Headlines

ಆನಂದಪುರದ  ಕವನಾ ಡಬ್ಲುಎಚ್ಓ ವಿಜ್ಞಾನಿಯಾಗಿ ಆಯ್ಕೆ

ಆನಂದಪುರದ  ಕವನಾ ಡಬ್ಲುಎಚ್ಓ ವಿಜ್ಞಾನಿಯಾಗಿ ಆಯ್ಕೆ ಸಾಗರ : ತಾಲೂಕಿನ ಆನಂದಪುರ ಸಮೀಪದ ಹೊಸೂರು ಗ್ರಾಪಂ ವ್ಯಾಪ್ತಿಯ ನೇದರವಳ್ಳಿ ಗ್ರಾಮದ ಯುವ ವಿಜ್ಞಾನಿ ಕವನಶ್ರೀ ವಿಶ್ವ ಆರೋಗ್ಯ ಸಂಸ್ಥೆಯ (WHO) ವಿಜ್ಞಾನಿಯಾಗಿ ಆಯ್ಕೆಗೊಂಡಿದ್ದಾರೆ. ಕಳೆದ ಸೋಮವಾರ ಸ್ವಿಡರ್‌ಲೆಂಡ್‌ನ ಕೇಂದ್ರ ಕಚೇರಿಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಭಾರತದಿಂದ ಸ್ಪರ್ಧಾತ್ಮಕ ಪರೀಕ್ಷೆ ಬರೆದ 8 ಅಭ್ಯರ್ಥಿಗಳಲ್ಲಿ ಆಯ್ಕೆಯಾದ ಕವನಶ್ರೀ, ನೇದರವಳ್ಳಿಯ ಪ್ರಗತಿಪರ ಕೃಷಿಕ ಶುಂಠಿ ಮಂಜಪ್ಪ ಮತ್ತು ಜಯಲಕ್ಷ್ಮೀ ದಂಪತಿಗಳ ಪುತ್ರಿ.

Read More

ANANDAPURA | ಸಾಲಭಾದೆ ತಾಳಲಾರದೆ ರೈತ ಆತ್ಮಹತ್ಯೆ

ANANDAPURA | ಸಾಲಭಾದೆ ತಾಳಲಾರದೆ ರೈತ ಆತ್ಮಹತ್ಯೆ ಆನಂದಪುರ : ಸಾಲಭಾದೆ ತಾಳಲಾರದೆ ರೈತರೊಬ್ಬರು ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಡೆಹಳ್ಳಿ ಗ್ರಾಪಂ ವ್ಯಾಪ್ತಿಯ ಗೇರುಬೀಸ್ ನಲ್ಲಿ ನಡೆದಿದೆ. ಗೇರುಬೀಸು ನಿವಾಸಿ ರಾಮಚಂದ್ರ (48) ಮೃತ ದುರ್ಧೈವಿಯಾಗಿದ್ದಾರೆ. ರಾಷ್ಟ್ರೀಯ ಬ್ಯಾಂಕುಗಳಲ್ಲಿ ಹಾಗೂ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ವ್ಯವಸಾಯಕ್ಕಾಗಿ ಸಾಲ  ಮಾಡಿದ್ದು ಬೆಳೆಯು ಕೈಕೊಟ್ಟ ಹಿನ್ನಲೆಯಲ್ಲಿ ಮನನೊಂದು ಮನೆಯ ಹಿಂಭಾಗದಲ್ಲಿರುವ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಚಿರತೆ ಉಗುರು, ಹಲ್ಲು ಅಕ್ರಮ ಸಾಗಾಟ – ಮಾಲು ಸಮೇತ ವ್ಯಕ್ತಿ ವಶಕ್ಕೆ

ಚಿರತೆ ಉಗುರು, ಹಲ್ಲು ಅಕ್ರಮ ಸಾಗಾಟ – ಮಾಲು ಸಮೇತ ವ್ಯಕ್ತಿ ವಶಕ್ಕೆ ಕಾನೂನು ಬಾಹಿರವಾಗಿ ಚಿರತೆ ಉಗುರು ಮತ್ತು ಹಲ್ಲುಗಳ ಸಾಗಾಟದಲ್ಲಿ ತೊಡಗಿದ್ದ ವ್ಯಕ್ತಿಯನ್ನು ಅರಣ್ಯ ಸಂಚಾರಿ ಪೊಲೀಸ್ ದಳ ಸೊತ್ತು ಸಮೇತ ವಶಕ್ಕೆ ತೆಗೆದುಕೊಂಡ ಘಟನೆ ಶಿವಮೊಗ್ಗ ಜಿಲ್ಲೆಯ ಆನಂದಪುರದಲ್ಲಿ ನಡೆದಿದೆ. ದಾಸಕೊಪ್ಪ ಸರ್ಕಲ್ ಪೆಟ್ರೋಲ್ ಬಂಕ್ ಹತ್ತಿರ ಕಾನೂನುಬಾಹಿರವಾಗಿ ಚಿರತೆ ಉಗುರು ಮತ್ತು ಹಲ್ಲುಗಳ ಸಾಗಾಟದಲ್ಲಿ ತೊಡಗಿದ್ದ ಶಂಕೆಯಿಂದ ವಿಚಾರಣೆಗೊಳಪಡಿಸಿದಾಗ ಶಿಕಾರಿಪುರ ತಾಲೂಕಿನ ಹಾರೊಗೊಪ್ಪ ನಿವಾಸಿ ಲೋಕೇಶ್ ಭಾಗ್ಯಣ್ಣ ಅವರ ಬಳಿ 16…

Read More

ANANDAPURA | ಬೈಕ್ ಅಪಘಾತ – ಸ್ಥಳದಲ್ಲೇ ಇಬ್ಬರು ಸಾವು

ANANDAPURA | ಬೈಕ್ ಅಪಘಾತ – ಸ್ಥಳದಲ್ಲೇ ಇಬ್ಬರು ಸಾವು TVS ಎಕ್ಸ್‌ಎಲ್‌ ಮತ್ತು ಅಶೋಕ ಲೇಲ್ಯಾಂಡ್‌ ಗೂಡ್ಸ್‌ ವಾಹನದ ಮಧ್ಯೆ ಅಪಘಾತ ಸಂಭವಿಸಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸಾಗರ ತಾಲೂಕಿನ ಆನಂದಪುರ ವ್ಯಾಪ್ತಿಯ ಗೌತಮಪುರದಲ್ಲಿ ಸಂಭವಿಸಿದೆ. ಮೃತರನ್ನು ವಾಸಪ್ಪ (70) ಮತ್ತು ಸತೀಶ್‌ (40) ಎಂದು ಗುರುತಿಸಲಾಗಿದೆ. ಬೆಳಂದೂರು ಗ್ರಾಮದಿಂದ ಆನಂದಪುರದ ಕಡೆ ತೆರಳುತ್ತಿದ್ದ ಟಿವಿಎಸ್ ಎಕ್ಸೆಲ್ ಬೈಕ್ ಹಾಗೂ ಆನಂದಪುರದಿಂದ ತ್ಯಾಗರ್ತಿ ಕಡೆ ತೆರಳುತ್ತಿದ್ದ ಅಶೋಕ್ ಲೇಲ್ಯಾಂಡ್ ದೋಸ್ತ್ ವಾಹನದ ನಡುವೆ ಅಪಘಾತ ಸಂಭವಿಸಿದೆ. ಘಟನಾ ಸ್ಥಳಕ್ಕೆ…

Read More

ವಿದ್ಯುತ್ ಪ್ರವಹಿಸಿ ಕಟ್ಟಡ ಕಾರ್ಮಿಕ ಸಾವು

ವಿದ್ಯುತ್ ಪ್ರವಹಿಸಿ ಕಟ್ಟಡ ಕಾರ್ಮಿಕ ಸಾವು ಆನಂದಪುರ ಸಮೀಪದ ಮಲಂದೂರಿನಲ್ಲಿ ಕಟ್ಟಡದ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಕಾರ್ಮಿಕರೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಶಿವಮೊಗ್ಗ ಪಟ್ಟಣದ ನಿವಾಸಿ ಕೃಷ್ಣಮೂರ್ತಿ (46) ಸಾವಿಗೀಡಾದವರು. ಮಲ್ಲಂದೂರಿನ ಸಂತೋಷ್ ಅಗ್ರೋ ಕಂಪನಿಯ ಕಟ್ಟಡ ನಿರ್ಮಾಣ ಕಾರ್ಯ ನಡೆಸುತಿದ್ದಾಗ ಏಕಾಏಕಿ ವಿದ್ಯುತ್ ಪ್ರವಹಿಸಿದೆ ತಕ್ಷಣ ಕಾರ್ಮಿಕರು ಅವರನ್ನು ಆನಂದಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಅಸುನೀಗಿದ್ದಾರೆ ಎಂದು ತಿಳಿದುಬಂದಿದೆ. ಆನಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Read More

ಚಾಲಕನ ನಿಯಂತ್ರಣ ತಪ್ಪಿ ಕಾರು ಅಪಘಾತ – ವ್ಯಕ್ತಿ ಗಂಭೀರ | ಸಮಯ ಪ್ರಜ್ಞೆ ಮೆರೆದ ಆನಂದಪುರ ಪಿಎಸ್‌ಐ

ಚಾಲಕನ ನಿಯಂತ್ರಣ ತಪ್ಪಿ ಕಾರು ಅಪಘಾತ – ವ್ಯಕ್ತಿ ಗಂಭೀರ | ಸಮಯ ಪ್ರಜ್ಞೆ ಮೆರೆದ ಆನಂದಪುರ ಪಿಎಸ್‌ಐ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಅಂಗಡಿ ಕಟ್ಟೆಗೆ ಡಿಕ್ಕಿಯಾಗಿ ಚಾಲಕನಿಗೆ ಗಂಭೀರ ಗಾಯವಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಸಮೀಪದ ಯಡೆಹಳ್ಳಿ ಸರ್ಕಲ್ ನಲ್ಲಿ ನಡೆದಿದೆ. ಸಾಗರದಿಂದ ಕೋಣಂದೂರು ಕಡೆಗೆ ತೆರಳುತಿದ್ದ ಟೊಯೊಟ ಕ್ವಾಲಿಸ್ ಕಾರು ಆನಂದಪುರದ ಯಡೆಹಳ್ಳಿ ಸರ್ಕಲ್ ನಲ್ಲಿ ನಿಯಂತ್ರಣ ತಪ್ಪಿ ಏಕಾಏಕಿ ಲೈಟ್ ಕಂಬದ ಪಕ್ಕದಲ್ಲಿರುವ ಕಟ್ಟೆಗೆ ಡಿಕ್ಕಿಯಾಗಿದೆ. ಘಟನೆಯಲ್ಲಿ…

Read More
Exit mobile version