Accident | ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ – ಓರ್ವ ಸಾವು, ಇಬ್ಬರು ಗಂಭೀರ
ಶಿವಮೊಗ್ಗ : ಇಲ್ಲಿನ ನಿದಿಗೆ ಕೆರೆಯ ಬಳಿ ಇಂದು ಬೆಳಿಗ್ಗೆ ರೆನಾಲ್ಡ್(Renault) ಕಾರು ಹಾಗೂ ವ್ಯಾಗನರ್(waganor) ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಿಂದಾಗಿ ಇಬ್ಬರು ಗಾಯಗೊಂಡಿದ್ದು ಓರ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತ ವ್ಯಕ್ತಿಯನ್ನು ಮೇಘರಾಜ್ ಎಂದು ಗುರುತಿಸಲಾಗಿದ್ದು ಈತನು ಶಾಂತಲಾ ಫ್ಯಾಕ್ಟರಿಯ ಮಾರ್ಕೆಟಿಂಗ್ ಮ್ಯಾನೇಜರ್ ಎಂದು ಹೇಳಲಾಗುತ್ತಿದೆ.
ಲಿಂಗದಹಳ್ಳಿಯಿಂದ ಬರುತ್ತಿದ್ದ ರೆನಾಲ್ಡ್ ಕಾರು ಶಿವಮೊಗ್ಗದಿಂದ ಮಾಚೇನಹಳ್ಳಿಗೆ ಹೋಗುತ್ತಿದ್ದ ವ್ಯಾಗನರ್ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಲ್ಲಲ್ಲಿ ರೋಡ್ ಕ್ರಾಸಿಂಗ್ ಮಾಡಿ ಏಕಮುಖ ಸಂಚಾರ ನಿಗದಿ ಮಾಡಲಾಗಿದ್ದು ಆದರೆ ಈ ಬಗ್ಗೆ ಸರಿಯಾದ ನಾಮಫಲಕವಿಲ್ಲದ ಕಾರಣ ದಾರಿಯಲ್ಲಿ ಬರುತ್ತಿರುವ ವಾಹನಗಳಿಗೆ ಗೊತ್ತಾಗುತ್ತಿಲ್ಲ.ಈ ಭೀಕರ ಘಟನೆಗೂ ಇದೇ ಕಾರಣ ಎಂದು ಸ್ಥಳೀಯರು ಹೇಳುತಿದ್ದಾರೆ.
ರೆನಾಲ್ಡ್ ಕಾರಿನ ಚಾಲಕ ಇನ್ನೊಂದು ಬದಿಯಲ್ಲಿ ಸಾಗಬೇಕಿತ್ತು, ಒನ್ ವೇನಲ್ಲಿ ಬಂದ ಕಾರು ಎದುರಿಗೆ ಬರುತ್ತಿದ್ದ ವ್ಯಾಗನರ್‌ಗೆ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ವ್ಯಾಗನರ್ ಕಾರು ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಗಾಯಾಳುಗಳ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಾಗಿದೆ.
ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.