w
Headlines
Home » ಕ್ಲಸ್ಟರ್ ಮಟ್ಟದ ಕ್ರೀಡಾಕೂಟ – ರಾಮಕೃಷ್ಣ ವಸತಿ ವಿದ್ಯಾಲಯಕ್ಕೆ ಸಮಗ್ರ ಪ್ರಶಸ್ತಿ

ಕ್ಲಸ್ಟರ್ ಮಟ್ಟದ ಕ್ರೀಡಾಕೂಟ – ರಾಮಕೃಷ್ಣ ವಸತಿ ವಿದ್ಯಾಲಯಕ್ಕೆ ಸಮಗ್ರ ಪ್ರಶಸ್ತಿ

GridArt 20240826 204146600.jpg

ಕ್ಲಸ್ಟರ್ ಮಟ್ಟದ ಕ್ರೀಡಾಕೂಟ – ರಾಮಕೃಷ್ಣ ವಸತಿ ವಿದ್ಯಾಲಯಕ್ಕೆ ಸಮಗ್ರ ಪ್ರಶಸ್ತಿ


ಸಾಗರ : ಇಲ್ಲಿನ ಎಂ ಎಲ್ ಹಳ್ಳಿಯಲ್ಲಿರುವ  ಶ್ರೀ ರಾಮಕೃಷ್ಣ ವಸತಿ ವಿದ್ಯಾಲಯದ ಮಕ್ಕಳು ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ ಪಡೆದಿದ್ದಾರೆ.

ದಿನಾಂಕ 24.08.2024 ಮತ್ತು 25. 08. 2024 ರಂದು ನಡೆದ ಎಂ,ಎಲ್ ಹಳ್ಳಿ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ

ಬಾಲಕರ ಕಬಡ್ಡಿ ಪ್ರಥಮ , ಬಾಲಕರ ಖೋ ಖೋ ಪ್ರಥಮ , ಬಾಲಕರ ಥ್ರೋಬಾಲ್ ಪ್ರಥಮ ,ಬಾಲಕರ ವಾಲಿಬಾಲ್ ಪ್ರಥಮ ,  ಬಾಲಕರ 4X100 ರಿಲೇ ಪ್ರಥಮ , ಬಾಲಕರ 100 ಮೀಟರ್ ಓಟ 1st ,2nd


ಸಮರ್ಥ್ ಜಿ, 7ನೇ ತರಗತಿ ಇವನು 100 ಮೀಟರ್ ಓಟ ಪ್ರಥಮ, 600 ಮೀಟರ್ ಓಟ ಪ್ರಥಮ, ಹೈಜಂಪ್  ದ್ವಿತೀಯ, ಖೋ ಪ್ರಥಮ ಸ್ಥಾನ ಪಡೆದು ವೀರಾಗ್ರಣಿ ಪ್ರಶಸ್ತಿ ಪಡೆದಿರುತ್ತಾನೆ.

ಹಲವು ಕ್ರೀಡೆಗಳಲ್ಲಿ ಪ್ರಥಮ, ದ್ವಿತೀಯ ಸ್ಥಾನ ಪಡೆಯುವುದರೊಂದಿಗೆ ಸಮಗ್ರ ಪ್ರಶಸ್ತಿ ಪಡೆದು ಶಾಲೆಗೆ ಕೀರ್ತಿ ತಂದಿರುವ ಎಲ್ಲಾ ಮಕ್ಕಳ ಸಾಧನೆಯನ್ನು ಆಡಳಿತ ಮಂಡಳಿ, ಪ್ರಾಂಶುಪಾಲರು, ದೈಹಿಕ ಶಿಕ್ಷಕರು ಮತ್ತು ಎಲ್ಲಾ ಶಿಕ್ಷಕರು ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.