
ಪೆಟ್ರೋಲ್ ಹಾಕುತ್ತಿದ್ದಂತೆಯೇ ಹೊತ್ತಿ ಉರಿದ ಕಾರು- ಐವರು ಬಚಾವ್
ಪೆಟ್ರೋಲ್ ಹಾಕುತ್ತಿದ್ದಂತೆಯೇ ಹೊತ್ತಿ ಉರಿದ ಕಾರು- ಐವರು ಬಚಾವ್ ಪೆಟ್ರೋಲ್ ಹಾಕುವ ಸಂದರ್ಭದಲ್ಲಿ ಕಾರಿಗೆ ಬೆಂಕಿ ಹೊತ್ತಿಕೊಂಡ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ತೀರ್ಥಹಳ್ಳಿ ರಸ್ತೆಯ ಹೊನ್ನಾಪುರ ಗ್ರಾಮದ ಬಳಿ ನಡೆದಿದೆ. ಮಹಮ್ಮದ್ ಸನಾವುಲ್ಲಾ ಎಂಬವರಿಗೆ ಸೇರಿದ ಓಮ್ನಿ ಕಾರು ಬೆಂಕಿಗಾಹುತಿಯಾಗಿದೆ. ಕಾರಿನಲ್ಲಿದ್ದ ಐವರು ಭಾರೀ ಅಪಾಯದಿಂದ ಪಾರಾಗಿದ್ದಾರೆ. ಮಹಮ್ಮದ್ ಸನಾವುಲ್ಲಾ ಅವರು ಮಂಗಳೂರಿನ ಆಸ್ಪತ್ರೆಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದರು. ಈ ವೇಳೆ ಕಾರಿನಲ್ಲಿ ಪೆಟ್ರೋಲ್ ಖಾಲಿಯಾಗಿದ್ದು, ಹೀಗಾಗಿ ಪೆಟ್ರೋಲ್ ಹಾಕುವ ವೇಳೆ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆಯೇ…