ANANDAPURA | ಬೈಕ್ ಅಪಘಾತ – ಸ್ಥಳದಲ್ಲೇ ಇಬ್ಬರು ಸಾವು
TVS ಎಕ್ಸ್‌ಎಲ್ ಮತ್ತು ಅಶೋಕ ಲೇಲ್ಯಾಂಡ್ ಗೂಡ್ಸ್ ವಾಹನದ ಮಧ್ಯೆ ಅಪಘಾತ ಸಂಭವಿಸಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸಾಗರ ತಾಲೂಕಿನ ಆನಂದಪುರ ವ್ಯಾಪ್ತಿಯ ಗೌತಮಪುರದಲ್ಲಿ ಸಂಭವಿಸಿದೆ.
ಮೃತರನ್ನು ವಾಸಪ್ಪ (70) ಮತ್ತು ಸತೀಶ್ (40) ಎಂದು ಗುರುತಿಸಲಾಗಿದೆ.
ಬೆಳಂದೂರು ಗ್ರಾಮದಿಂದ ಆನಂದಪುರದ ಕಡೆ ತೆರಳುತ್ತಿದ್ದ ಟಿವಿಎಸ್ ಎಕ್ಸೆಲ್ ಬೈಕ್ ಹಾಗೂ ಆನಂದಪುರದಿಂದ ತ್ಯಾಗರ್ತಿ ಕಡೆ ತೆರಳುತ್ತಿದ್ದ ಅಶೋಕ್ ಲೇಲ್ಯಾಂಡ್ ದೋಸ್ತ್ ವಾಹನದ ನಡುವೆ ಅಪಘಾತ ಸಂಭವಿಸಿದೆ.
ಘಟನಾ ಸ್ಥಳಕ್ಕೆ ಆನಂದಪುರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.