January 11, 2026

ನುಡಿದಂತೆ ನಡೆದವರು ಬರಗೂರು ರಾಮಚಂದ್ರಪ್ಪ – ಸಾಹಿತಿ ಸತೀಶ ಕುಲಕರ್ಣಿ

IMG-20260111-WA0018.jpg

Book “Souharda Bharata” by senior writer Baraguru Ramachandrappa was released at Karnataka Janapada University, Bankapur; speakers highlighted his commitment to equality and harmony.


ಬಂಕಾಪುರ್ | ಹಾವೇರಿ ಜಿಲ್ಲೆ
ಬದುಕು ಮತ್ತು ಬರವಣಿಗೆ ಒಂದಾಗಿರಬೇಕು. ಬದುಕಿಗೆ ಅರ್ಥ ಬರಬೇಕಾದರೆ ಬದ್ಧತೆಯ ಬದುಕು ನಮ್ಮದಾಗಬೇಕು. ಈ ನಿಟ್ಟಿನಲ್ಲಿ ನುಡಿದಂತೆ ನಡೆದವರು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಎಂದು ಸಾಹಿತಿ ಸತೀಶ ಕುಲಕರ್ಣಿ ಹೇಳಿದರು.


ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಗೊಟಗೋಡಿ ಗ್ರಾಮದಲ್ಲಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಇಂದು ನಡೆದ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ‘ಸೌಹಾರ್ದ ಭಾರತ’ ಕೃತಿಯ ಜನಾರ್ಪಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಬರಗೂರು ರಾಮಚಂದ್ರಪ್ಪ ಅವರು 100ಕ್ಕೂ ಹೆಚ್ಚು ತಳ ಸಮುದಾಯಗಳ ಕುರಿತು ಅಧ್ಯಯನ ನಡೆಸಿಸಿದ್ದರು. ಈ ಮೂಲಕ ಅಸ್ತಿತ್ವವೇ ಅರಿಯದ ಅನೇಕ ಸಮುದಾಯಗಳ ಬದುಕಿನ ಅನಾವರಣ ಮಾಡಿದ್ದು, ಇದು ಅವರ ಮಹತ್ವದ ಸಾಮಾಜಿಕ ಕೊಡುಗೆ ಎಂದು ಸತೀಶ ಕುಲಕರ್ಣಿ ಹೇಳಿದರು. ವಹಿಸಿಕೊಂಡ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಮೂಲಕ ಸಮಾನತೆ, ಸಹಬಾಳ್ವೆ ಮತ್ತು ಸಾಮರಸ್ಯದ ಬದುಕಿಗೆ ವಿಶಿಷ್ಟ ಕೊಡುಗೆ ನೀಡಿದವರು ಬರಗೂರು ರಾಮಚಂದ್ರಪ್ಪ ಎಂದು ಅವರು ಪ್ರಶಂಸಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಟಿ.ಎಂ. ಭಾಸ್ಕರ್ ಅವರು, ‘ಸೌಹಾರ್ದ ಭಾರತ’ ಕೃತಿಯ ಆಶಯ ಸಾಕಾರಗೊಳ್ಳಬೇಕಾದರೆ ನಮ್ಮ ಮನೆಯಿಂದಲೇ ಸೌಹಾರ್ದ ಮತ್ತು ಸಮಾನತೆಯ ಬದುಕು ಆರಂಭವಾಗಬೇಕು ಎಂದರು. ಸಂವಿಧಾನವೇ ನಮ್ಮ ಧರ್ಮ ಎಂಬುದಾಗಿ ಪ್ರತಿಪಾದಿಸಿದ ಅವರು, ಇಂದಿನ ಕಲುಷಿತ ಸಾಮಾಜಿಕ ವ್ಯವಸ್ಥೆ ಸರಿದಾರಿಗೆ ಬರಲು ಸಂವಿಧಾನ ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.


ಕೃತಿಯ ಕುರಿತು ಮಾತನಾಡಿದ ಸಹಾಯಕ ಸಂಶೋಧನಾಧಿಕಾರಿ ಡಾ. ಮಲ್ಲಿಕಾರ್ಜುನ ಮಾನ್ಪಡೆ ಅವರು, ಮಾನವೀಯತೆ, ಮೌಲ್ಯ, ಭ್ರಾತೃತ್ವ ಮತ್ತು ಸೌಹಾರ್ದತೆ ಕುಸಿಯುತ್ತಿರುವ ಇಂದಿನ ಸಮಾಜದಲ್ಲಿ ‘ಸೌಹಾರ್ದ ಭಾರತ’ ಕೃತಿ ಯುವ ಪೀಳಿಗೆಗೆ ದಿಕ್ಕು ತೋರಿಸುವ ಮಾರ್ಗದರ್ಶಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಕೆ. ಶಿವಶಂಕರ, ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲಿಂಗಯ್ಯ ಹಿರೇಮಠ, ಡಾ. ರುದ್ರಪ್ಪ ಕರಿಶೆಟ್ಟಿ ಸೇರಿದಂತೆ ಹಲವರು ಮಾತನಾಡಿದರು.
ಸಹಾಯಕ ಪ್ರಾಧ್ಯಾಪಕರಾದ ಡಾ. ಗಿರೇಗೌಡ ಅರಳಿಹಳ್ಳಿ ಸ್ವಾಗತಿಸಿದರು. ಡಾ. ವೆಂಕನಗೌಡ ಪಾಟೀಲ ವಂದಿಸಿದರು. ಡಾ. ಚಂದ್ರಪ್ಪ ಸೊಬಟಿ ಕಾರ್ಯಕ್ರಮ ನಿರೂಪಿಸಿದರು.


ಕಾರ್ಯಕ್ರಮದಲ್ಲಿ ಪ್ರೊ. ರಾಜಶೇಖರ ಕುಂಬಾರ, ಎನ್.ಎಲ್. ನಾರಾಯಣಸ್ವಾಮಿ, ರೇಖಾ ಕಲ್ಮಠ, ಉಮೇಶ ಮಾಳಗಿ, ಜುಬೇದಾ ನಾಯಕ, ಪೃಥ್ವಿರಾಜ ಬೆಟಗೇರಿ, ರೇಣುಕಾ ಗುಡಿಮನಿ, ನೇತ್ರಾವತಿ, ಅನೀತಾ, ಶಿವಯೋಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


ವರದಿ : ನಿಂಗರಾಜ್ ಕುಡಲ್
ಸ್ಥಳ : ಬಂಕಾಪುರ್, ಹಾವೇರಿ ಜಿಲ್ಲೆ

About The Author