ಮೂರು ದಿನಗಳ ಹಿಂದೆ ಪತ್ರಕರ್ತ ವಿನೀತ್ ನರೈನ್ ಬಹಿರಂಗವಾಗಿ ಫೇಸ್‌ಬುಕ್ ಪೋಸ್ಟ್‌ನಲ್ಲಿ, ಚಂಪತ್ ರಾಯ್ ಮತ್ತು ಅವರ ಸಹೋದರರು ಬಿಜ್ನೋರ್‌ನಲ್ಲಿ ಭೂ ಕಬಳಿಕೆಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದ್ದರು.
ಉತ್ತರಪ್ರದೇಶ (ಜೂನ್ 21); ಶತಮಾನಗಳಿಂದ ಇತ್ಯರ್ಥವಾದಗ ರಾಮ ಜನ್ಮಭೂಮಿ ವಿವಾದಕ್ಕೆ ಸುಪ್ರೀಂ ಕೋರ್ಟ್ ಪೂರ್ಣ ವಿರಾಮ ಇಡುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ರಾಮ ಮಂದಿರ ನಿರ್ಮಾಣಕ್ಕೆ ಕಳೆದ ವರ್ಷ ಭೂಮಿ ಪೂಜೆ ನೆರವೇರಿಸಿ ದ್ದರು. ಅಲ್ಲದೆ, ದೇವಾಲಯ ನಿರ್ಮಾಣಕ್ಕೆ ಅಯೋಧ್ಯೆಯ ರಾಮ ಜನ್ಮಭೂಮಿ ಟ್ರಸ್ಟ್ ಅನ್ನು ನಿರ್ಮಿಸಿ, ದೇಶದಾದ್ಯಂತ ದೇಣಿಗೆ ಸಂಗ್ರಹಿಸಲಾಗಿತ್ತು. ರಾಮ ಜನ್ಮಭೂಮಿ ಹೆಸರಿನಲ್ಲಿ ಅಯೋಧ್ಯೆಯಲ್ಲಿ ಅಪಾರ ಭೂಮಿಯನ್ನೂ ಖರೀದಿ ಮಾಡಲು ಟ್ರಸ್ಟ್ ಮುಂದಾಗಿತ್ತು. ಆದರೆ, ಹೀಗೆ ಖರೀದಿ ಮಾಡಲಾದ ಭೂಮಿ ಹೆಸರಿನಲ್ಲಿ ನಿರಂತರವಾಗಿ ಭ್ರಷ್ಟಾಚಾರದ ಆರೋಪಗಳು ಕೇಳಿ ಬರುತ್ತಲೇ ಇದೆ. ಹೀಗೆ ಆರೋಪ ಮಾಡಿದ ಉತ್ತರ ಪ್ರದೇಶದ ಪತ್ರಕರ್ತ ವಿನೀತ್ ನರೈನ್ ಸೇರಿದಂತೆ 18 ಜನರ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅಯೋಧ್ಯೆಯಲ್ಲಿ ವಿವಾದಾತ್ಮಕ ಭೂ ವ್ಯವಹಾರಗಳ ಬಗ್ಗೆ ಪ್ರಶ್ನೆಗಳನ್ನು ಎದುರಿಸುತ್ತಿರುವ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮುಖಂಡ ಮತ್ತು ರಾಮ ಮಂದಿರ ಟ್ರಸ್ಟ್‌ನ ಕಾರ್ಯದರ್ಶಿ ಚಂಪತ್ ರಾಯ್ ಅವರ ಸಹೋದರರ ದೂರಿನ ಮೇರೆಗೆ ಈ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಭೂ ಅಕ್ರಮ ಆರೋಪಗಳ ಬಗ್ಗೆ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಆ ಬಗ್ಗೆ ವಿಚಾರಣೆ ನಡೆಸಿರುವ ಬಿಜ್ನೋರ್ ಪೊಲೀಸ್ ಮುಖ್ಯಸ್ಥರು ಈಗಾಗಲೇ ಚಂಪತ್ ರಾಯ್ ಮತ್ತು ಅವರ ಸಹೋದರರಿಗೆ “ಕ್ಲೀನ್ ಚಿಟ್” ನೀಡಿದ್ದಾರೆ. ತನಿಖೆ ಮುಂದುವರೆದಿದೆ ಎಂದು ಹೇಳುತ್ತಾರೆ. ಆದರೆ, ಟ್ರಸ್ಟ್ ವಿರುದ್ಧ ಕ್ರಮಕ್ಕೆ ಮಾತ್ರ ಈವರೆಗೆ ಮುಂದಾಗಿಲ್ಲ.
ಈ ಮೂವರೂ ವಿಎಚ್‌ಪಿ ನಾಯಕನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲು ಸಂಚು ರೂಪಿಸಿದ್ದಾರೆ ಮತ್ತು ಈ ಪ್ರಕ್ರಿಯೆಯಲ್ಲಿ “ದೇಶಾದ್ಯಂತ ಕೋಟ್ಯಾಂತರ ಹಿಂದೂಗಳ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ” ಎಂದು ದೂರಲಾಗಿದೆ.
ಮೂರು ದಿನಗಳ ಹಿಂದೆ ಪತ್ರಕರ್ತ ವಿನೀತ್ ನರೈನ್ ಬಹಿರಂಗವಾಗಿ ಫೇಸ್‌ಬುಕ್ ಪೋಸ್ಟ್‌ನಲ್ಲಿ, ಚಂಪತ್ ರಾಯ್ ಮತ್ತು ಅವರ ಸಹೋದರರು ಬಿಜ್ನೋರ್‌ನಲ್ಲಿ ಭೂ ಕಬಳಿಕೆಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದ್ದರು.
ಅಲ್ಲದೆ, ಎಂಎಸ್ ಲಾಹೋತಿ ಅವರು 2018 ರಿಂದ ಅತಿಕ್ರಮಣದಾರರನ್ನು ಹೊರಹಾಕಲು ಪ್ರಯತ್ನಿಸುತ್ತಿದ್ದಾರೆ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಇದು ಸಾಮಾನ್ಯವಾಗಿ ರಾಮ ಮಂದಿರ ಟ್ರಸ್ಟ್ ಕಣ್ಣು ಕೆಂಪಗಾಗಿಸಿತ್ತು. ಪರಿಣಾಮ ಇದೀಗ ಆರೋಪ ಮಾಡಿದವರ ವಿರುದ್ಧವೇ ಪ್ರಕರಣ ದಾಖಲಾಗಿದೆ.
ಈ ಹಿಂದೆ ಕೆಲ ಅನಾಮಧೇಯ ವ್ಯಕ್ತಿಗಳು ನಕಲಿ ಚೆಕ್ ಬಳಕೆ ಮಾಡಿ ರಾಮ ಮಂದಿರ ಟ್ರಸ್ಟ್ನಿಂದ ದೊಡ್ಡ ಮೊತ್ತದ ಹಣ ವಿತ್ಡ್ರಾ ಮಾಡಿದ್ದರು. ನಂತರ ಪೊಲೀಸರ ವಶವಾಗಿದ್ದರು. ಆದರೆ, ಇದೀಗ ರಾಮ ಜನ್ಮಭೂಮಿ ಟ್ರಸ್ಟ್ನಲ್ಲಿರುವವರೇ ಹಣದ ದುರ್ಬಳಕೆಗೆ ಮುಂದಾಗಿರುವುದು ದೇಶದಾದ್ಯಂತ ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.