ANANDAPURA | ಬೈಕ್ ಸವಾರನ ಮೇಲೆ ಖಾರದ ಪುಡಿ ಎರಚಿ, ಮಹಿಳೆಗೆ ಸ್ಟೀಲ್ ರಾಡ್‌ನಿಂದ ಹಲ್ಲೆ
A shocking attack was reported in Maskalabailu village where an unidentified man threw chilli powder into a bike rider’s eyes and assaulted a woman with a steel rod. Police have registered a case and investigation is underway.
ANANDAPURA | ಬೈಕ್ ಸವಾರನ ಮೇಲೆ ಖಾರದ ಪುಡಿ ಎರಚಿ, ಮಹಿಳೆಗೆ ಸ್ಟೀಲ್ ರಾಡ್‌ನಿಂದ ಹಲ್ಲೆ
ಸಾಗರ : ಪೊಲೀಸ್ ಠಾಣಾ ವ್ಯಾಪ್ತಿಯ ಮಸ್ಕಲಬೈಲು ಗ್ರಾಮದಲ್ಲಿ ಬೈಕಿನಲ್ಲಿ ತೆರಳುತ್ತಿದ್ದವರ ಮೇಲೆ ಅಜ್ಞಾತ ವ್ಯಕ್ತಿಯೊಬ್ಬ ಖಾರದ ಪುಡಿ ಎರಚಿ, ಮಹಿಳೆಯ ತಲೆಗೆ ಸ್ಟೀಲ್ ರಾಡ್‌ನಿಂದ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ.
ಶೃತಿ ಎಂಬುವವರು ಸೊರಬದಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ ಬರುತ್ತಿದ್ದರು. ಅವರ ಮಾವ ಬೈಕಿನಲ್ಲಿ ಶೃತಿ ಅವರನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ, ಮರದ ಮರೆಯಲ್ಲಿ ನಿಂತಿದ್ದ ವ್ಯಕ್ತಿಯೊಬ್ಬ ದಿಢೀರ್ ರಸ್ತೆಗೆ ಬಂದು ಬೈಕ್‌ಗೆ ಅಡ್ಡಗಟ್ಟಿದ್ದಾನೆ. ಜರ್ಕಿನ್ ಧರಿಸಿದ್ದ ಹಾಗೂ ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದ ಆತ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮೊದಲು ಶೃತಿ ಅವರ ಮಾವನ ಕಣ್ಣಿಗೆ ಖಾರದ ಪುಡಿ ಎರಚಿದ ಆರೋಪಿ, ನಂತರ ಬೈಕ್‌ನ ಹಿಂಬದಿ ಕುಳಿತಿದ್ದ ಶೃತಿ ಅವರ ತಲೆಗೆ ಕಬ್ಬಿಣದ ರಾಡ್‌ನಿಂದ ಹೊಡೆದಿದ್ದಾನೆ. ಗಂಭೀರವಾಗಿ ಗಾಯಗೊಂಡ ಶೃತಿ ಅವರನ್ನು ತಕ್ಷಣ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿದೆ.
ಘಟನೆ ಸಂಬಂಧ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸೈ ಪ್ರವೀಣ್ ಎಸ್ ಪಿ ನೇತ್ರತ್ವದಲ್ಲಿ ತನಿಖೆ ಮುಂದುವರಿಸಲಾಗಿದೆ.