Headlines

ಭಾವೈಕ್ಯತೆಯಿಂದ ಸಮಾಜದಲ್ಲಿ ಶಾಂತಿ ನೆಮ್ಮದಿ ಸಾಧ್ಯ – ಧರ್ಮಗುರು ಮುನೀರ್ ಸಖಾಫಿ

ಭಾವೈಕ್ಯತೆಯಿಂದ ಸಮಾಜದಲ್ಲಿ ಶಾಂತಿ ನೆಮ್ಮದಿ ಸಾಧ್ಯ – ಧರ್ಮಗುರು ಮುನೀರ್ ಸಖಾಫಿ ರಿಪ್ಪನ್ ಪೇಟೆ : ಮಾನವೀಯ ಧರ್ಮಕ್ಕಿಂತ ಮಿಗಿಲಾದ ಧರ್ಮ ಮತ್ತೊಂದಿಲ್ಲ,ಭಾವೈಕ್ಯತೆಯಿಂದ ಸಮಾಜದಲ್ಲಿ ಶಾಂತಿ ನೆಮ್ಮದಿ ಸಾಧ್ಯ,ಎಂದು ಪಟ್ಟಣದ ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಧರ್ಮಗುರುಗಳಾದ ಮುನೀರ್ ಸಖಾಫಿ ಹೇಳಿದರು. ಈದ್ ಮಿಲಾದ್ ಹಬ್ಬದ ಪ್ರಯುಕ್ತ  ಪಟ್ಟಣದ ವಿನಾಯಕ ವೃತದಲ್ಲಿ ಆಯೋಜಿಸಲಾಗಿದ್ದ ಭಾವೈಕ್ಯತ ರ್ಯಾಲಿಯ ಸಭೆಯಲ್ಲಿ ಮಾತನಾಡಿದ ಅವರು ನಾವು ಭಾರತೀಯರು ನಾವೆಲ್ಲರೂ ಸೋದರಂತೆ ಇದ್ದು ಜಾತಿ ಮತ ಪಂಥಗಳ ಭೇದವನ್ನು ಮರೆತು ಸದ್ಭಾವನೆಯಿಂದ ಎಲ್ಲರಲ್ಲೂ ಬೆರೆತು…

Read More

ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಉರುಳಿದ ಕಾರು – ಓರ್ವ ಮಹಿಳೆ ಸಾವು , ಇನ್ನಿಬ್ಬರು ಗಂಭೀರ

ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಉರುಳಿದ ಕಾರು – ಓರ್ವ ಮಹಿಳೆ ಸಾವು , ಇನ್ನಿಬ್ಬರು ಗಂಭೀರ ರಿಪ್ಪನ್ ಪೇಟೆ : ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕೆರೆಗೆ ಉರುಳಿ ಬಿದ್ದ ಪರಿಣಾಮ ಸ್ತ್ಗಳದಲ್ಲಿಯೇ ಓರ್ವ ವೃದ್ದೆ ಮೃತಪಟ್ಟಿದ್ದು ಇನ್ನಿಬ್ಬರಿಗೆ ಗಂಭೀರ ಗಾಯವಾಗಿರುವ ಘಟನೆ ಪಟ್ಟಣದ ಚಿಪ್ಪಿಗರ ಕೆರೆಯಲ್ಲಿ ನಡೆದಿದೆ. ತ್ಯಾಗರ್ತಿಯಿಂದ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿಯ ದರ್ಶನ ಪಡೆದು ಹಿಂದಿರುಗುತ್ತಿರುವ ಸಂಧರ್ಭದಲ್ಲಿ ಪಟ್ಟಣದ ಚಿಪ್ಪಿಗರ ಕೆರೆ ಏರಿಯ ಬಳಿ ಚಾಲಕನ ನಿಯಂತ್ರಣ ತಪ್ಪಿ ಮಾರುತಿ ಸ್ವಿಫ಼್ಟ್ ಕಾರು…

Read More

ಹುಂಚ ಅಡಿಕೆ ತೋಟದಲ್ಲಿ ಎರಡು ಕಾಡುಕೋಣಗಳ ಶವ ಪತ್ತೆ – ಅಧಿಕಾರಿಗಳ ತುರ್ತು ಭೇಟಿ ,ತನಿಖೆ ಚುರುಕು

ಹುಂಚ ಅಡಿಕೆ ತೋಟದಲ್ಲಿ ಎರಡು ಕಾಡುಕೋಣಗಳ ಶವ ಪತ್ತೆ – ಅಧಿಕಾರಿಗಳ ತುರ್ತು ಭೇಟಿ ,ತನಿಖೆ ಚುರುಕು ಹುಂಚ ಭಾಗದಲ್ಲಿ ಕಾಡುಕೋಣಗಳ ಮಾರಣಹೋಮಕ್ಕೆ ಅಂತ್ಯ ಯಾವಾಗ? ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ಗ್ರಾಮದ ಸರ್ವೆ ನಂ. 52/2 ರಲ್ಲಿ ರಾಮಪ್ಪ ಬಿನ್ ಮರಿಯಪ್ಪ ಅವರ ಅಡಿಕೆ ತೋಟದ ಹೊಂಡದಲ್ಲಿ ಎರಡು ಕಾಡುಕೋಣಗಳ ಶವ ಪತ್ತೆಯಾಗಿದ್ದು, ಈ ಘಟನೆ ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಸೋಮವಾರ ಬೆಳಿಗ್ಗೆ ಪೋಸ್ಟ್ ಮ್ಯಾನ್ ನ್ಯೂಸ್ ವರದಿ ಹೊರಬಿದ್ದ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ಸ್ಥಳಕ್ಕೆ…

Read More

RIPPONPETE | ನಾಡ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಹಾರಿ ವ್ಯಕ್ತಿ ಸಾವು

RIPPONPETE |  ಅಕ್ರಮ ನಾಡ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಹಾರಿ ವ್ಯಕ್ತಿ ಸಾವು ಸದ್ದು ಮಾಡುತ್ತಿರುವ ಅಕ್ರಮ ನಾಡ ಬಂದೂಕುಗಳು – ಕಾನೂನಿಗೆ ಬಿಗಿ ಕಡಿವಾಣ ಅಗತ್ಯ – ಅನಧಿಕೃತ ನಾಡ ಬಂದೂಕಿನಿಂದ ಆಕಸ್ಮಿಕವಾಗಿ ಸಿಡಿದ ಗುಂಡು ವ್ಯಕ್ತಿಯೊಬ್ಬರನ್ನು ಬಲಿ ಪಡೆದುಕೊಂಡ ಘಟನೆ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹಿರಿಯೋಗಿ ಗ್ರಾಮದಲ್ಲಿ ನಾಡ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಹಾರಿದ ಪರಿಣಾಮ ವ್ಯಕ್ತಿಯೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ವರದಿಯಾಗಿದೆ. ಮೃತರನ್ನು ಕೋಡೂರು ಸಮೀಪದ ಹಿರಿಯೋಗಿ ಗ್ರಾಮದ ದೇವರಾಜ…

Read More

ರಿಪ್ಪನ್ ಪೇಟೆ ಗಣಪತಿ ರಾಜಬೀದಿ ಉತ್ಸವ – ಜುಮ್ಮಾ ಮಸೀದಿ ವತಿಯಿಂದ ಭಕ್ತಾಧಿಗಳಿಗೆ ಪಾನೀಯ ವಿತರಣೆ

ರಿಪ್ಪನ್ ಪೇಟೆ ಗಣಪತಿ ರಾಜಬೀದಿ ಉತ್ಸವ – ಜುಮ್ಮಾ ಮಸೀದಿ ವತಿಯಿಂದ ಭಕ್ತಾಧಿಗಳಿಗೆ ಪಾನೀಯ ವಿತರಣೆ ರಿಪ್ಪನ್ ಪೇಟೆ : ಪಟ್ಟಣದ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದ ತಿಲಕ್ ಮಂಟಪದಲ್ಲಿ ಪ್ರತಿಷ್ಠಾಪಿಸಲಾದ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರಸೇನಾ ಸೇವಾ ಸಮಿತಿಯ 58ನೇ ವರ್ಷದ ಗಣಪತಿ ವಿಸರ್ಜನಾ ಪೂರ್ವ ವೈಭವದ ರಾಜಬೀದಿ ಉತ್ಸವದಲ್ಲಿ ಪಟ್ಟಣದ ಮೊಹಿಯುದ್ದೀನ್ ಜುಮ್ಮಾ ಮಸೀದಿ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಸಿಹಿ ಹಾಗೂ ಪಾನೀಯ ವಿತರಿಸಿ ಸೌಹಾರ್ಧ ಮೆರೆಯಲಾಯಿತು. ಗಣಪತಿಯ ರಾಜಬೀದಿ ಉತ್ಸವ ಹೊಸನಗರ…

Read More

ಭರ್ಜರಿ 19 ಗಂಟೆಗಳ ಭಾರಿ ಜನಸ್ತೋಮದ ಮೆರವಣಿಗೆ ಬಳಿಕ ರಿಪ್ಪನ್‌ಪೇಟೆ ಗಣಪತಿ ತಾವರೆಕೆರೆಯಲ್ಲಿ ಜಲಸ್ಥಂಭನ

ಭರ್ಜರಿ 19 ಗಂಟೆಗಳ ಭಾರಿ ಜನಸ್ತೋಮದ ಮೆರವಣಿಗೆ ಬಳಿಕ ರಿಪ್ಪನ್‌ಪೇಟೆ ಗಣಪತಿ ತಾವರೆಕೆರೆಯಲ್ಲಿ ಜಲಸ್ಥಂಭನ ರಿಪ್ಪನ್‌ಪೇಟೆ : ಪಟ್ಟಣದ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ವತಿಯಿಂದ ಪ್ರತಿಷ್ಠಾಪಿಸಿದ್ದ 58 ನೇ ವರ್ಷದ  ಗಣೇಶೋತ್ಸವದ ಗಣಪತಿ ವಿಸರ್ಜನೆ 19 ಗಂಟೆಗಳ ಕಾಲ ನಡೆದ ರಾಜಬೀದಿ ಉತ್ಸವವು ಶಾಂತಿಯುತವಾಗಿ ನೆರವೇರಿತು. ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಪ್ರತಿಷ್ಠಾಪಿಸಿದ್ದ ಗಣಪತಿ ಮೂರ್ತಿಯ ವಿಸರ್ಜನೆಗೂ ಮುನ್ನ ಭರ್ಜರಿ 19 ಗಂಟೆಗಳ ಕಾಲ ರಾಜಬೀದಿ ಉತ್ಸವ ನಡೆಯಿತು.ಶನಿವಾರ ಸಂಜೆ 5.30 ಕ್ಕೆ…

Read More

RIPPONPETE | ಗಣಪತಿ ವಿಸರ್ಜನಾ ಪೂರ್ವ ರಾಜಬೀದಿ ಉತ್ಸವಕ್ಕೆ ಕ್ಷಣಗಣನೆ | ಖಾಕಿಯಿಂದ ಬಿಗಿ ಭದ್ರತೆ

RIPPONPETE | ಗಣಪತಿ ವಿಸರ್ಜನಾ ಪೂರ್ವ ರಾಜಬೀದಿ ಉತ್ಸವಕ್ಕೆ ಕ್ಷಣಗಣನೆ | ಖಾಕಿಯಿಂದ ಬಿಗಿ ಭದ್ರತೆ ರಿಪ್ಪನ್‌ಪೇಟೆ:– ಪಟ್ಟಣದ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದ ತಿಲಕ್ ಮಂಟಪದಲ್ಲಿ ಪ್ರತಿಷ್ಠಾಪಿಸಲಾದ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರಸೇನಾ ಸೇವಾ ಸಮಿತಿಯ 58ನೇ ವರ್ಷದ ಗಣಪತಿ ವಿಸರ್ಜನಾ ಪೂರ್ವ ವೈಭವದ ರಾಜಬೀದಿ ಉತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಕೆಲವೇ ಹೊತ್ತಿನಲ್ಲಿ ವಿಸರ್ಜನಾ ಪೂರ್ವ ಪೂಜೆ ನೆರವೇರಲಿದ್ದು, ಬಳಿಕ ಮೆರವಣಿಗೆಗೆ ಚಾಲನೆ ನೀಡಲಾಗುತ್ತದೆ. ರಾಜಬೀದಿ ಉತ್ಸವದ ಅಂಗವಾಗಿ ಗಣಪತಿ ಸ್ವಾಮಿಯ ರಥವನ್ನು ಭಕ್ತರು ಅದ್ಧೂರಿಯಾಗಿ ಅಲಂಕರಿಸಿದ್ದು,…

Read More

RIPPONPETE | ಅಪ್ರಾಪ್ತೆಯೊಂದಿಗೆ ವಿವಾಹ – ಯುವಕನ ವಿರುದ್ಧ ಫೋಕ್ಸೋ ಪ್ರಕರಣ ದಾಖಲು

ಅಪ್ರಾಪ್ತೆಯೊಂದಿಗೆ ವಿವಾಹ – ಯುವಕನ ವಿರುದ್ಧ ಫೋಕ್ಸೋ ಪ್ರಕರಣ ದಾಖಲು ರಿಪ್ಪನ್ ಪೇಟೆ ; ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರ ಬಾಲಕಿಯೊಂದಿಗೆ ಯುವಕನೊಬ್ಬ ಬಾಲ್ಯವಿವಾಹವಾಗಿದ್ದು ಈ ಹಿನ್ನಲೆಯಲ್ಲಿ ಯುವಕನ ವಿರುದ್ದ ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿರುವ ಘಟನೆ ನಡೆದಿದೆ. ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಕದರಮಂಗಳ ಗ್ರಾಮದ ಮೋಹನ್‌ಕುಮಾರ್ ಎಂಬುವರು ಅಪ್ರಾಪ್ತೆಯೊಂದಿಗೆ ವಿವಾಹವಾಗಿರುವ ಘಟನೆ ಬಹಿರಂಗವಾಗಿ, ಕಾನೂನು ಕ್ರಮಕ್ಕೆ ದಾರಿ ಮಾಡಿಕೊಟ್ಟಿದೆ. ರಿಪ್ಪನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬಾಲಕಿಯೊಂದಿಗೆ ಕಳೆದ ಆಗಸ್ಟ್ 29ರಂದು ದೇವಸ್ಥಾನವೊಂದರಲ್ಲಿ ವಿವಾಹ…

Read More

ನಾಳೆ ರಿಪ್ಪನ್‌ಪೇಟೆ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರಸೇನಾ ಗಣಪತಿ ವಿಸರ್ಜನ ಪೂರ್ವ ವೈಭವದ ರಾಜಬೀದಿ ಉತ್ಸವ : ಪೊಲೀಸ್ ಬಂದೋಬಸ್ತ್ ಹೇಗಿರುತ್ತೆ ಗೊತ್ತಾ …??

ನಾಳೆ ರಿಪ್ಪನ್‌ಪೇಟೆ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರಸೇನಾ ಗಣಪತಿ ವಿಸರ್ಜನ ಪೂರ್ವ ವೈಭವದ ರಾಜಬೀದಿ ಉತ್ಸವ : ಪೊಲೀಸ್ ಬಂದೋಬಸ್ತ್ ಹೇಗಿರುತ್ತೆ ಗೊತ್ತಾ …?? ರಿಪ್ಪನ್‌ಪೇಟೆ : ಪಟ್ಟಣದ ತಿಲಕ್ ಮಂಟಪದಲ್ಲಿ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರಸೇನಾ ವತಿಯಿಂದ ಪ್ರತಿಷ್ಠಾಪಿಸಲಾದ 58ನೇ ವರ್ಷದ ಗಣಪತಿ ವಿಸರ್ಜನ ಪೂರ್ವ ರಾಜಬೀದಿ ಉತ್ಸವ ನಾಳೆ (06-09-2025) ಅದ್ದೂರಿಯಾಗಿ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ವಿಸರ್ಜನಾ ಪೂರ್ವ ಪೂಜೆ ನೆರವೇರಲಿದ್ದು, ಅದಾದ ನಂತರ ವೈವಿಧ್ಯಮಯ ಸಾಂಸ್ಕೃತಿಕ ಮೆರವಣಿಗೆಗೆ ಚಾಲನೆ ದೊರೆಯಲಿದೆ. ಈ ಮೆರವಣಿಗೆಯಲ್ಲಿ…

Read More

ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗೆ ಶಿವಮೊಗ್ಗ ಜಿಲ್ಲೆಯಿಂದ 40 ಶಿಕ್ಷಕರ ಆಯ್ಕೆ

ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗೆ ಜಿಲ್ಲೆಯಿಂದ 40 ಶಿಕ್ಷಕರ ಆಯ್ಕೆ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಸೆಪ್ಟೆಂಬರ್ 5ರಂದು ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ವತಿಯಿಂದ 2025-26 ನೇ ಸಾಲಿನ ಜಿಲ್ಲಾ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತಿದೆ. ಈ ಬಾರಿ ಜಿಲ್ಲೆಯಿಂದ ಒಟ್ಟು 40 ಮಂದಿ ಶಿಕ್ಷಕ/ಶಿಕ್ಷಕಿಯರನ್ನು ಆಯ್ಕೆ ಮಾಡಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಿಸಿದ್ದಾರೆ. ಹೊಸನಗರ ತಾಲೂಕಿನ ಐದು ಜನ ಶಿಕ್ಷಕರು ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ಮಂಜಪ್ಪ ಡಿ , ಶಿಲ್ಪ…

Read More