Headlines

ರಿಪ್ಪನ್ ಪೇಟೆ ಯಲ್ಲಿ ರೋಟರಿ ಭವನ ಉದ್ಘಾಟನೆ :

 ರಿಪ್ಪನ್ ಪೇಟೆ : ರೋಟರಿ ಸಂಸ್ಥೆ ಅಂತರರಾಷ್ಟ್ರೀಯ ಸಂಸ್ಥೆಯಾಗಿದ್ದು ರೋಟರಿಯ ಮೂಲ ಉದ್ದೇಶ ಸಮಾಜ ಸೇವೆಯಾಗಿದೆ. ಆರೋಗ್ಯ ಶಿಕ್ಷಣ ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ  ರೋಟರಿ ಸಂಸ್ಥೆಯು ಮುಂಚೂಣಿಯಲ್ಲಿದೆ ಎಂದು ರೋಟರಿ 31 82ರ ಜಿಲ್ಲಾ ಗವರ್ನರ್ ಎಂ ಜಿ ರಾಮಚಂದ್ರಮೂರ್ತಿ ಹೇಳಿದರು.  ರಿಪ್ಪನ್ ಪೇಟೆ ಯಲ್ಲಿ ನೂತನವಾಗಿ ನಿರ್ಮಾಣವಾದ ರೋಟರಿ ಭವನವನ್ನು ಉದ್ಘಾಟಿಸಿ ಮಾತನಾಡಿದ ಅವರು  ಸಮಾಜಸೇವೆಯ ಮೂಲಕ ಪ್ರತಿಯೊಬ್ಬರೂ ನೆಮ್ಮದಿಯ ಬದುಕನ್ನು ಕಂಡುಕೊಳ್ಳಬಹುದು ಎಂಬುದಕ್ಕೆ ರೋಟರಿ ಸಂಸ್ಥೆಯ ಕಾರ್ಯವೈಖರಿಗಳು ಉತ್ತಮ ಉದಾಹರಣೆಗಳಾಗಿವೆ. ಮಾನವ ಜಗತ್ತಿನಿಂದ ಪೋಲಿಯೋ…

Read More

ಹೊಸನಗರದ ಮಹಿಳೆ ಇಬ್ಬರು ಮಕ್ಕಳೊಂದಿಗೆ ನಾಪತ್ತೆ – ಸುಳಿವು ಸಿಕ್ಕರೆ ಪೊಲೀಸರಿಗೆ ಮಾಹಿತಿ ನೀಡಿ|missing

ಹೊಸನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಲುಸಾಲೆ ಮಳವಳ್ಳಿ ಗ್ರಾಮ ವಾಸಿ ಸದಾನಂದ ಎಂ.ಎಂ. ಎಂಬುವವರ ಪತ್ನಿ ಗೀತಾ (30) ಎಂಬ ಮಹಿಳೆಯು ತನ್ನ 11 ವರ್ಷದ ಮಗಳು ಪ್ರಿಯಾಂಕ ಹಾಗೂ 9 ವರ್ಷದ ಮಗ ಪ್ರಸಾದ್ ಇವರುಗಳನ್ನು ಕರೆದುಕೊಂಡು ಏ.11 ರಿಂದ ಕಾಣೆಯಾಗಿದ್ದು, ಈವರೆಗೂ ವಾಪಾಸ್ಸಾಗಿರುವುದಿಲ್ಲ. ಈಕೆಯ ಚಹರೆ ದುಂಡುಮುಖ, ಸಾಧಾರಣ ಮೈಕಟ್ಟು, 5 ಅಡಿ ಎತ್ತರ, ಎಡಕೆನ್ನೆಯ ಮೇಲೆ ಹಳೆ ಗಾಯದ ಗುರುತು ಇರುತ್ತದೆ. ಕೆಂಪು ಬಣ್ಣದ ಚೂಡಿದಾರ್ ಧರಿಸಿರುತ್ತಾರೆ. ಕನ್ನಡ ಭಾಷೆ ಮಾತನಾಡುತ್ತಾರೆ. ಈ…

Read More

ರಿಪ್ಪನ್ ಪೇಟೆ :ಭೀಕರ ಅಪಘಾತ , ಮರಕ್ಕೆ ಗುದ್ದಿದ ಮರಳು ತುಂಬಿದ್ದ ಟಿಪ್ಪರ್

ರಿಪ್ಪನ್ ಪೇಟೆ : ಇಲ್ಲಿನ ಸಮೀಪದ ಅರಸಾಳು ಬಳಿ ಮರಳು ತುಂಬಿದ್ದ ಟಿಪ್ಪರ್ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿದ ಪರಿಣಾಮ ಚಾಲಕನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಹೊಸನಗರದಿಂದ ಶಿವಮೊಗ್ಗಕ್ಕೆ ಮರಳು ತುಂಬಿಕೊಂಡು ಹೋಗುವಾಗ ಅರಸಾಳು ಸಮೀಪದ 9ನೇ ಮೈಲಿಕಲ್ ನಲ್ಲಿ ಬೆಳಗಿನಜಾವ ಈ ಘಟನೆ ಸಂಭವಿಸಿದೆ. ಅಪಘಾತದ ರಭಸಕ್ಕೆ ಟಿಪ್ಪರ್ ಸಂಪೂರ್ಣ ನಜ್ಜುಗುಜ್ಜಾಗಿದ್ದು ಟಿಪ್ಪರ್ ಒಳಗೆ ಸಿಲುಕಿಕೊಂಡಿದ್ದ ಚಾಲಕನನ್ನು ಜೆಸಿಬಿ ಯಂತ್ರದ ಮೂಲಕ ಹೊರತೆಗೆಲಾಯಿತು. ಚಾಲಕನನ್ನು ಶಿವಮೊಗ್ಗದ ಮೆಗ್ಗಾನ್ ಗೆ ದಾಖಲಿಸಲಾಗಿದೆ.ಚಾಲಕ ಹೊಸನಗರ…

Read More

26 ಸಾವಿರ ಮೌಲ್ಯದ ಮರ ಮುಟ್ಟುಗಳನ್ನು 1ಕೋಟಿ ರೂಪಾಯಿಗೆ ಹರಾಜು ಕೂಗಿದ ಜನಪರ ಹೋರಾಟಗಾರ…..!!!!? ತಬ್ಬಿಬ್ಬಾದ ಅಧಿಕಾರಿಗಳು….

ರಿಪ್ಪನ್ ಪೇಟೆ : ಪಟ್ಟಣದಲ್ಲಿನ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ 26 ಸಾವಿರ ಮೌಲ್ಯದ ಹಳೆ ಕಟ್ಟಡದ ಸಾಮಗ್ರಿಗಳಾದ ಮರ ಮುಟ್ಟು ಗಳನ್ನು ಹರಾಜಿನಲ್ಲಿ 1 ಕೋಟಿ ರೂಪಾಯಿಗೆ ಹರಾಜು ಕರೆದ ಪ್ರಸಂಗ ಇಂದು ರಿಪ್ಪನ್ ಪೇಟೆ ಪಟ್ಟಣದಲ್ಲಿ ನಡೆದಿದೆ. ಹಳೆ ನಾಟಕ್ಕೆ ಸರ್ಕಾರಿ ಮೌಲ್ಯ 26,388 ನಿಗದಿ ಮಾಡಿತ್ತು.ಇಂದು ಹರಾಜು ಪ್ರಕ್ರಿಯೆಯಲ್ಲಿ ಮೊದಲು 2 ಸಾವಿರದಿಂದ ಹರಾಜು ಪ್ರಾರಂಭವಾಗಿ ಹರಾಜುದಾರರು 4 ಸಾವಿರ ಎಂದು ಕೂಗುತಿದ್ದಾಗ ಸಾಮಾಜಿಕ ಹೋರಾಟಗಾರ ಟಿ ಆರ್ ಕೃಷ್ಣಪ್ಪ…

Read More

ಜಿಲ್ಲಾಧಿಕಾರಿಗಳಿಂದ ಜೋಗ ಭೇಟಿ : ಕಾಮಗಾರಿಗಳ ಪರಿಶೀಲನೆ

ಜಿಲ್ಲಾಧಿಕಾರಿಗಳಿಂದ ಜೋಗ ಭೇಟಿ : ಕಾಮಗಾರಿಗಳ ಪರಿಶೀಲನೆ ಶಿವಮೊಗ್ಗ ಏ.24: ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿಯವರು ಶುಕ್ರವಾರ ಜೋಗಕ್ಕೆ ಭೇಟಿ ನೀಡಿ ಪ್ರವಾಸೋದ್ಯಮ ಇಲಾಖೆ ಹಾಗೂ ಜೋಗ ನಿರ್ವಹಣಾ ಪ್ರಾಧಿಕರದ ವತಿಯಿಂದ ಕೈಗೊಂಡಿರುವ ವಿವಿಧ ಅಭಿವೃದ್ದಿ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿ, ಸೂಕ್ತ ಸಲಹೆ ಸೂಚನೆಗಳನ್ನು ಸಂಬಂಧಿಸಿದ ಅಧಿಕಾರಿಗಿಗೆ ನೀಡಿದರು. ಜೋಗದಲ್ಲಿ ಕೈಗೊಂಡಿರುವ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು, ಮತ್ತು ನಿಗದಿತ ಅವಧಿಯೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪ್ರವಾಸಿಗರಿಗಾಗಿ ಕೈಗೊಂಡಿರುವ ವಿವಿಧ ಕಾಮಗಾರಿಗಳು, ಪ್ರವಾಸಿಗರಿಗೆ ಅಗತ್ಯವಿರುವ ಕುಡಿಯುವ ನೀರು,…

Read More

ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಅರಸಾಳು ಹೊನ್ನಪ್ಪ ಹೃದಯಘಾತದಿಂದ ನಿಧನ

ರಿಪ್ಪನ್ ಪೇಟೆ : ಅರಸಾಳು ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಅರಸಾಳು ಹೊನ್ನಪ್ಪ ಎಂ. ಬಿ.(76) ಇಂದು ಸಂಜೆ 4 ಗಂಟೆಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಹೃದಯಘಾತದಿಂದ ನಿಧನರಾಗಿದ್ದಾರೆ. ಕಳೆದ ಕೆಲವು ದಶಕಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಹೊನ್ನಪ್ಪ ರವರು ಪಕ್ಷದ ಕಾರ್ಯ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿದ್ದರು. ಮೃತರು ಪತ್ನಿ.ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ನಾಳೆ ಮಧ್ಯಾಹ್ನ ಅರಸಾಳು ಗ್ರಾಮದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು…

Read More

Hosanagara | ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಕಾರ್ಯಾಂಗದ ಪಾತ್ರ ಹಿರಿದು : ಶಾಸಕ ಬೇಳೂರು ಗೋಪಾಲಕೃಷ್ಣ

ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಕಾರ್ಯಾಂಗದ ಪಾತ್ರ ಹಿರಿದು : ಶಾಸಕ ಬೇಳೂರು ಗೋಪಾಲಕೃಷ್ಣ ಹೊಸನಗರ : ಸರ್ಕಾರಿ ಯೋಜನೆಗಳನ್ನು ಜಾರಿ ಮಾಡಿ ಯಶಸ್ವಿಗೊಳಿಸುವ ಹೊಣೆಗಾರಿಕೆ ಇಲಾಖಾ ನೌಕರರ ಮೇಲಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು. ಅವರು ಇಲ್ಲಿನ ಈಡಿಗರ ಭವನದಲ್ಲಿ ಏರ್ಪಡಿಸಿದ್ದ ರಾಜ್ಯ ಸರ್ಕಾರಿ ನೌಕರರ ತಾಲೂಕು ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ನನ್ನ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಸಮಸ್ಯೆಗಳಿಗೆ ಸ್ಪಂದಿಸಲು ನಾನು ಸಿದ್ದನಿದ್ದೇನೆ. ಅವರ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ನಡೆಸುತ್ತೇನೆ….

Read More

ಪ್ರಧಾನಿ‌ ಮೋದಿಗೆ ಪಂಜಾಬ್ ಸರಕಾರ ಅವಮಾನ ಮಾಡಿದ್ದನ್ನು ಖಂಡಿಸಿ ರಿಪ್ಪನ್ ಪೇಟೆ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಪಂಜಿನ ಮೆರವಣಿಗೆ :

ರಿಪ್ಪನ್ ಪೇಟೆ : ಪ್ರಧಾನಿ ಮೋದಿ ಅವರಿಗೆ ಅವಮಾನ ಮಾಡಿರುವ ಮತ್ತು ಅವರ ಪ್ರಯಾಣಕ್ಕೆ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸಿರುವ ಪಂಜಾಬ್ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿ ವಿನಾಯಕ ವೃತ್ತದಲ್ಲಿ  ಬಿಜೆಪಿ ಮಹಾಶಕ್ತಿ ಕೇಂದ್ರ ಘಟಕದ ವತಿಯಿಂದ ಪಂಜಿನ ಮೆರವಣಿಗೆ ನಡೆಸಲಾಯಿತು. ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಎಂ ಬಿ ಮಂಜುನಾಥ್ ಮಾತನಾಡಿ ಪ್ರಧಾನಿ ಮೋದಿ ನಿನ್ನೆ ಪಂಜಾಬ್ ನಲ್ಲಿರುವ ಭಟಿಂಡಾದಿಂದ ಫಿರೋಜ್ ಪುರದ ಹುಸೇನ್ ವಾಲಾದಲ್ಲಿರುವ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡಬೇಕಿತ್ತು. ಅಲ್ಲಿ ಅವರು ಭಗತ್ ಸಿಂಗ್…

Read More

ರಿಪ್ಪನ್‌ಪೇಟೆ – ಬ್ಯಾಂಕ್ ನೋಟಿಸಿಗೆ ಹೆದರಿ ರೈತ ಆತ್ಮಹತ್ಯೆ|crime news

ರಿಪ್ಪನ್‌ಪೇಟೆ;- ಸಮೀಪದ ಮೂಗುಡ್ತಿ ಗ್ರಾಮದ ಕೋಮಲಾಪುರ ನಿವಾಸಿ ಮಂಜನಾಯ್ಕ್ (85) ಸಾಲದ ಬಾಧೆಯಿಂದ ಕಳೆನಾಶಕ ಸೇವಿಸಿ ಸಾವನ್ನಪ್ಪಿರುವ ಘಟನೆ ರಿಪ್ಪನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಜುನಾಯ್ಕ್ ಬಿನ್ ಕೊಲ್ಲನಾಯ್ಕ  ಸುಮಾರು (85) ವರ್ಷಎಂಬುವರಿಗೆ  ತಕ್ಷಣ ಅವರನ್ನು ರಿಪ್ಪನ್‌ಪೇಟೆಯ ಸರ್ಕಾರಿ ಅಸ್ಪತ್ರೆಗೆ ಚಿಕಿತ್ಸಗಾಗಿ ಕರೆತರಲಾಗಿದ್ದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಮೆಗ್ಗಾನ್ ಅಸ್ಪತ್ರೆಗೆ ದಾಖಲಿಸಲಾಗಿತು ಚಿಕಿತ್ಸೆ ಫಲಕಾರಿಯಾಗಿದೆ ಇಂದು ಬೆಳಗ್ಗೆ ನಿಧನ ಹೊಂದಿದ್ದಾರೆ. 3 ಇವರು ತಳಲೆ ವಿ.ಎಸ್.ಎಸ್.ಎನ್.ಬಿ.ಯಲ್ಲಿ 1.15.000 ಬೆಳೆ ಸಾಲ ಮತ್ತು 50.000.00 ಸಾವಿರ ವೈಯಕ್ತಿಕ…

Read More

ಹೆಂಚು ಹಾಕುವಾಗ ಕೆಳಗೆ ಬಿದ್ದು ಯುವಕ ಸಾವು – ಗುತ್ತಿಗೆದಾರ ಹಾಗೂ ಮನೆ ಮಾಲೀಕನ ವಿರುದ್ದ ದೂರು | Crime News

ಹೆಂಚು ಹಾಕುವಾಗ ಕೆಳಗೆ ಬಿದ್ದು ಯುವಕ ಸಾವು – ಗುತ್ತಿಗೆದಾರ ಹಾಗೂ ಮನೆ ಮಾಲೀಕನ ವಿರುದ್ದ ದೂರು ನ್ಯಾಮತಿ : ಇಲ್ಲಿನ ಸುರಹೊನ್ನೆ ಗ್ರಾಮದ ಮನೆಯ ಮುಂಭಾಗ ಹೆಂಚು ಹಾಕುತ್ತಿರುವಾಗ ಆಕಸ್ಮಿಕವಾಗಿ ಕೆಳಗೆ ಬಿದ್ದು ಯುವಕ ಮೃತಪಟ್ಟ ಘಟನೆ ಬುಧವಾರ ನಡೆದಿದೆ. ಶಿವಮೊಗ್ಗ ತಾಲ್ಲೂಕಿನ ಅನುಪಿನಕಟ್ಟೆ ಗ್ರಾಮದ ಯೋಗೇಶನಾಯ್ಕ (23) ಮೃತ ಯುವಕ.ಸುರಹೊನ್ನೆ ಗ್ರಾಮದ ಪ್ರಸನ್ನಕುಮಾರ ಅವರ ಮನೆ ಮುಂಭಾಗದಲ್ಲಿ ಹೆಂಚು ಹಾಕುವಾಗ ಮೇಲಿನಿಂದ ಕೆಳಗೆ ಬಿದ್ದಿದ್ದಾರೆ. ತಲೆಗೆ, ಮೈಕೈಗೆ ಪೆಟ್ಟು ಬಿದ್ದಿದ್ದು, ಚಿಕಿತ್ಸೆಗಾಗಿ ಶಿವಮೊಗ್ಗ ಮೆಗ್ಗಾನ್…

Read More