

ಕೂಡಲೇ ಬೇಲಿ ತಗೆಯುವಂತೆ ಹಿಂದೂಪರ ಹೋರಾಟಗಾರರು ಸ್ಥಳದಲ್ಲಿ ಧರಣಿ ಕುಳಿತು ಸಾರ್ವಜನಿಕರ ಆಸ್ತಿಯನ್ನು ಕಬಳಿಸುತ್ತಿರುವ ಗುಂಡಾಗಳು ಎಂದು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.

ಈದ್ಗಾ ಮೈದಾನದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಳ್ಳುತ್ತಿದ್ದಂತೆ ಸ್ಥಳಕ್ಕೆ ಎಸ್ಪಿ ಮಿಥುನ್ ಕುಮಾರ್ ದೌಡಾಯಿಸಿ ಪ್ರತಿಭಟನಾಕಾರರ ಜೊತೆ ಮಾತುಕತೆ ನಡೆಸಿದ್ದಾರೆ ಈ ವೇಳೆ ಪ್ರತಿಭಟನಾಕಾರರು ಬೇಲಿ ತೆರವು ಮಾಡುವ ವರೆಗೆ ಧರಣಿ ಮಾಡುವುದನ್ನ ನಿಲ್ಲಿಸಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಬಳಿಕ ಪ್ರತಿಭಟನಾಕಾರರ ಮನವೊಲಿಸಿ ಸಂಜೆ 7-30 ರ ಒಳಗೆ ಬೇಲಿ ತಗೆಸುತ್ತೇವೆ ಅಲ್ಲಿಯ ವರೆಗೆ ಅವಕಾಶ ನೀಡುವಂತೆ ಪ್ರತಿಭಟನಾಕಾರರಲ್ಲಿ ಎಸ್ಪಿ ಮನವಿ ಮಾಡಿದ್ದು, ಎಸ್ಪಿ ಮನವಿಗೆ ಮಣಿದು ಹಿಂದೂಪರ ಮುಖಂಡರು ಪ್ರತಿಭಟನೆಯನ್ನು ಕೈ ಬಿಟ್ಟಿದ್ದಾರೆ.

ಮುನ್ನೇಚ್ಚರಿಕಾ ಕ್ರಮವಾಗಿ ಈದ್ಗಾ ಮೈದಾನದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

Leave a Reply

Your email address will not be published. Required fields are marked *