ಖ್ಯಾತ ಅಂಕಣಕಾರ,ಲೇಖಕ ಕೆ ಅರುಣ್ ಪ್ರಸಾದ್ ರವರ ಎರಡನೇ ಪುಸ್ತಕ ಬಿಡುಗಡೆ :
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರ ಸಮೀಪದ ಯಡೇಹಳ್ಳಿಯಲ್ಲಿ ಉದ್ಯಮದಲ್ಲೇ ಹೊಸ ಅಲೆಯನ್ನೇ ಎಬ್ಬಿಸಿದಂತಹ ಖ್ಯಾತ ಉದ್ಯಮಿ, ಅಂಕಣಕಾರ, ಲೇಖಕ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಕೆ, ಅರುಣ್ ಪ್ರಸಾದ್ ರವರ ಎರಡನೇ ಪುಸ್ತಕ ಬಿಡುಗಡೆಗೊಳಿಸಲಾಯಿತು. ಕಥಾ ಪುಸ್ತಕವಾದ ” ಭಟ್ಟರ ಬೊಂಡಾದ ಬಾಂಡ್ಲಿಯಲ್ಲಿ ಬಿಲಾಲಿ ಬಿಲ್ಲಿ ಅಭ್ಯಂಜನ” ಪುಸ್ತಕವನ್ನು ಖ್ಯಾತ ಜಲತಜ್ಞ ಶಿವಾನಂದ ಕಳವೆ ಬಿಡುಗಡೆ ಮಾಡಿದರು. ಇನ್ನೂ ಈ ಪುಸ್ತಕದಲ್ಲಿ ಆನಂದಪುರ ಕೇಂದ್ರವಾಗಿಸಿ ಗ್ರಾಮೀಣ ಬದುಕಿನ ಅನುಭವವನ್ನು ಕಥಾ ರೂಪದಲ್ಲಿ ಬರೆದಿದ್ದಾರೆ ಈ…