ಕೊನೆಗೂ ಸಿಕ್ಕಿತು ಬಡ ವೃದ್ದೆಗೆ ವೃದ್ದಾಪ್ಯ ವೇತನ – ಇದು POSTMAN NEWS ವರದಿಯ ಫಲಶ್ರುತಿ
ರಿಪ್ಪನ್‌ಪೇಟೆ : ಕಳೆದ ಆರೇಳು ತಿಂಗಳುಗಳಿಂದ ತನ್ನ ಬದುಕಿನ ತುತ್ತಿನ ಚೀಲ ತುಂಬಿಸಿಕೊಳ್ಳಲು ಸರ್ಕಾರ ನೀಡಿದ ವೃದ್ದಾಪ್ಯ ವೇತನವನ್ನು ಪಡೆಯಲು ಹತ್ತಾರು ಬಾರಿ ಬ್ಯಾಂಕ್ ಗೆ ಅಲೆದಾಡಿ ಒದ್ದಾಟ ನಡೆಸಿದ ಬಡ ವೃದ್ದೆಗೆ ಕೊನೆಗೂ ಸಿಕ್ಕಿತು ವೃದ್ದಾಪ್ಯ ವೇತನ…
ಹೌದು… ಬೆಳ್ಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡ 80 ವರ್ಷದ ವೃದ್ದೆಗೆ ಸರ್ಕಾರದಿಂದ ವೃದ್ದಾಪ್ಯ ವೇತನ ಬರುತಿದ್ದು ಅದನ್ನು ನೀಡುವಲ್ಲಿ ಪಟ್ಟಣದ ಕೆನರಾ ಬ್ಯಾಂಕ್ ಮ್ಯಾನೇಜರ್ ಕಳೆದ ಎಂಟು ತಿಂಗಳಿಂದ ನೀಡಿಲ್ಲವೆಂಬ ಮಾಹಿತಿಯನ್ನಾಧರಿಸಿ ಪೋಸ್ಟ್ ಮ್ಯಾನ್ ನ್ಯೂಸ್ ನೊಂದಿಗೆ ಬಡ ವೃದ್ದೆ ತಮ್ಮ ಅಳಲನ್ನು ತೋಡಿಕೊಂಡ ಹಿನ್ನಲೆಯಲ್ಲಿ ವೃದ್ದೆಗೆ ವೃದ್ದಾಪ್ಯ ವೇತನವನ್ನು ಕೊಡಿಸುವ ಸದುದ್ದೇಶದಿಂದ ವಿಸ್ತೃತ ವರದಿಯನ್ನು ಪ್ರಕಟಿಸಲಾಗಿತ್ತು.
ಈ ಬಗ್ಗೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ನೊಂದ ಬಡ ವೃದ್ದೆಯು ನನ್ನ ವೃದ್ದಾಪ್ಯ ವೇತನವನ್ನು ಕೊಡಿಸುವಂತೆ ದೂರು ದಾಖಲಿಸಿದ ಹಿನ್ನಲೆಯಲ್ಲಿ ಠಾಣಾ ಪಿಎಸ್‌ಐ ಪ್ರವೀಣ್ ಎಸ್ ಪಿ ಕೆನರಾ ಬ್ಯಾಂಕ್ ಮ್ಯಾನೇಜರ್ ರವರನ್ನು ಕರೆಸಿ ಪರಿಶೀಲನೆ ನಡೆಸಿ ವೃದ್ದೆಯ ಹಣವನ್ನು ನೀಡುವ ಬಗ್ಗೆ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ವೃದ್ದೆಗೆ ವೃದ್ದಾಪ್ಯ ವೇತನ ನೀಡುವಂತೆ ತಿಳಿಸಿದ್ದರು.
ಈ ಹಿನ್ನಲೆಯಲ್ಲಿ ಇಂದು ಬಡ ವೃದ್ದೆಯನ್ನು ಬ್ಯಾಂಕ್ ಗೆ ಕರೆಸಿಕೊಂಡ ಕೆನರಾ ಬ್ಯಾಂಕ್ ನ ಮ್ಯಾನೇಜರ್, ಬಡ ವೃದ್ದೆಗೆ ಸಲ್ಲಬೇಕಾದ ವೃದ್ದಾಪ್ಯ ವೇತನವನ್ನು ನೀಡಿದರು.
ನಂತರ ಪೋಸ್ಟ್ ಮ್ಯಾನ್ ನ್ಯೂಸ್ ನೊಂದಿಗೆ ಮಾತನಾಡಿದ ವೃದ್ದೆ ದೇವಮ್ಮ ಕಳೆದ ಕೆಲವು ತಿಂಗಳುಗಳಿಂದ ವೃದ್ದಾಪ್ಯ ವೇತನಕ್ಕೆ ಅಲೆದಾಡುತಿದ್ದ ನನಗೆ ನ್ಯಾಯ ದೊರಕಿಸಿಕೊಟ್ಟ ಪಟ್ಟಣದ ಪಿಎಸ್‌ಐ ಪ್ರವೀಣ್ ಎಸ್ ಪಿ ಹಾಗೂ ಸಿಬ್ಬಂದಿಗಳಿಗೆ ಮತ್ತು ಪೋಸ್ಟ್ ಮ್ಯಾನ್ ಸುದ್ದಿ ಸಂಸ್ಥೆಗೆ ಅಭಿನಂದನೆಗಳನ್ನು ಸಲ್ಲಿಸಿದರು.