Headlines

ಟೊಮ್ಯಾಟೊ ಪ್ಲೂ (ಟೊಮ್ಯಾಟೊ ಜ್ವರ) ಎಂಬ ಹೊಸ ವೈರಸ್ ಪತ್ತೆ : ಚಿಕ್ಕ ಮಕ್ಕಳೇ ಈ ವೈರಸ್ ನ ಟಾರ್ಗೆಟ್

ಕೊರೊನಾ ನಾಲ್ಕನೇ ಅಲೆಯ ಭೀತಿಯ ನಡುವೆ ಹೊಸ ಜ್ವರವೊಂದು ಕಾಣಿಸಿಕೊಂಡಿದ್ದು, ವಿಶೇಷವಾಗಿ ಚಿಕ್ಕ ಮಕ್ಕಳ ಪೋಷಕರಲ್ಲಿ ಆತಂಕ ಮೂಡಿಸಿದೆ. ಮಾಧ್ಯಮ ವರದಿಗಳ ಪ್ರಕಾರ, ಕೇರಳದಲ್ಲಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ 80 ಕ್ಕೂ ಹೆಚ್ಚು ಮಕ್ಕಳು ವೈರಸ್‌ನಿಂದ ಸೋಂಕಿಗೆ ಒಳಗಾಗಿದ್ದಾರೆ ಮತ್ತು ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಕೇರಳದಲ್ಲಿ ಎಲ್ಲಾ ವಾಹನಗಳ ಪ್ರಯಾಣಿಕರನ್ನು, ವಿಶೇಷವಾಗಿ ಮಕ್ಕಳನ್ನು ಪರೀಕ್ಷಿಸಲು ಇಬ್ಬರು ವೈದ್ಯಕೀಯ ಅಧಿಕಾರಿಗಳು ತಂಡವನ್ನು ಮುನ್ನಡೆಸುತ್ತಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಅಲ್ಲದೆ, ಅಂಗನವಾಡಿಗಳಲ್ಲಿ ಐದು ವರ್ಷಕ್ಕಿಂತ ಕಡಿಮೆ…

Read More

ಗ್ರಾಮಠಾಣಾ ರಸ್ತೆಗೆ ಗೇಟ್ ನಿರ್ಮಾಣ ಮಾಡಿ ಬೀಗ ಹಾಕಿದ ಖಾಸಗಿ ವ್ಯಕ್ತಿ :

ರಿಪ್ಪನ್ ಪೇಟೆ: ಚಿಕ್ಕ ಜೇನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಹಳ್ಳಿ ಗ್ರಾಮದಲ್ಲಿ ಖಾಸಗಿ ವ್ಯಕ್ತಿಯೊಬ್ಬ ಸಾರ್ವಜನಿಕರು ಓಡಾಡುವ ಗ್ರಾಮಠಾಣ ರಸ್ತೆಗೆ ಗೇಟ್ ನಿರ್ಮಾಣಮಾಡಿ ಬೀಗ ಹಾಕಿ ರೈತರು ತಮ್ಮ ಹೊಲಗದ್ದೆಗಳಿಗೆ ಓಡಾಡದಂತೆ ಅಡ್ಡಿ ಉಂಟು ಮಾಡಿರುವ ಘಟನೆ ನಡೆದಿದೆ. ಶಾಂತಪುರ ಮತ್ತು ಕೇಶವಪುರ ನಡುವಿನ ಹೊಸಹಳ್ಳಿ ಗ್ರಾಮದ ರೈತ ಕುಟುಂಬಗಳು ತಮ್ಮ ಹೊಲಗಳಿಗೆ ಹೋಗಲು ಕಳೆದ ಕೆಲವು ದಶಕಗಳಿಂದಲೂ ಗ್ರಾಮಠಾಣ ರಸ್ತೆಯನ್ನೇ ಅವಲಂಬಿಸಿಕೊಂಡಿದ್ದಾರೆ. ಆದರೆ ಕೆಲವು ದಿನಗಳ ಹಿಂದೆ ಹೊಸಹಳ್ಳಿಯ ಖಾಸಗಿ ವ್ಯಕ್ತಿಯೊಬ್ಬ  ಗ್ರಾಮ ಠಾಣದ ರಸ್ತೆಗೆ…

Read More

ರಿಪ್ಪನ್‌ಪೇಟೆ : ಬೀದಿನಾಯಿಗಳಿಂದ ಜಿಂಕೆಮರಿ ರಕ್ಷಣೆ

ರಿಪ್ಪನ್‌ಪೇಟೆ : ಬೀದಿನಾಯಿಗಳಿಂದ ಜಿಂಕೆಮರಿ ರಕ್ಷಣೆ ಕಾಡಿನಿಂದ ನಾಡಿನತ್ತ ಬಂದ ಜಿಂಕೆಯ ಮರಿಗೆ ನಾಯಿಗಳು ಬೆನ್ನಟ್ಟಿದಾಗ ಸ್ಥಳೀಯರು ಜಿಂಕೆ ಮರಿಯನ್ನು ರಕ್ಷಿಸಿ ಅರಣ್ಯ ಇಲಾಖೆಯವರಿಗೆ ಒಪ್ಪಿಸಿದ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ವಡಗೆರೆ ಗ್ರಾಮದ ಬಳಿ ಇಂದು ನಡೆದಿದೆ. ಅರಣ್ಯದಿಂದ ರಿಪ್ಪನ್‌ಪೇಟೆ ಸಮೀಪದ ವಡಗೆರೆ ಗ್ರಾಮದ ಅಮರ್ ನಾಥ್ ಕಾಮತ್ ರವರ ತೋಟದ ಬಳಿ ಬಂದ ಜಿಂಕೆ ಮರಿಯನ್ನು ಕಂಡು ಬೀದಿ ನಾಯಿಗಳು ಬೆನ್ನಟ್ಟಿವೆ. ಈ ವೇಳೆ ನಾಯಿಗಳಿಂದ ಪ್ರಾಣ ರಕ್ಷಣೆಗೆ ಜಿಂಕೆ…

Read More

ಹುಂಚ ಅಡಿಕೆ ತೋಟದಲ್ಲಿ ಎರಡು ಕಾಡುಕೋಣಗಳ ಶವ ಪತ್ತೆ – ಅಧಿಕಾರಿಗಳ ತುರ್ತು ಭೇಟಿ ,ತನಿಖೆ ಚುರುಕು

ಹುಂಚ ಅಡಿಕೆ ತೋಟದಲ್ಲಿ ಎರಡು ಕಾಡುಕೋಣಗಳ ಶವ ಪತ್ತೆ – ಅಧಿಕಾರಿಗಳ ತುರ್ತು ಭೇಟಿ ,ತನಿಖೆ ಚುರುಕು ಹುಂಚ ಭಾಗದಲ್ಲಿ ಕಾಡುಕೋಣಗಳ ಮಾರಣಹೋಮಕ್ಕೆ ಅಂತ್ಯ ಯಾವಾಗ? ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ಗ್ರಾಮದ ಸರ್ವೆ ನಂ. 52/2 ರಲ್ಲಿ ರಾಮಪ್ಪ ಬಿನ್ ಮರಿಯಪ್ಪ ಅವರ ಅಡಿಕೆ ತೋಟದ ಹೊಂಡದಲ್ಲಿ ಎರಡು ಕಾಡುಕೋಣಗಳ ಶವ ಪತ್ತೆಯಾಗಿದ್ದು, ಈ ಘಟನೆ ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಸೋಮವಾರ ಬೆಳಿಗ್ಗೆ ಪೋಸ್ಟ್ ಮ್ಯಾನ್ ನ್ಯೂಸ್ ವರದಿ ಹೊರಬಿದ್ದ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ಸ್ಥಳಕ್ಕೆ…

Read More

Ripponpete | ಪಡಿತರ ದಾಸ್ತಾನುವಿನಲ್ಲಿ ಅವ್ಯವಹಾರ – ನ್ಯಾಯಬೆಲೆ ಅಂಗಡಿಯ ಪರವಾನಗಿ ಅಮಾನತ್ತುಗೊಳಿಸಿ ಆದೇಶ

Ripponpete | ಪಡಿತರ ದಾಸ್ತಾನುವಿನಲ್ಲಿ ಅವ್ಯವಹಾರ – ಅಂಗಡಿಯ ಪರವಾನಗಿ ಅಮಾನತ್ತುಗೊಳಿಸಿ ಆದೇಶ ರಿಪ್ಪನ್‌ಪೇಟೆ : ಇಲ್ಲಿನ ಗ್ರಾಪಂ ಹಿಂಭಾಗದ ವಿಎಸ್ ಎಸ್ ಎನ್ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ದಾಸ್ತಾನುವಿನಲ್ಲಿ ಲೋಪ ಕಂಡು ಬಂದಿರುವ ಹಿನ್ನಲೆಯಲ್ಲಿ ಪ್ರಾಧಿಕಾರ ನಂ: 03/2017-18 ನ್ನು ವಿಚಾರಣೆಗೆ ಕಾಯ್ದಿರಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ತುಪಡಿಸಿ ಜಿಲ್ಲಾ ಆಹಾರ ಉಪ ನಿರ್ದೇಶಕ ಆರ್ ಅವಿನ್ ಆದೇಶಿಸಿದ್ದಾರೆ. ದಿನಾಂಕ 16-12-2023 ರಂದು ಜಿಲ್ಲಾ ಆಹಾರ ಉಪ ನಿರ್ದೇಶಕರು   ನ್ಯಾಯಬೆಲೆ ಅಂಗಡಿಗೆ ಖುದ್ದು ಭೇಟಿ ನೀಡಿ,…

Read More

RIPPONPETE | ಗರ್ತಿಕೆರೆಯಲ್ಲಿ ಲಾಂಗ್‌ ಹಿಡಿದು ಯುವಕನ ಅಟ್ಟಹಾಸ: ಓರ್ವನಿಗೆ ಗಾಯ, ಆರೋಪಿಯ ಬಂಧನ

A youth created panic in Garthikere town of Hosanagar taluk, Shivamogga district, by allegedly attempting to attack people with a long weapon. One person was injured and the accused was arrested by police. RIPPONPETE | ಗರ್ತಿಕೆರೆಯಲ್ಲಿ ಲಾಂಗ್‌ ಹಿಡಿದು ಯುವಕನ ಅಟ್ಟಹಾಸ: ಓರ್ವನಿಗೆ ಗಾಯ, ಆರೋಪಿಯ ಬಂಧನ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಗರ್ತಿಕೆರೆ ಪಟ್ಟಣದಲ್ಲಿ ಭಾನುವಾರ ರಾತ್ರಿ ಆತಂಕಕಾರಿ ಘಟನೆ ನಡೆದಿದ್ದು,…

Read More

ಪ್ರಿಯಕರನ ಕೊಲೆಯಲ್ಲಿ ಅಂತ್ಯವಾಯ್ತು ಮದುವೆ ಮಾತುಕತೆ – ಪ್ರೇಯಸಿ ಸೇರಿದಂತೆ ಆರು ಜನರ ಬಂಧನ

ಪ್ರಿಯಕರನ ಕೊಲೆಯಲ್ಲಿ ಅಂತ್ಯವಾಯ್ತು ಮದುವೆ ಮಾತುಕತೆ – ಪ್ರೇಯಸಿ ಸೇರಿದಂತೆ ಆರು ಜನರ ಬಂಧನ ಮದುವೆ ಮಾತುಕತೆಯೊಂದು ಯುವಕನ ಸಹೋದರನ ಕೊಲೆಯಲ್ಲಿ ಅಂತ್ಯ ಕಂಡಿರುವ ಘಟನೆ ಕಲಬುರಗಿ ನಗರದ ಹೊರ ವಲಯ ನಾಗನಹಳ್ಳಿಯಲ್ಲಿ ನಡೆದಿದ್ದು, ಘಟನೆ ಸಂಬಂಧ ಪ್ರೀತಿಸಿದ ಯುವತಿ ಸೇರಿ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಗುಲ್ಬರ್ಗ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯ ನಾಗನಹಳ್ಳಿಯ ಸಚಿನ್ ಹಾಗೂ ಉಷಾ ಅಲಿಯಾಸ್ ವೈಷ್ಣವಿ ಪ್ರೀತಿಸುತ್ತಿದ್ದರಂತೆ.ಈ ಹಿನ್ನೆಲೆಯಲ್ಲಿ ಉಷಾ ಸಹೋದರ ವರುಣಕುಮಾರ ಹಾಗೂ ಇತರರೊಂದಿಗೆ ಸಚಿನ್ ಮನೆಗೆ ಮದುವೆ…

Read More

ಆಯನೂರು ಕ್ಯಾಷಿಯರ್ ಕೊಲೆ ಆರೋಪಿಯನ್ನು ಬಂಧಿಸಲು ಹೋದಾಗ ಪೊಲೀಸರ ಮೇಲೆ ಹಲ್ಲೆ – ಆರೋಪಿಗಳ ಕಾಲಿಗೆ ಗುಂಡು|shot

ಆಯನೂರಿನ ನವರತ್ನ ಬಾರ್ ನಲ್ಲಿ ನಡೆದಿದ್ದ ಕೊಲೆ ಪ್ರಕರಣ ಸಂಬಂಧ, ಆರೋಪಿಗಳನ್ನ ಬಂಧಿಸಲು ತೆರಳಿದ್ದ ಪೊಲೀಸರ ಮೇಲೆಯೇ ಆರೋಪಿ ಸತೀಶ್ ಹಲ್ಲೆ ಮಾಡಲು ಮುಂದಾಗಿದ್ಧಾನೆ. ಈ ವೇಳೆ ಪೊಲೀಸರು ರಕ್ಷಣಾತ್ಮಕವಾಗಿ ಆತನ ಕಾಲಿಗೆ ಗುಂಡು ಹೊಡೆದಿದ್ಧಾರೆ.  ಸತೀಶ್ ನನ್ನು ಬಂಧಿಸಲು ತೆರಳಿದ್ದ ಸಂದರ್ಭದಲ್ಲಿ ಆತ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಎಸ್​ಐ ರಾಜು ರೆಡ್ಡಿಯವರು ಆರೋಪಿ ಕಾಲಿಗೆ ಗುಂಡು ಹೊಡೆದು ಆತನನ್ನ ಬಂಧಿಸಿದ್ದಾರೆ. ನಿನ್ನೆ ಮಧ್ಯರಾತ್ರಿ ನಡೆದಿದ್ದ ಕೊಲೆ ಸಂಬಂಧ ಆರೋಪಿ ಸತೀಶ್​ನನ್ನ ಬಂಧಿಸಲು…

Read More

ರಿಪ್ಪನ್ ಪೇಟೆಯಲ್ಲಿ ನೂತನವಾಗಿ ಪ್ರಾರಂಭವಾದ ನಂದಿ ಡೆಂಟಲ್ ಕ್ಲಿನಿಕ್ ಮತ್ತು ಇಂಪ್ಲಾಂಟ್ ಸೆಂಟರ್ :

ರಿಪ್ಪನ್ ಪೇಟೆ : ಪಟ್ಟಣದ ವಿನಾಯಕ ವೃತ್ತದ ಜೋಹರ ಪ್ಲಾಜಾದಲ್ಲಿ ನೂತನವಾಗಿ ಶ್ರೀ ನಂದಿ ಡೆಂಟಲ್ ಕ್ಲಿನಿಕ್ ಮತ್ತು ಇಂಪ್ಲಾಂಟ್ ಸೆಂಟರ್ ಆರಂಭವಾಗಿದೆ. ರಿಪ್ಪನ್ ಪೇಟೆಯ ಸುತ್ತಮುತ್ತಲಿನ ಜನತೆಗೆ ಅಗತ್ಯವಾಗಿ ಬೇಕಾಗಿದ್ದ ಸುಸಜ್ಜಿತ ಆಧುನಿಕ ಡೆಂಟಲ್ ಕ್ಲಿನಿಕ್ ಪ್ರಾರಂಭವಾಗಿದ್ದು ಜನತೆಯಲ್ಲಿ ಸಂತಸ ತಂದಿದೆ. ಟೇಪ್ ಕತ್ತರಿಸುವ ಮೂಲಕ ಕ್ಲಿನಿಕ್ ನ್ನು ಉಧ್ಘಾಟಿಸಿದ ಜೋಹರ ಪ್ಲಾಜಾ ಮಾಲೀಕರು ಹಾಗೂ ಉದ್ಯಮಿಗಳಾದ ಎ ಕೆ ಮಹಮ್ಮದ್ ಸಾಬ್ ಮಾತನಾಡಿ ಹಲ್ಲುಗಳ ಆರೋಗ್ಯ ಕಾಪಾಡಿಕೊಂಡಾಗ ವ್ಯಕ್ತಿಗಳ ಸೌಂದರ್ಯವೂ ವೃದ್ಧಿಸುತ್ತದೆ. ನಮ್ಮಲ್ಲಿ ಪಾಶ್ಚಿಮಾತ್ಯ…

Read More

ರಿಪ್ಪನ್‌ಪೇಟೆಯ ಹಿರಿಯ ವೈದ್ಯ ಹಮೀದ್ ಡಾಕ್ಟರ್ ಇನ್ನಿಲ್ಲ | hameed doctor passed away

ರಿಪ್ಪನ್‌ಪೇಟೆಯ ಹಿರಿಯ ವೈದ್ಯ ಹಮೀದ್ ಡಾಕ್ಟರ್ ಇನ್ನಿಲ್ಲ |  ರಿಪ್ಪನ್‌ಪೇಟೆ : ಪಟ್ಟಣದ ಹೆಸರಾಂತ ಮದನಿ ಕ್ಲಿನಿಕ್ ನ ಹಿರಿಯ ವೈದ್ಯ ಹಮೀದ್ ಡಾಕ್ಟರ್(90) ಇಂದು ಬೆಳಿಗ್ಗೆ ತಮ್ಮ ಸ್ವಗೃಹದಲ್ಲಿ ವಯೋಸಹಜ ನಿಧನ ಹೊಂದಿದರು…ಅವರಿಗೆ 90 ವರ್ಷ ವಯಸ್ಸಾಗಿತ್ತು…!! ರಿಪ್ಪನ್‌ಪೇಟೆ ಹಾಗೂ ಸುತ್ತಮುತ್ತಲಿನ ಜನರಿಗೆ ಬಹು ಪರಿಚಿತರಾದ ಹಾಗೂ ಅನೇಕ ರೋಗಿಗಳ ಪಾಲಿನ ಆಪದ್ಬಾಂಧವರಾಗಿದ್ದ ಹಮೀದ್ ಡಾಕ್ಟರ್ ಇಂದು ಬೆಳಿಗ್ಗೆ ಪಟ್ಟಣದ ವಿನಾಯಕ ವೃತ್ತದಲ್ಲಿರುವ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.  ಸದಾ ಬಡವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ…

Read More