Headlines

ರಿಪ್ಪನ್‌ಪೇಟೆ – ಭಕ್ತವೃಂದದಿಂದ ತ್ರಿವಿಧ ದಾಸೋಹಿ ಶ್ರೀಗಳ 118 ನೇ ಜನ್ಮ ದಿನಾಚರಣೆ

ರಿಪ್ಪನ್‌ಪೇಟೆ – ಭಕ್ತವೃಂದದಿಂದ ತ್ರಿವಿಧ ದಾಸೋಹಿ ಶ್ರೀಗಳ 118 ನೇ ಜನ್ಮ ದಿನಾಚರಣೆ

ರಿಪ್ಪನ್‌ಪೇಟೆ : ತ್ರಿವಿಧ ದಾಸೋಹಿ ,ಶತಾಯಿಷಿ ಕಾಯಕಯೋಗಿ ದಿವಂಗತ ಡಾ.ಶಿವಕುಮಾರ ಮಹಾಸ್ವಾಮಿಗಳ ೧೧೮ ನೇ ವರ್ಷದ ಜನ್ಮ ದಿನಾಚರಣೆಯನ್ನು ಸಂಭ್ರಮ ಸಡಗರದೊಂದಿಗೆ ಆಚರಿಸಲಾಯಿತು.

ರಿಪ್ಪನ್‌ಪೇಟೆ ಭಕ್ತ ಬಳಗದವರು ಇಲ್ಲಿನ  ಗ್ರಾಮ ಪಂಚಾಯ್ತಿ ಸಭಾಭವನದಲ್ಲಿ ಡಾ.ಶಿವಕುಮಾರ ಮಹಾಸ್ವಾಮಿಗಳ ೧೧೮ ನೇ ವರ್ಷದ ಜನ್ಮ ದಿನಾಚರಣೆಯಲ್ಲಿ ಶ್ರೀಗಳವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ನುಡಿ ಸೇವೆ ಸಲ್ಲಿಸಿದರು.

ಸಾಗರ ನಗರ ಸಭೆಯ ನಿವೃತ್ತ ಸಮುದಾಯ ಸಂಘಟನಾಧಿಕಾರಿ ಎಂ.ಜಿ. ಹಬೀಬ್ ಮಾತನಾಡಿ ಬಸವೇಶ್ವರ ನಿಜವಾದ ಪ್ರತಿಪಾದಕ ಸಿದ್ದಗಾಂಗಾ ಶ್ರೀಗಳು.ಅನ್ನ ಅಕ್ಷರ ಆಶ್ರಯದಂತ ತ್ರಿವಿಧ ದಾಸೋಹವನ್ನು ಯಾವುದೇ ಜಾತಿ ಧರ್ಮಗಳ ಬೇದವಿಲ್ಲದೇ ಪ್ರತಿ ವರ್ಗಗಳಿಗೆ ದಾರೆ ಎರೆದ ನಡೆದಾಡುವ ದೇವರಾಗಿ ಜನಸಾಮಾನ್ಯರಿಗೆ ಹತ್ತಿರವಾದವರು ಇವ ನಾರವ……. ಇವ ನಮ್ಮವ ಎನ್ನುವ ಬಸವೇಶ್ವರರ ನುಡಿಯನ್ನು ಅಕ್ಷರ ಸಹ ಪಾಲಿಸಿದವರು ಇಂತಹ ಮಹನೀಯರ ಜನ್ಮ ದಿನೋತ್ಸವವನ್ನು ಆಚರಿಸುತ್ತಿರುವುದು ಹೆಮ್ಮಯ ಸಂಗತಿಯಾಗಿದೆ ಎಂದರು.

ಜಿಲ್ಲಾ ಸಂಚಾಲಕ ಹಾಗೂ ರಂಗ ಕರ್ಮಿ ಡಾ.ಗಣೇಶ್ ಆರ್.ಕೆಂಚನಾಲ ಮಾತನಾಡಿ ಕಾವಿ ತೊಟ್ಟ ಕೆಲ ಸ್ವಾಮೀಜಿಗಳು ಕೇವಲ ತಮ್ಮ ಸ್ವಜಾತಿಗೆ ಸೀಮಿತವಾದ ಹಾಗೂ ರಾಜಕೀಯ ಪಕ್ಷಗಳ ವಕ್ತಾರರಂತೆ ಕಾಣುವ ಈ ಹೊತ್ತಲ್ಲಿ. ಯಾವುದೇ ಜಾತಿ ಮತ ಭೇದವಿಲ್ಲದೆ ಎಲ್ಲರಿಗೂ ಸಮಾನವಾಗಿ ಶಿಕ್ಷಣ ನೀಡಿ ಸಮಾನತೆಯ ಸಾರವನ್ನು ಸಾರಿದವರು ಹಾಗು ಕಾವಿ ಒಟ್ಟೆಗೆ ಇಡೀ ವಿಶ್ವದಲ್ಲಿ ಗೌರವ ತಂದುಕೊಟ್ಟವರಲ್ಲಿ ಮೊದಲಿಗರು ಸಿದ್ದಗಂಗಾ ಶ್ರೀಗಳು ಎಂದರು.

ಶ್ರೀಗಳ ಭಕ್ತ ಬಳಗದ ಅಧ್ಯಕ್ಷ ಕಗ್ಗಲಿ ಲಿಂಗಪ್ಪ ಆಧ್ಯಕ್ಷತೆ ವಹಿಸಿದ್ದರು.

ಧನಲಕ್ಷಿ, ಟಿ.ಆರ್.ಕೃಷ್ಣಪ್ಪ, ಜೆ.ಎಸ್.ಚಂದ್ರಪ್ಪ, ಎಂ.ಎಸ್.ಉಮೇಶ್, ಎಂ.ವೈ.ನಾಗರಾಜ್, ಲೀಲಾ ಶಂಕರ್, ಜೆ.ಜಿ.ಸದಾನಂದ ಜಂಬಳ್ಳಿ, ಸತೀಶ ಹೆಗಡೆ ಆರ್.ಡಿ.ಶೀಲಾ,ಆರ್.ರಾಘವೇಂದ್ರ,   ಇನ್ನಿತರರು ಮಾತನಾಡಿದರು.

ಸೋಮಶೇಖರ ದೂನ ಸ್ವಾಗತಿಸಿದರು ನಂತರ ಚಿಗುರು ಶ್ರೀಧರ್ ವಂದಿಸಿದರು.

Leave a Reply

Your email address will not be published. Required fields are marked *