ಶಿವಮೊಗ್ಗದಲ್ಲಿ ವ್ಯಕ್ತಿಯೊಬ್ಬನ ಬರ್ಬರ ಹತ್ಯೆ

ಶಿವಮೊಗ್ಗದಲ್ಲಿ ವ್ಯಕ್ತಿಯೊಬ್ಬನ ಬರ್ಬರ ಹತ್ಯೆ

ಶಿವಮೊಗ್ಗ ನಗರದಲ್ಲಿ ವ್ಯಕ್ತಿಯೊಬ್ಬನನ್ನ ಬರ್ಬರ ಹತ್ಯೆಗೈದಿರುವ ಘಟನೆ ನಡೆದಿದೆ.

ನಗರದ ಹಳೆಬೊಮ್ಮನ ಕಟ್ಟೆಯ ಮಾರಮ್ಮಗುಡಿ ಸಮೀಪದ ಗ್ಯಾರೇಜ್‌ ಒಂದರ ಬಳಿಯಲ್ಲಿ ಕಬಡ ರಾಜೇಶ್‌ ಶೆಟ್ಟಿ ಎಂಬಾತನನ್ನ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಲಾಗಿದೆ.

ಸುಮಾರು ಒಂದು ಗಂಟೆ ಸುಮಾರಿಗೆ ಈ ಕೊಲೆ ನಡೆದಿದ್ದು ವಿನೋಬನಗರ ಪೊಲೀಸರು ದೌಡಾಯಿಸಿದ್ದಾರೆ.

ನವುಲೆ ಆನಂದನ ಸಹಚರ ಆಗಿದ್ದ ರಾಜೇಶ್ ಶೆಟ್ಟಿ ಬಸವನ ಗುಡಿಯ ಕ್ಯಾಸೆಟ್ ಅಂಗಡಿ ಮಾಲೀಕ ರಾಘುಶೆಟ್ಟಿ ಮರ್ಡರ್ ಕೇಸ್ ನಲ್ಲಿದ್ದ ಎನ್ನಲಾಗುತಿದ್ದು,ಇತ್ತೀಚೆಗಷ್ಟೇ ತನ್ನ ವಿರೋಧಿ ಬೊಮ್ಮನಕಟ್ಟೆಯ ಕರಿಯ ವಿನಯ್ ಮೇಲೆ ಹಲ್ಲೆ ಮಾಡಿ ಅವನ ಕೈ ಬೆರಳುಗಳನ್ನು ಕತ್ತರಿಸುವಂತೆ ಹಲ್ಲೆ ಮಾಡಿದ್ದನು ಎನ್ನಲಾಗುತಿದೆ.

ಹಳೆಯ ದ್ವೇಷದಿಂದಾಗಿ ಕರಿಯ ವಿನಯ್ ತಂಡ ರಾಜೇಶ್ ಶೆಟ್ಟಿ ಮೇಲೆ ಮುಗಿಬಿದ್ದು ಬರ್ಬರ ಹತ್ಯೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟಿಸಿದೆ.

Leave a Reply

Your email address will not be published. Required fields are marked *