ಶಿಗ್ಗಾಂವ್ ಉಪಚುನಾವಣೆ – ಪಕ್ಷೇತರರ ಅಭ್ಯರ್ಥಿಯಾಗಿ ಮಾಜಿ ಶಾಸಕ ಅಜ್ಜಂಪುರ ಖಾದ್ರಿ ನಾಮಪತ್ರ ಸಲ್ಲಿಕೆ

ಶಿಗ್ಗಾಂವ್ ಉಪಚುನಾವಣೆ – ಪಕ್ಷೇತರರ ಅಭ್ಯರ್ಥಿಯಾಗಿ ಮಾಜಿ ಶಾಸಕ ಅಜ್ಜಂಪುರ ಖಾದ್ರಿ ನಾಮಪತ್ರ ಸಲ್ಲಿಕೆ

ಶಿಗ್ಗಾಂವ್ – ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರಾಜಿನಾಮೆಯಿಂದ ತೆರವಾಗಿರುವ ಶಿಗ್ಗಾಂವ್ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣೆ ಘೋಷಣೆಯಾಗಿದ್ದು ಪ್ರಮುಖ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಘೋಷಿಸಿದೆ.ಈ ನಡುವೆ ಮಾಜಿ ಶಾಸಕ ಅಜ್ಜಂಪುರ ಖಾದ್ರಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

ನಾಮಪತ್ರ ಸಲ್ಲಿಸಿ ಶಿಗ್ಗಾವ್ ಪಟ್ಟಣದ ತಹಶೀಲ್ದಾರ ಕಚೇರಿ ಬಳಿ ಮಾಜಿ ಶಾಸಕ ಅಜ್ಜಂಪುರ ಖಾದ್ರಿ ಮಾತನಾಡಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದಿನಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹಾಗೂ ಬಿಜೆಪಿ ಅಭ್ಯರ್ಥಿ ಸೋಲಿಸೋದಷ್ಟೆ ಗುರಿ ನಂದು

ಈ ತಾಲೂಕಿನ ಮಗ ನಾನು ತಾಲೂಕಿನ ಜನರ ಜೊತೆ ಇದಿನಿ
ಯಾರೂ ಮನವೊಲಿಕೆಗೆ ಪ್ರಯತ್ನ ಮಾಡಿಲ್ಲ,ಜಮೀರ್ ನಮ್ಮ ದರ್ಗಾಕ್ಕೆ ನಮಾಜ್ ಗೆ ಬಂದಿದ್ರು, ನಾನು‌ ನಮಾಜ್ ಮಾಡಿ ಗೆಲುವಿಗೆ ಬೇಡಿಕೊಂಡಿದಿನಿ ಪಠಾಣ್ ಹಾನಗಲ್ ನವನು, ಭರತ್ ಹುಬ್ಬಳ್ಳಿಯವನುಜನ‌ ಇವರನ್ನು ತಿರಸ್ಕರಿಸ್ತಾರೆ ಎನ್ನುವ ಮನೋಭಾವನೆ ನನಗೆ ಇದೆ ಎಂದರು.

ಕ್ಷೇತ್ರದಲ್ಲಿ ಒಟ್ಟು 2 ಲಕ್ಷ ಮತದಾರರಿದ್ದು, ಮುಸ್ಲಿಮರು 60 ಸಾವಿರ, ಲಿಂಗಾಯತರು 80 ಸಾವಿರ, ಕುರುಬ ಸಮುದಾಯದ 30 ಸಾವಿರ ಮತಗಳಿವೆ. ಉಳಿದಂತೆ ಪರಿಶಿಷ್ಟ ಜಾತಿ , ಪಂಗಡ ಹಾಗೂ ಸಣ್ಣ ಪುಟ್ಟ ಸಮುದಾಯದ ಮತಗಳಿವೆ.

ವರದಿ  :  ನಿಂಗರಾಜ ಕುಡಲ್  ಹಾವೇರಿ ಜಿಲ್ಲೆ ಬಂಕಾಪುರ್

Leave a Reply

Your email address will not be published. Required fields are marked *