Headlines

ಟಾರ್ಪಲ್ ಶೆಡ್ ನಲ್ಲಿ ಬೆಳೆದು ವಿಶ್ವಕಪ್ ಗೆ ಮುತ್ತಿಕ್ಕಿದ ಬಡ ಪ್ರತಿಭೆಗೆ ಬೇಕು ನಿಮ್ಮೆಲ್ಲರ ಆರ್ಥಿಕ ನೆರವು

ವಿಶ್ವಕಪ್ ವಿಜೇತ ಕಾವ್ಯಾಳಿಗೆ ಬೇಕಿಲ್ಲ ಹಾರ ತುರಾಯಿ – ಟಾರ್ಪಲ್ ಶೆಡ್ ನಲ್ಲಿ ಬೆಳೆದು ವಿಶ್ವಕಪ್ ಗೆ ಮುತ್ತಿಕ್ಕಿದ ಬಡ ಪ್ರತಿಭೆಗೆ ಬೇಕು ನಿಮ್ಮೆಲ್ಲರ ಆರ್ಥಿಕ ನೆರವು ಟಿ–20 ಅಂಧರ ವಿಶ್ವಕಪ್‌ನಲ್ಲಿ ಭಾರತದ ಹೆಮ್ಮೆ ಹೆಚ್ಚಿಸಿದ ಮಹಿಳಾ ತಂಡದಲ್ಲಿ ರಿಪ್ಪನ್‌ಪೇಟೆಯ ಕಾವ್ಯಾ.ವಿ ಎಂಬ ಹೆಸರಿದೆ—ಆದರೆ ಆ ಹೆಸರಿನ ಹಿಂದೆ ಅಡಗಿರುವ ಬದುಕಿನ ನೋವು, ಹೋರಾಟ, ಕನಸುಗಳ ಕಥೆ ಯಾರಿಗೂ ಕಾಣುವುದಿಲ್ಲ. ದೇಶಕ್ಕೆ ವಿಶ್ವಕಪ್‌ ಗೆಲುವು ತಂದುಕೊಟ್ಟ ಈ ಯುವತಿಯ ಕಣ್ಣುಗಳಲ್ಲಿ ಇಂದಿಗೂ “ಮನೆ ಹಾಗೂ ಜೀವನ ಹೇಗೆ…

Read More

ಬ್ಯಾಂಕ್–ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಕಡ್ಡಾಯವಾಗಲಿ : ರೂಪೇಶ್ ರಾಜಣ್ಣ

ಬ್ಯಾಂಕ್–ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಕಡ್ಡಾಯವಾಗಲಿ : ರೂಪೇಶ್ ರಾಜಣ್ಣ ಕಲಾ ಕೌಸ್ತುಭ ಕನ್ನಡ ರಾಜೋತ್ಸವದ ಸಮಾರೋಪ ಸಮಾರಂಭ ರಿಪ್ಪನ್‌ಪೇಟೆ: “ಕನ್ನಡ ನಮ್ಮ ಮಾತೃಭಾಷೆ ಮಾತ್ರವಲ್ಲ, ಭಾವನೆಗಳ ಅಭಿವ್ಯಕ್ತಿ. ಎರಡು ಸಾವಿರ ವರ್ಷಗಳ ಪಾರಂಪರ್ಯ ಹೊಂದಿರುವ ನಮ್ಮ ಕನ್ನಡ ಭಾಷೆ ಅತ್ಯಂತ ಪುರಾತನ,” ಎಂದು ರಾಜ್ಯ ಯುವ ಕರ್ನಾಟಕ ವೇದಿಕೆಯ ಸಂಸ್ಥಾಪಕ-ರಾಜ್ಯಾಧ್ಯಕ್ಷ ಹಾಗೂ ಕನ್ನಡಪರ ಹೋರಾಟಗಾರ, ಬಿಗ್ ಬಾಸ್ 9 ಫೈನಲಿಸ್ಟ್ ರೂಪೇಶ್ ರಾಜಣ್ಣ ಹೇಳಿದ್ದಾರೆ. ಕಲಾಕೌಸ್ತುಭ ಕನ್ನಡ ಸಂಘದ 32ನೇ ವಾರ್ಷಿಕೋತ್ಸವ ಹಾಗೂ 70ನೇ ಕನ್ನಡ ರಾಜ್ಯೋತ್ಸವ…

Read More

ವಿಶ್ವಕಪ್ ವಿಜೇತ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ಮುಖ್ಯಮಂತ್ರಿ ಅಭಿನಂದನೆ

ವಿಶ್ವಕಪ್ ವಿಜೇತ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ಮುಖ್ಯಮಂತ್ರಿ ಅಭಿನಂದನೆ | ರಿಪ್ಪನ್ ಪೇಟೆಯ ಕಾವ್ಯಾ ಸೇರಿದಂತೆ ಕರ್ನಾಟಕದ ಮೂರು ಕ್ರೀಡಾಪಟುಗಳಿಗೆ ಬಹುಮಾನದ ಜತೆ ಸರ್ಕಾರಿ ಉದ್ಯೋಗ ಘೋಷಿಸಿದ ಸಿಎಂ ವಿಶ್ವಕಪ್ ಜಯಿಸಿದ ಭಾರತದ ಅಂಧ ಮಹಿಳಾ ಕ್ರಿಕೆಟ್ ತಂಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಭಾಶಯ ಕೋರಿ ಅಭಿನಂದಿಸಿದ್ದಾರೆ. ತಂಡದಲ್ಲಿರುವ ಕರ್ನಾಟಕದ ಆಟಗಾರ್ತಿಯರ ಸಾಧನೆಗೆ ಮೆಚ್ಚುಗೆ ಸೂಚಿಸಿದ ಮುಖ್ಯಮಂತ್ರಿ, ಅವರಿಗೆ ತಲಾ ₹10 ಲಕ್ಷ ನಗದು ಬಹುಮಾನ ಹಾಗೂ ಸರ್ಕಾರಿ ಉದ್ಯೋಗ ನೀಡುವುದಾಗಿ ಘೋಷಿಸಿದರು. ಕಾವೇರಿ ನಿವಾಸದಲ್ಲಿ…

Read More

RIPPONPETE | ಹೊಟ್ಟೆನೋವಿನಿಂದ ಬೇಸತ್ತು ಯುವಕ ಆತ್ಮಹತ್ಯೆ

RIPPONPETE | ಹೊಟ್ಟೆನೋವಿನಿಂದ ಬೇಸತ್ತು ಯುವಕ ಆತ್ಮಹತ್ಯೆ ರಿಪ್ಪನ್ ಪೇಟೆ : ಹಲವಾರು ದಿನಗಳಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದ ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆಂಚನಾಲ ಗ್ರಾಮದಲ್ಲಿ ನಡೆದಿದೆ. ಕೆಂಚನಾಲ ಗ್ರಾಮದ ಕಿರಣ (26) ಮೃತಪಟ್ಟ ವ್ಯಕ್ತಿಯಾಗಿದ್ದಾನೆ. ಕಿರಣ್ ಮಧ್ಯಪಾನದ ಚಟ ಹೊಂದಿದ್ದು, ಹಲವಾರು ದಿನಗಳಿಂದ ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದನು. ಕುಟುಂಬದವರು ಹಲವು ಬಾರಿ ಚಿಕಿತ್ಸೆ ಮಾಡಿಸಿದರೂ ನೋವು ಕಡಿಮೆಯಾಗಿರಲಿಲ್ಲ. ನವೆಂಬರ್ 19ರ ರಾತ್ರಿ ಊಟದ ನಂತರ ಕಿರಣ್ ಔಷಧಿ ಕುಡಿದು ಮಲಗಿದ್ದ. ನವೆಂಬರ್ 20ರ…

Read More

ವರದಿಗಾರಿಕೆಯಲ್ಲಿ ನೇರವಂತಿಕೆ – ಮಾಧ್ಯಮಗಳ ನಿಜಶಕ್ತಿ – ಗೋಪಾಲಕೃಷ್ಣ ಬೇಳೂರು

ರಿಪ್ಪನ್ ಪೇಟೆ : ಪೋಸ್ಟ್ ಮ್ಯಾನ್ ನ್ಯೂಸ್  ಕಚೇರಿ ಉದ್ಘಾಟನೆ ವರದಿಗಾರಿಕೆಯಲ್ಲಿ ನೇರವಂತಿಕೆ – ಮಾಧ್ಯಮಗಳ ನಿಜಶಕ್ತಿ – ಗೋಪಾಲಕೃಷ್ಣ ಬೇಳೂರು ರಿಪ್ಪನ್ ಪೇಟೆ: “ಮಾಧ್ಯಮವು ಕೇವಲ ಸುದ್ದಿಯನ್ನು ಪ್ರಸಾರ ಮಾಡುವ ಯಂತ್ರವಲ್ಲ, ಅದು ಸಂವಿಧಾನದ ನಾಲ್ಕನೆಯ ಅಂಗವಾಗಿ ಸಾರ್ವಜನಿಕರ ಧ್ವನಿ ಮತ್ತು ಪ್ರಜಾಪ್ರಭುತ್ವದ ಶಕ್ತಿ. ವರದಿಗಾರಿಕೆಯಲ್ಲಿ ನೇರವಂತಿಕೆ, ನೈಜತೆ ಹಾಗೂ ಪತ್ರಕರ್ತರ ನಿಷ್ಠೆ ಉಳಿಯುವ ಮಟ್ಟಕ್ಕೆ ಸಮಾಜದಲ್ಲಿಯೂ ವಿಶ್ವಾಸ ಮತ್ತು ಗೌರವ ಉಳಿಯುತ್ತದೆ” ಎಂದು ಶಾಸಕ ಹಾಗೂ ಕರ್ನಾಟಕ ಅರಣ್ಯ ಅಭಿವೃದ್ಧಿ ಕೈಗಾರಿಕಾ ನಿಗಮದ ಅಧ್ಯಕ್ಷ…

Read More

ಅಡಿಕೆ ತೋಟದ ಹೊಂಡಕ್ಕೆ ಬಿದ್ದು ಯುವಕ ಸಾವು – ಸಾವಿನ ಸುತ್ತ ಅನುಮಾನಗಳ ಹುತ್ತ!??

ಅಡಿಕೆ ತೋಟದ ಹೊಂಡಕ್ಕೆ ಬಿದ್ದು ಯುವಕ ಸಾವು – ಸಾವಿನ ಸುತ್ತ ಅನುಮಾನಗಳ ಹುತ್ತ!?? ರಿಪ್ಪನ್ ಪೇಟೆ : ಇಲ್ಲಿನ ಗವಟೂರು ಗ್ರಾಮದ ಖಾಸಗಿ ವ್ಯಕ್ತಿಯೊಬ್ಬರ ಅಡಿಕೆ ತೋಟದಲ್ಲಿ ಯುವಕನೊಬ್ಬ ಅನುಮಾನಸ್ಪಾದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದ್ದು, ಈ ಸಾವಿನ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿರುವ ಘಟನೆ ನಡೆದಿದೆ. ಪಟ್ಟಣದ ದೊಡ್ಡಿನಕೊಪ್ಪ ನಿವಾಸಿ ಮಂಜುನಾಥ್ (37) ಮೃತಪಟ್ಟ ದುರ್ಧೈವಿಯಾಗಿದ್ದಾರೆ. ಇಂದು ಮಧ್ಯಾಹ್ನ ಈ ಘಟನೆ ನಡೆದಿದೆ ಎನ್ನಲಾಗುತಿದ್ದು ತೋಟದ ಕಂದು ದಾಟುವಾಗ ಕೆಳಗೆ ಬಿದ್ದು ಗಾಯಗೊಂಡಿದ್ದ ಎನ್ನಲಾಗುತಿದ್ದು ,…

Read More

ರಿಪ್ಪನ್ ಪೇಟೆಯ ಶ್ರೇಯಾ ಬಿ.ಆರ್‌ಗೆ ರಾಷ್ಟ್ರಮಟ್ಟದ ಕಬಡ್ಡಿಯಲ್ಲಿ ಸ್ಥಾನ – ನಾಲ್ಕನೇ ಬಾರಿಗೆ ಕರ್ನಾಟಕ ತಂಡಕ್ಕೆ ಆಯ್ಕೆ

ರಿಪ್ಪನ್ ಪೇಟೆಯ ಶ್ರೇಯಾ ಬಿ.ಆರ್‌ಗೆ ರಾಷ್ಟ್ರಮಟ್ಟದ ಕಬಡ್ಡಿಯಲ್ಲಿ ಸ್ಥಾನ – ನಾಲ್ಕನೇ ಬಾರಿಗೆ ಕರ್ನಾಟಕ ತಂಡಕ್ಕೆ ಆಯ್ಕೆ ಗುಂಡು ಎಸೆತದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸೋನಾಲಿ ರಿಪ್ಪನ್ ಪೇಟೆ: ಶಾರದಾ ರಾಮಕೃಷ್ಣ ವಿದ್ಯಾಲಯದ ಪ್ರತಿಭಾವಂತ ವಿದ್ಯಾರ್ಥಿನಿ ಶ್ರೇಯಾ ಬಿ.ಆರ್ ಮತ್ತೊಮ್ಮೆ ತಮ್ಮ ಕ್ರೀಡಾ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಬೆಂಗಳೂರಿನ ರಾಜಾಜಿನಗರದಲ್ಲಿ ನಡೆದ 17 ವರ್ಷ ವಯೋಮಿತಿಯೊಳಗಿನ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಮಿಂಚಿನ ಪ್ರದರ್ಶನ ನೀಡಿ, ಮಹಾರಾಷ್ಟ್ರದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕಬಡ್ಡಿ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಪಟ್ಟಣದ ಶಬರೀಶ ನಗರದ…

Read More

ರಿಪ್ಪನ್ ಪೇಟೆ ಸರ್ಕಾರಿ ಆಸ್ಪತ್ರೆಗೆ ಲೋಕಾಯುಕ್ತ ಅಧಿಕಾರಿಗಳ ದಿಡೀರ್ ಭೇಟಿ

ರಿಪ್ಪನ್ ಪೇಟೆ ಸರ್ಕಾರಿ ಆಸ್ಪತ್ರೆಗೆ ಲೋಕಾಯುಕ್ತ ಅಧಿಕಾರಿಗಳ ದಿಡೀರ್ ಭೇಟಿ ರಿಪ್ಪನ್ ಪೇಟೆ : ಪಟ್ಟಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲೋಕಾಯುಕ್ತ ಇಲಾಖೆಯ ಅಧಿಕಾರಿಗಳು ದಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಘಟನೆ ನಡೆದಿದೆ. ಲೋಕಾಯುಕ್ತ ಇನ್ಸ್‌ಪೆಕ್ಟರ್ ಮಂಜುನಾಥ್ ಅವರ ನೇತೃತ್ವದ ತಂಡ ಆಸ್ಪತ್ರೆಗೆ ಭೇಟಿ ನೀಡಿ ದಾಖಲೆಗಳ ಪರಿಶೀಲನೆ ಮತ್ತು ಸಿಬ್ಬಂದಿಗಳ ಕರ್ತವ್ಯಾವಸ್ಥೆಯ ಬಗ್ಗೆ ಮಾಹಿತಿ ಸಂಗ್ರಹಿಸಿತು. ಜಿಲ್ಲಾದ್ಯಂತ ಸರ್ಕಾರಿ ಆಸ್ಪತ್ರೆಗಳ ವಿರುದ್ಧ ಸ್ವಯಂ ದೂರನ್ನು ದಾಖಲಿಸಿರುವ ಲೋಕಾಯುಕ್ತ ಇಲಾಖೆ, ಈ ಹಿನ್ನೆಲೆಯಲ್ಲಿ ಎಲ್ಲಾ…

Read More

ವಿದೇಶದಿಂದ ತಾಯ್ನಾಡಿಗೆ ಬಂದ ಎರಡು ದಿನಗಳಲ್ಲಿ ವಿಧಿಯ ಆಟ – ಹೃದಯಾಘಾತದಿಂದ ಯುವಕ ಸಾವು

Fate strikes within two days of returning to the homeland from abroad – young man dies of heart attack ವಿದೇಶದಿಂದ ತಾಯ್ನಾಡಿಗೆ ಬಂದ ಎರಡು ದಿನಗಳಲ್ಲಿ ವಿಧಿಯ ಆಟ – ಹೃದಯಾಘಾತದಿಂದ ಯುವಕ ಸಾವು ರಿಪ್ಪನ್ ಪೇಟೆ : ಇಲ್ಲಿನ ಮದೀನಾ ಕಾಲೋನಿಯ ಯುವಕನೊಬ್ಬ ತೀವ್ರ ಹೃದಯಾಘಾತದಿಂದ ಮೃತಪಟ್ಟ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಇಮ್ರಾನ್ (36) ಮೃತಪಟ್ಟ ದುರ್ಧೈವಿಯಾಗಿದ್ದಾರೆ. ಕಳೆದ ಮೂರು ವರ್ಷದಿಂದ ಸೌದಿ ಅರೇಬಿಯಾದಲ್ಲಿ ಚಾಲಕ ವೃತ್ತಿ…

Read More

ಉದ್ಯೋಗದಲ್ಲಿ ಕನ್ನಡಿಗರಿಗೆ ಶೇಕಡಾ ತೊಂಬತ್ತರಷ್ಟು ಮೀಸಲಾತಿ ನೀಡಲಿ – ಶಾಸಕ ಬೇಳೂರು ಗೋಪಾಲಕೃಷ್ಣ

ಉದ್ಯೋಗದಲ್ಲಿ ಕನ್ನಡಿಗರಿಗೆ ಶೇಕಡಾ ತೊಂಬತ್ತರಷ್ಟು ಮೀಸಲಾತಿ ನೀಡಲಿ – ಶಾಸಕ ಬೇಳೂರು ಗೋಪಾಲಕೃಷ್ಣ ರಿಪ್ಪನ್‌ಪೇಟೆ : ಕರ್ನಾಟಕ ರಾಜ್ಯದಲ್ಲಿ ಹಲವು ಕ್ಷೇತ್ರಗಳಲ್ಲಿ ಕನ್ನಡಿಗರಿಗೆ ಅವಕಾಶಗಳು ಕಡಿಮೆಯಾಗುತ್ತಿವೆ. ಹೊರ ರಾಜ್ಯದವರು ಕೆಲಸ ಪಡೆಯುತ್ತಿರುವುದಕ್ಕೆ ಕಾರಣ ನಮ್ಮದೇ ನಿರ್ಲಕ್ಷ್ಯ. ಸರ್ಕಾರದ ನಿಯಮಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡುವ ಶಿಫಾರಸು ಈಗಾಗಲೇ ಮಾಡಲಾಗಿದೆ. ಕೈಗಾರಿಕೆ, ಬ್ಯಾಂಕ್, ಶಿಕ್ಷಣ, ಆರೋಗ್ಯ, ಮಾಹಿತಿ ತಂತ್ರಜ್ಞಾನ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಸ್ಥಳೀಯ ಯುವಕರಿಗೆ ಶೇ. 90 ಉದ್ಯೋಗಾವಕಾಶ ಒದಗಿಸಿದರೆ ನಾಡು ನಿಜವಾದ ಅರ್ಥದಲ್ಲಿ ಅಭಿವೃದ್ಧಿಯಾಗುತ್ತದೆ,” ಎಂದು ಸಾಗರ…

Read More