Accident | ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಇಳಿದ ಖಾಸಗಿ ಬಸ್ – ತಪ್ಪಿದ ಭಾರಿ ಅನಾಹುತ
ಚಾಲಕನ ನಿಯಂತ್ರಣ ತಪ್ಪಿ 50 ಮಂದಿ ಪ್ರಯಾಣಿಕರನ್ನು ಹೊತ್ತೊಯುತ್ತಿದ್ದ ಖಾಸಗಿ ಬಸ್ ಕೆರೆಗೆ ಇಳಿದ ಘಟನೆ ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಕುಪ್ಪುಗುಡ್ಡೆ ಯಲ್ಲಿ ನಡೆದಿದೆ.
ಆನವಟ್ಟಿಯಿಂದ ಸೊರಬ ಕಡೆಗೆ ತೆರಳುತಿದ್ದ ಪೂರ್ಣಚಂದ್ರ ಎಂಬ ಖಾಸಗಿ ಬಸ್‌ವೊಂದು ಕೆರೆಗೆ ಇಳಿದ ಘಟನೆಯೊಂದು ನಡೆದಿದೆ. ಕೊರಕೋಡು ಕ್ರಾಸ್ ಬಳಿಯಲ್ಲಿ ಬರುತ್ತಿದ್ದ ಬಸ್ ಇದ್ದಕ್ಕಿದ್ದ ಹಾಗೆ ಕೆರೆಗೆ ಇಳಿದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಏನೂ ಆಗಲಿಲ್ಲ. ಬಸ್‌ನಲ್ಲಿ 50 ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಘಟನೆ ನಡೆದ ತಕ್ಷಣ ಸ್ಥಳೀಯರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಪ್ರಯಾಣಿಕರಿಗೆ ನೆರವು ನೀಡಿ ಸಮಯ ಪ್ರಜ್ಞೆ ಮೆರೆದಿದ್ದಾರೆ.
ಬಸ್ಸು ಕೆರೆ ಏರಿ ಮೇಲೆ ಬರುತ್ತಿದ್ದಾಗ ಬಸ್ ರಸ್ತೆಯಿಂದ ಕೆಳಕ್ಕೆ ಇಳಿದಿದೆ. ಅಲ್ಲಿಯೇ ಇದ್ದ ಕರೆಂಟ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದರಿಂದ ಸ್ಪೀಡ್ ಕಡಿಮೆಯಾಗಿ ಬಸ್ ಪಲ್ಟಿಯಾಗುವುದು ತಪ್ಪಿದೆ. ಇನ್ನೂ ಕೆರೆಯ ತಡೆಗಲ್ಲಿಗೆ ಬಸ್ ಚಕ್ರ ಸಿಲುಕಿದ್ದರಿಂದ ಆಗಬಹುದಾದ ಅಪಾಯ ತಪ್ಪಿದೆ ಎಂದು ಸ್ಥಳೀಯರು ಹೇಳುತ್ತಾರೆ.
ಘಟನೆಯಲ್ಲಿ ಯಾರಿಗೂ ಗಂಭೀರ ಗಾಯಗಳಾಗಿರುವುದಿಲ್ಲ, ಸೊರಬ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.