Headlines

HOSANAGARA | ಶ್ರೀಗಂಧ ಸಾಗಿಸುತಿದ್ದ ಆರೋಪಿ ಮಾಲು ಸಮೇತ ವಶಕ್ಕೆ

HOSANAGARA | ಶ್ರೀಗಂಧ ಸಾಗಿಸುತಿದ್ದ ಆರೋಪಿ ಮಾಲು ಸಮೇತ ವಶಕ್ಕೆ ಶ್ರೀಗಂಧದ ಮರದ ತುಂಡನ್ನು ಅಕ್ರಮವಾಗಿ ಸಾಗಿಸುತಿದ್ದ ಆರೋಪಿಯೋರ್ವನನ್ನು ಮಾಲುಸಮೇತ ಅರಣ್ಯ ಅಧಿಕಾರಿಗಳು ವಶಕ್ಕೆ ಪಡೆದಿರುವ ಘಟನೆ ಹೊಸನಗರ ತಾಲೂಕು ಕಸಬಾ ಹೋಬಳಿ ಕಚ್ಚಿಗೆಬೈಲ್ ಗ್ರಾಮದಲ್ಲಿ ನಡೆದಿದೆ. ಕಚ್ಚಿಗೆ ಬೈಲ್ ಕಾನಗೋಡು ಹೋಗುವ ರಸ್ತೆಯಲ್ಲಿ ಅಕ್ರಮವಾಗಿ ಗಂಧದ ಮರಗಳನ್ನು ಕಡಿದು ತುಂಡುಗಳನ್ನಾಗಿ ತಯಾರಿಸಿ ಸಾಗಾಣಿಕೆ ಮಾಡುವಾಗ ಆರೋಪಿಯನ್ನ ಅರಣ್ಯ ಇಲಾಖೆ ಬಂಧಿಸಿದ್ದಾರೆ. ಹನೀಫ್ ಬಿನ್ ಯಾಕೂಬ್ ಸಾಬ್ ವಯಸ್ಸು 48ವರ್ಷ ಬಾನಿಗಾ ವಾಸಿ ಹೊಸಕೇಸರಿ ಗ್ರಾಮ ಹೊಸನಗರ…

Read More

ಆಸ್ತಿ ವಿಚಾರದ ಗಲಾಟೆ ವಿಕೋಪಕ್ಕೆ : ಕುಡುಗೋಲಿನಿಂದ ಚುಚ್ಚಿ ಮಗನ ಕೊಲೆಗೈದ ತಂದೆ

ಆಸ್ತಿ ವಿಚಾರದ ಗಲಾಟೆ ವಿಕೋಪಕ್ಕೆ : ಕುಡುಗೋಲಿನಿಂದ ಚುಚ್ಚಿ ಮಗನ ಕೊಲೆಗೈದ ತಂದೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಬಳ್ಳೂರು ಗ್ರಾಮದಲ್ಲಿ ಶುಕ್ರವಾರ ತಂದೆ ಮತ್ತು ಮಗನ ನಡುವೆ ಜಗಳ ನಡೆದು ಮಗನ ಕೊಲೆಯಲ್ಲಿ ಅಂತ್ಯವಾಗಿದೆ. ಗಂಗಾನಾಯ್ಕ್(36) ಕೊಲೆಯಾದ ವ್ಯಕ್ತಿ. ಆತನ ತಂದೆ ಲಿಂಗಾನಾಯ್ಕ್ ಜೊತೆಗೆ ಆಸ್ತಿ ವಿಚಾರಕ್ಕೆ ಗಲಾಟೆಯಾಗಿದೆ. ಜಗಳ ವಿಕೋಪಕ್ಕೆ ತಿರುಗಿದ್ದು, ಈ ವೇಳೆ ಲಿಂಗಾನಾಯ್ಕ್ ಕುಡಗೋಲಿನಿಂದ ಮಗನ ಎದೆ ಭಾಗಕ್ಕೆ ಚುಚ್ಚಿದ್ದು, ತೀವ್ರ ರಕ್ತಸ್ರಾವದಿಂದ ಗಂಗಾನಾಯ್ಕ್ ಮೃತಪಟ್ಟಿದ್ದಾನೆ. ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ…

Read More

ವಾಮಾಚಾರ ನಡೆಸಿ ನಗದು ಚಿನ್ನಾಭರಣ ಕಳವು – ತೆರೆದರೆ ಸಾಯುವ ಒಂದು ಬಾಕ್ಸ್ ನ ಕಥೆ

ವಾಮಾಚಾರ ನಡೆಸಿ ನಗದು ಚಿನ್ನಾಭರಣ ಕಳವು – ತೆರೆದರೆ ಸಾಯುವ ಒಂದು ಬಾಕ್ಸ್ ನ ಕಥೆ ಮಾಟ, ಮಂತ್ರ, ಶಾಸ್ತ್ರ ಎಂದು ನಂಬಿಸಿ ಭದ್ರಾವತಿಯ ಎರಡು ಕಡೆ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಭದ್ರಾವತಿಯಲ್ಲಿ ನಡೆದಿದೆ. ಶ್ರೀನಿವಾಸ್‌ ಎಂಬ ವ್ಯಕ್ತಿ ಭದ್ರಾವತಿಯ ಇಬ್ಬರು ಪ್ರತ್ಯೇಕ ವ್ಯಕ್ತಿಗಳಿಗೆ ನಾನಾ ಕಾರಣ ತಿಳಿಸಿ, ಪೂಜೆ ಮಾಡುವುದಾಗಿ ನಂಬಿಸಿ ವಂಚಿಸಿದ್ದಾನೆ. ಈ ಸಂಬಂಧ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿದೆ. ಘಟನೆ 1 : ಕೃಷಿಕರೊಬ್ಬರ…

Read More

ಅತ್ತೆ- ಸೊಸೆ ಜಗಳದಿಂದ ಮನನೊಂದ ವ್ಯಕ್ತಿ : ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣು!

ಅತ್ತೆ- ಸೊಸೆ ಜಗಳದಿಂದ ಮನನೊಂದ ವ್ಯಕ್ತಿ : ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣು! ಮನೆಯಲ್ಲಿ ಅತ್ತೆ ಸೊಸೆ ಜಗಳದಿಂದ ಮನನೊಂದ ವ್ಯಕ್ತಿ ಒಬ್ಬ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ, ಬಾಚೀಹಳ್ಳಿ ಗ್ರಾಮದಲ್ಲಿ ನಡೆದಿದೆ. ಕರುಣಾಕರ (40) ಎನ್ನುವ ವ್ಯಕ್ತಿ ಗುಂಡು ಹಾರಿಸ್ಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಾಫಿ ಬೆಳೆಗಾರರಾಗಿದ್ದ ಇವರು ಹೆಂಡತಿ ಹಾಗೂ ತಾಯಿಯ ನಡುವೆ ಹೊಂದಾಣಿಕೆ ಇಲ್ಲದೆ ಯಾವಾಗಲೂ ಗಲಾಟೆ ಮಾಡುತ್ತಿದ್ದರು. ಇದರಿಂದ ತಾಯಿ ಬೇರೆ ಮನೆಯಲ್ಲಿ ವಾಸಿಸುತ್ತಿದ್ದರು….

Read More

HOSANAGARA | ಎಸ್ಎಸ್ಎಲ್ ಸಿ ವಿಧ್ಯಾರ್ಥಿ ಕಳೆನಾಶಕ ಸೇವಿಸಿ ಆತ್ಮ*ಹತ್ಯೆ

HOSANAGARA | ಎಸ್ಎಸ್ಎಲ್ ಸಿ ವಿಧ್ಯಾರ್ಥಿ ಕಳೆನಾಶಕ ಸೇವಿಸಿ ಆತ್ಮ*ಹತ್ಯೆ HOSANAGARA | ಎಸ್ ಎಸ್ ಎಲ್ ಸಿ ವಿಧ್ಯಾರ್ಥಿಯೊಬ್ಬ ಕಳೆನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೊಸನಗರ ಸಮೀಪದ ಚಿಕ್ಕಮಣತಿ ಗ್ರಾಮದಲ್ಲಿ ನಡೆದಿದೆ. ಚಿಕ್ಕಮಣತಿ ಗ್ರಾಮದ ಅನುದೀಪ್ ಜಿ ಮೃತಪಟ್ಟ ದುರ್ಧೈವಿಯಾಗಿದ್ದಾನೆ. SSLC ಓದುತಿದ್ದ ಅನುದೀಪ್ ಜಿ ದಿನಾಂಕ 15-11-2024 ರಂದು ಕಳೆನಾಶಕ ಸೇವಿಸಿ ಅಸ್ವಸ್ಥನಾಗಿದ್ದು ಆತನನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಇಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಅನುದೀಪ್ ಜಿ ಮೃತಪಟ್ಟಿದ್ದಾನೆ. ಹೊಸನಗರ…

Read More

ಅಂತರ್ಜಾತಿ ವಿವಾಹದ ಸೇಡಿಗೆ ಬಲಿಯಾಯ್ತೇ ಹಸುಗೂಸು – ಸಿಂಟೆಕ್ಸ್‌ ಟ್ಯಾಂಕಿನಲ್ಲಿ ಎಳೆಮಗುವಿನ ಶವ ಪತ್ತೆ!

ಅಂತರ್ಜಾತಿ ವಿವಾಹದ ಸೇಡಿಗೆ ಬಲಿಯಾಯ್ತೇ ಹಸುಗೂಸು – ಸಿಂಟೆಕ್ಸ್‌ ಟ್ಯಾಂಕಿನಲ್ಲಿ ಎಳೆಮಗುವಿನ ಶವ ಪತ್ತೆ! ಮನೆ ಮೇಲಿನ ನೀರಿನ ಸಿಂಟೆಕ್ಸ್ ಟ್ಯಾಂಕಿನಲ್ಲಿ ಎಳೆ ಮಗುವೊಂದು ಶವವಾಗಿ ಪತ್ತೆಯಾದ ಘಟನೆ ಬೆಂಗಳೂರು ಹೊರವಲಯದ ಚಂದಾಪುರ_ಆನೇಕಲ್ ಮುಖ್ಯ ರಸ್ತೆಯ ಇಗ್ಗಲೂರಿನಲ್ಲಿ ನಡೆದಿದೆ. ಅರ್ಚನಾ ಎಂಬುವವರು ಹೆರಿಗೆಗಾಗಿ ತಮ್ಮ ತವರಿಗೆ ಬಂದಿದ್ದಾಗ ಈ ದುರ್ಘಟನೆ ನಡೆದಿದೆ. ತೊಟ್ಟಿಲಲ್ಲಿ ಹಾಯಾಗಿ ಮಲಗಿದ್ದ ಮಗು ನಿಗೂಡವಾಗಿ ಕಾಣೆಯಾಗಿ ಅದೇ ಮನೆಯ ಮೇಲಿನ ಸಿಂಟೆಕ್ಸ್ ಟ್ಯಾಂಕ್ ನಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್…

Read More

ತೀರ್ಥಹಳ್ಳಿ ಮೂಲದ ನಟೋರಿಯಸ್ ಮನೆಗಳ್ಳನ ಬಂಧನ – ಬೆಂಜ್ ಕಾರು, ಪಿಸ್ತೂಲು ಸಹಿತ ಕೋಟ್ಯಾಂತರ ಮೌಲ್ಯದ ಚಿನ್ನಾಭರಣ, ನಗದು ವಶಕ್ಕೆ ..!!

ತೀರ್ಥಹಳ್ಳಿ ಮೂಲದ ನಟೋರಿಯಸ್ ಮನೆಗಳ್ಳನ ಬಂಧನ – ಬೆಂಜ್ ಕಾರು, ಪಿಸ್ತೂಲು ಸಹಿತ ಕೋಟ್ಯಾಂತರ ಮೌಲ್ಯದ ಚಿನ್ನಾಭರಣ, ನಗದು ವಶಕ್ಕೆ ..!! ಮಲೆನಾಡಿನ ಕುಖ್ಯಾತ ಕಳ್ಳರಿಬ್ಬರನ್ನು ಬೆಂಗಳೂರು ಪೋಲಿಸರು ಬಂಧಿಸಿ ಬೆಂಜ್ ,ಸ್ಕೋಡಾ ಕಾರು ಸಮೇತ ಕೋಟ್ಯಾಂತರ ರೂ ನಗದು ಹಾಗೂ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿರುವ ಘಟನೆ ನಡೆದಿದೆ. ಇತ್ತೀಚೆಗೆ ತೀರ್ಥಹಳ್ಳಿಯಲ್ಲಿ ಮನೆಯ ಹಿಂಭಾಗದಲ್ಲಿ ಮುಚ್ಚ್ಚಿಟ್ಟಿದ್ದ ಚಿನ್ನಾಭರಣವನ್ನು ವಶಪಡಿಸಿಕೊಂಡಿರುವ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಿದ ಪೊಲೀಸರು ತೀರ್ಥಹಳ್ಳಿ ಮೂಲದ ಆರೋಪಿ ಹಾಗೂ ಚಿಕ್ಕಮಗಳೂರಿನ ಆರೋಪಿಯೊಬ್ಬನನ್ನು ಬಂಧಿಸಿ ಐಶರಾಮಿ…

Read More

ಪ್ರಿಯಕರನ ಜೊತೆ ಸೇರಿ ಪತಿಯ ಕಥೆ ಮುಗಿಸಿದ ರೀಲ್ಸ್ ರಾಣಿ!

ಪ್ರಿಯಕರನ ಜೊತೆ ಸೇರಿ ಗಂಡನ ಕಥೆ ಮುಗಿಸಿದ ರೀಲ್ಸ್ ರಾಣಿ! ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಅಜೆಕಾರಿನಲ್ಲಿ ಪ್ರಿಯಕರನ ಜೊತೆ ಸೇರಿ ಪತ್ನಿಯೇ ಪತಿಯನ್ನು ಹತ್ಯೆ ಮಾಡಿದ್ದಾಳೆ.ಪತ್ನಿ ಪ್ರತಿಮಾ ಪತಿ 44 ವರ್ಷದ ಬಾಲಕೃಷ್ಣ ಪೂಜಾರಿಗೆ ಊಟದಲ್ಲಿ ವಿಷ ಬೆರೆಸಿ ಬಳಿಕ ಬೆಡ್ ಶೀಟ್ ನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಈ ಸಂಬಂದ ಪ್ರತಿಮಾ ಹಾಗೂ ಪ್ರಿಯಕರ ದಿಲೀಪ್‌ ಹೆಗ್ಡೆಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಕಳೆದ 25 ದಿನಗಳಿಂದ ಬಾಲಕೃಷ್ಣ ಪೂಜಾರಿ ಅನಾರೋಗ್ಯದಿಂದ ಬಳಲುತ್ತಿದ್ದರು….

Read More

ಪ್ರಿಯಕರನ ಕೊಲೆಯಲ್ಲಿ ಅಂತ್ಯವಾಯ್ತು ಮದುವೆ ಮಾತುಕತೆ – ಪ್ರೇಯಸಿ ಸೇರಿದಂತೆ ಆರು ಜನರ ಬಂಧನ

ಪ್ರಿಯಕರನ ಕೊಲೆಯಲ್ಲಿ ಅಂತ್ಯವಾಯ್ತು ಮದುವೆ ಮಾತುಕತೆ – ಪ್ರೇಯಸಿ ಸೇರಿದಂತೆ ಆರು ಜನರ ಬಂಧನ ಮದುವೆ ಮಾತುಕತೆಯೊಂದು ಯುವಕನ ಸಹೋದರನ ಕೊಲೆಯಲ್ಲಿ ಅಂತ್ಯ ಕಂಡಿರುವ ಘಟನೆ ಕಲಬುರಗಿ ನಗರದ ಹೊರ ವಲಯ ನಾಗನಹಳ್ಳಿಯಲ್ಲಿ ನಡೆದಿದ್ದು, ಘಟನೆ ಸಂಬಂಧ ಪ್ರೀತಿಸಿದ ಯುವತಿ ಸೇರಿ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಗುಲ್ಬರ್ಗ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯ ನಾಗನಹಳ್ಳಿಯ ಸಚಿನ್ ಹಾಗೂ ಉಷಾ ಅಲಿಯಾಸ್ ವೈಷ್ಣವಿ ಪ್ರೀತಿಸುತ್ತಿದ್ದರಂತೆ.ಈ ಹಿನ್ನೆಲೆಯಲ್ಲಿ ಉಷಾ ಸಹೋದರ ವರುಣಕುಮಾರ ಹಾಗೂ ಇತರರೊಂದಿಗೆ ಸಚಿನ್ ಮನೆಗೆ ಮದುವೆ…

Read More

ಎರಡು ತಿಂಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆ

ಎರಡು ತಿಂಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆ ತೀರ್ಥಹಳ್ಳಿ ತಾಲ್ಲೂಕಿನ ತೂದೂರು ಸರ್ಕಾರಿ ಶಾಲೆಯ ಹಿಂಭಾಗದ ತುಂಗಾನದಿಯಲ್ಲಿ ಅಪರಿಚಿತ ಶವ ತೀರ್ಥಹಳ್ಳಿ ತಾಲೂಕಿನ ಗುಡ್ಡೆಕೊಪ್ಪ ಸಮೀಪದ ಕುಟ್ರ ನಿವಾಸಿ ಕೃಷ್ಣಮೂರ್ತಿ ಎಂದು ತಿಳಿದುಬಂದಿದೆ. ಗುಡ್ಡೆಕೊಪ್ಪ ನಿವಾಸಿ 14-07-2024 ರಂದು ತಮ್ಮ ನಿವಾಸದಿಂದ ನಾಪತ್ತೆಯಾಗಿದ್ದರು ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿತ್ತು. ಮೃತದೇಹದ ಸೊಂಟದಲ್ಲಿ ಸೇಫ಼್ಟಿ ಪಿನ್ ಆಧಾರದ ಮೇಲೆ ಕುಟುಂಬಸ್ಥರು ಮೃತದೇಹವನ್ನು ಪತ್ತೆಹಚ್ಚಿದ್ದಾರೆ. ಮೃತದೇಹವು ಪ್ರಮಾಣದಲ್ಲಿ ಕೊಳೆತಿದ್ದು ಮುಖ, ದೇಹವನ್ನು…

Read More