ಮದುವೆಯಾಗಿಲ್ಲವೆಂದು ಮನನೊಂದು ನೇಣು ಬಿಗಿದುಕೊಂಡು ಯುವಕ ಆತ್ಮ*ಹತ್ಯೆ
ಮದುವೆಯಾಗಿಲ್ಲವೆಂದು ಮನನೊಂದು ನೇಣು ಬಿಗಿದುಕೊಂಡು ಯುವಕ ಆತ್ಮ*ಹತ್ಯೆ ANANDAPURA | ಜೀವನದಲ್ಲಿ ಜಿಗುಪ್ಸೆಗೊಂಡಿದ್ದ ಯುವಕನೊಬ್ಬ ನೇಣಿಗೆ ಶರಣಾದ ಘಟನೆ ಆನಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ. ಆಚಾಪುರ ಗ್ರಾಪಂ ವ್ಯಾಪ್ತಿಯ ಕೈರಾ ಗ್ರಾಮದ ನಿವಾಸಿ ಸಂದೀಪ್ (33) ಮೃತ ವ್ಯಕ್ತಿಯಾಗಿದ್ದಾರೆ. ವಯಸ್ಸಾದರೂ ಮದುವೆಯಾಗಿಲ್ಲವೆಂದು ಮನನೊಂದಿದ್ದ ಸಂದೀಪ ಕೈರಾ ಗ್ರಾಮದಲ್ಲಿರು ತಮ್ಮ ತೋಟದ ಶೆಡ್ ನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆನಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.