ಇಂಗ್ಲಿಷ್ ಭಾಷೆ ಜ್ಞಾನದ ಕೀ ಅದರೆ ಕನ್ನಡ ಭಾಷೆ ಜೀವನಕ್ಕೆ ಕೀ ಇದ್ದಂತೆ – ಡಾ . ಎ ಬಿ ಉಮೇಶ್
ರಿಪ್ಪನ್‌ಪೇಟೆ;- ಇಂಗ್ಲಿಷ್ ಭಾಷೆ ಜ್ಞಾನದ ಕೀ ಅದರೆ ಕನ್ನಡ ಭಾಷೆ ಜೀವನಕ್ಕೆ ಕೀ ಇದ್ದಂತೆ ಎಂದು ಸಾಗರ ಪ್ರಥಮ ದರ್ಜೆ ಕಾಲೇಜ್ ಕನ್ನಡ ಪ್ರಾಧ್ಯಾಪಕ ಡಾ.ಎ.ಬಿ.ಉಮೇಶ್ ಹೇಳಿದರು.
ರಿಪ್ಪನ್‌ಪೇಟೆಯ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಇಂದುಆಯೋಜಿಸಲಾದ ೬೯ ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಉಪನ್ಯಾಸ ನೀಡಿ ಕನ್ನಡ ಭಾಷೆಯನ್ನು ಬೇರೆಯವರಿಗೆಅರ್ಥವಾಗುವ ಹಾಗೆ ಬರವಣಿಗೆ ಮಾಡಬೇಕು.ಪ್ರಾಸ ಬದ್ದವಾಗಿಕನ್ನಡ ಭಾಷೆಯಲ್ಲಿ ಮಾತನಾಡಬೇಕು.ನಮ್ಮ ಮಾತೃಭಾಷೆ ನಿತ್ಯವಾಗಿ ಮಾತನಾಡುವ ಮೂಲಕ ನಮ್ಮ ಉಸಿರನ್ನಾಗಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸಮಾರಂಭದಅಧ್ಯಕ್ಷತೆಯನ್ನುಕಾಲೇಜ್ ಪ್ರಾಚಾರ್ಯ ಡಾ.ಹೆಚ್.ಎಸ್.ವಿರೂಪಾಕ್ಷಪ್ಪ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಸಿಡಿಸಿ ಉಪಾಧ್ಯಕ್ಷ ಹಾಲಸ್ವಾಮಿಗೌಡರು, ಸಿಡಿಸಿ ಮಂಜುನಾಥಕಾಮತ್,ಹರ್ಷ,
ಉಪನ್ಯಾಸಕರಾದ ಡಾ.ಎನ್.ರವೀಶ್, ಡಾ.ಕುಮಾರ್, ಡಾ.ವೀರಣ್ಣಗೌಡರುಇನ್ನಿತರರು ಹಾಜರಿದ್ದರು.
ರಶ್ಮಿ ಮತ್ತು ಸಂಗಡಿಗರು ಪ್ರಾರ್ಥಿಸಿದರು.ಉಪನ್ಯಾಸಕಿ ಡಾ.ವಿದ್ಯಾಪವಾರ್ ಸ್ವಾಗತಿಸಿದರು.ಪೂರ್ಣಿಮಾ.ಸಿಂಚನ ನಿರೂಪಿಸಿದರು ಹೆಚ್.ನಯನ ವಂದಿಸಿದರು