ಹೊಸನಗರ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಾಳೆ(05-04-2024) ವಿದ್ಯುತ್ ವ್ಯತ್ಯಯ

ಹೊಸನಗರ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಾಳೆ(05-04-2024) ವಿದ್ಯುತ್ ವ್ಯತ್ಯಯ ಹೊಸನಗರ : ರಾಷ್ಟ್ರೀಯ ಹೆದ್ದಾರಿಯಗಲೀಕರಣ ಕಾಮಗಾರಿ ಹಾಗೂ 33 ಕೆವಿ ವಿದ್ಯುತ್ ಲೈನ್ ದುರಸ್ತಿ ಕಾಮಗಾರಿ ಪ್ರಯುಕ್ತ ಏಪ್ರಿಲ್ 5ರ ಶುಕ್ರವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5:00 ವರೆಗೆ ವಿದ್ಯುತ್ ಪ್ರಸರಣದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ. ಸಾಗರ ಹೊಸನಗರ ಮಾರ್ಗ ನಿರ್ವಹಣೆ ಹಾಗೂ ಉಪ ವಿದ್ಯುತ್ ವಿತರಣಾ ಕೇಂದ್ರದ ನಿರ್ವಹಣೆ ಪ್ರಯುಕ್ತ ಸಾಗರ ಹೊಸನಗರ ವಿದ್ಯುತ್ ಮಾರ್ಗದ ಜೇನಿ, ಮಾರುತಿಪುರ,…

Read More

ಕೋಣಂದೂರು ಸುತ್ತಮುತ್ತ ಹಾಡಹಗಲೇ ದೇವಸ್ಥಾನ, ಮನೆಗಳಲ್ಲಿ ಕಳ್ಳತನ

ಕೋಣಂದೂರು ಸುತ್ತಮುತ್ತ ಹಾಡಹಗಲೇ ದೇವಸ್ಥಾನ, ಮನೆಗಳಲ್ಲಿ ಕಳ್ಳತನ ತೀರ್ಥಹಳ್ಳಿ :ತಾಲೂಕಿನ ಕೋಣಂದೂರು ಸುತ್ತಮುತ್ತ ಕಳ್ಳತನ ಪ್ರಕರಣಗಳು ಇತ್ತೀಚಿಗೆ ಹೆಚ್ಚುತ್ತಿದ್ದು, ಮಲೆನಾಡಿಗರಲ್ಲಿ ಆತಂಕ ಮನೆ ಮಾಡಿದೆ.ಕೋಣಂದೂರು ಸಮೀಪದ ಗುಡ್ಡೆಕೊಪ್ಪದಲ್ಲಿ ಶುಕ್ರವಾರ ಮಧ್ಯಾಹ್ನ ಮನೆಯ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿದ್ದು, ಮನೆಯಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಬೆಲೆಬಾಳುವ ವಸ್ತುಗಳು ಸಿಕ್ಕಿಲ್ಲದಿರುವುದರಿಂದ ವಸ್ತುಗಳನ್ನು ಪುಡಿ ಪುಡಿ ಮಾಡಿ ಹಿಂಭಾಗದ ಬಾಗಿಲಿನಿಂದ ಹೊರ ಹೋಗಿದ್ದಾರೆ. ಹಿರೇಸರದ ಮನೆಯೊಂದರಲ್ಲಿದ್ದ 75,000 ನಗದು ಹಾಗೂ ಬಂಗಾರ, ಬೆಳ್ಳಿಯನ್ನು ಕದ್ದು ಕಳ್ಳರು ಪರಾರಿಯಾಗಿದ್ದಾರೆ. ಆಲೂರು ಹೊಸಕೊಪ್ಪದ ಉಮಾಮಹೇಶ್ವರ…

Read More

ಸಾಗರದ ಗಣಪತಿ ಕೆರೆಯಲ್ಲಿ ಯುವತಿಯ ಶವ ಪತ್ತೆ :

ಸಾಗರದ ಗಣಪತಿ ಕೆರೆಯಲ್ಲಿ ಯುವತಿಯ ಶವವೊಂದು ಪತ್ತೆಯಾಗಿದೆ.ಗಣಪತಿ ಕೆರೆಯ ದಡದ ನೀರಿನಲ್ಲಿ ಶವ ತೇಲುತ್ತಿತ್ತು, ಮೂಲಗಳ ಪ್ರಕಾರ ಮೃತಪಟ್ಟವರು  ಬೆಳಲಮಕ್ಕಿ ವಾಸಿ ರಕ್ಷಿತಾ ಎಂದು ಹೇಳಲಾಗುತ್ತಿದ್ದು,ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಾಗಿದೆ. ರಕ್ಷಿತಾ ಸಾವು ಕೊಲೆಯೋ, ಆತ್ಮಹತ್ಯೆಯೋ ಎಂಬ ನಿಗೂಢ ಅಂಶಗಳು ಪೊಲೀಸರ ತನಿಖೆಯಿಂದ ಹೊರಬರಬೇಕಾಗಿದೆ. ಇತ್ತೀಚಿಗೆ  ಸಾಗರದ ಕೇಶವ ಜ್ಯುವೆಲ್ಲರ್ಸ್ ನ ಸುಚಿತ್ರ ಸಾವಿನ ಪ್ರಕರಣದ ಹಿಂದೆಯೇ ರಕ್ಷಿತಾ ಪ್ರಕರಣವು ನಡೆದಿದ್ದು ಸುಚಿತ್ರ ಪ್ರಕರಣ ಕೊಲೆಯೋ ಆತ್ಮಹತ್ಯೆಯೋ ಎನ್ನುವುದು ಇನ್ನೂ ಬಗೆಹರಿದಿಲ್ಲ . ಇದು ಯಾವ ಹಂತಕ್ಕೆ…

Read More

ರೈಲ್ವೆ ಟ್ರ್ಯಾಕ್ ನಲ್ಲಿ ವ್ಯಕ್ತಿಯ ಶವ ಪತ್ತೆ – ಆತ್ಮಹತ್ಯೆ ಶಂಕೆ|smg

ಶಿವಮೊಗ್ಗ ನಗರದ ಪಶು ವೈದ್ಯಕೀಯ ಕಾಲೇಜಿನ ಬಳಿಯ ರೈಲ್ವೆ ಟ್ರ್ಯಾಕ್ ನಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ.  ಮೃತರನ್ನು ಗುರುರಾಜ್ ಎಂದು ಗುರುತಿಸಲಾಗಿದೆ. ಶಿವಮೊಗ್ಗ ನಗರದ ಶುಭ ಮಂಗಳ ಕಲ್ಯಾಣ ಮಂದಿರದ ಎದುರಿನ ತಿರುವಿನ ನಿವಾಸಿಯಾಗಿದ್ದ ಗುರುರಾಜ್  ಎಪಿಎಂಸಿ ಯಾರ್ಡ್ ಗೆ ಹೋಗಿ ತರಕಾರಿ ತರುವುದಾಗಿ ಗುರುವಾರ ಬೆಳಗ್ಗಿನ ಜಾವ ಮನೆ ಬಿಟ್ಟು ಹೋಗಿದ್ದರು ಆದರೆ ಗುರುರಾಜ್ ನ ಮೃತ ದೇಹ ವೆಟನರಿ ಕಾಲೇಜು ಬಳಿಯ ರೈಲ್ವೆ ಟ್ರ್ಯಾಕ್ ಬಳಿ ಪತ್ತೆಯಾಗಿದೆ. ಗುರುರಾಜ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸ್ಥಳೀಯರು…

Read More

ನೆಲ್ಲಿಬೀಡು ಅಪಘಾತದಲ್ಲಿ ಯುವತಿ ಸಾವು: ಕುಟುಂಬಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಸಾಂತ್ವಾನ

ನೆಲ್ಲಿಬೀಡು ಅಪಘಾತದಲ್ಲಿ ಯುವತಿ ಸಾವು: ಕುಟುಂಬಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಸಾಂತ್ವಾನ MLA Gopalakrishna Beluru visited the families of road accident victim Archana Jain and offered condolences and financial assistance. ಸಾಗರ: ತಾಲೂಕಿನ ನೆಲ್ಲಿಬೀಡು ಸಮೀಪ ಇತ್ತೀಚೆಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಮಳೂರು ಗ್ರಾಮದ ಯುವತಿ ಅರ್ಚನಾ ಜೈನ್ ಅವರ ಕುಟುಂಬವನ್ನು ಶಾಸಕ ಬಿ. ಗೋಪಾಲಕೃಷ್ಣ ಬೆಳೂರು ಭೇಟಿ ಮಾಡಿ ಸಾಂತ್ವನ ಹೇಳಿದರು. ಮರಳು ಸಾಗಿಸುತ್ತಿದ್ದ ಟಿಪ್ಪರ್‌ವೊಂದು…

Read More

ಗರ್ತಿಕೆರೆಯಲ್ಲಿ ಕಿಡಿಗೇಡಿಗಳಿಂದ 15 ಕ್ಕೂ ಹೆಚ್ಚು ನಾಮಫಲಕ ಧ್ವಂಸ – ದೂರು ದಾಖಲು

ಗರ್ತಿಕೆರೆಯಲ್ಲಿ ಕಿಡಿಗೇಡಿಗಳಿಂದ 15 ಕ್ಕೂ ಹೆಚ್ಚು ನಾಮಫಲಕ ಧ್ವಂಸ – ದೂರು ದಾಖಲು  ರಿಪ್ಪನ್‌ಪೇಟೆ : ಇಲ್ಲಿನ ಗರ್ತಿಕೆರೆ ಗ್ರಾಮ ಪಂಚಾಯತಿ ಮಳಲಿಕೊಪ್ಪ ಗ್ರಾಮದಲ್ಲಿ ಕಿಡಿಗೇಡಿಗಳ ಅಟ್ಟಹಾಸಕ್ಕೆ 15 ಕ್ಕೂ ಹೆಚ್ಚು ನಾಮಫಲಕಗಳು ಧ್ವಂಸವಾಗಿದ್ದು ಪುಂಡರ ಪುಂಡಾಟಕ್ಕೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಪಂ ಸಚಿನ್ ಗೌಡ ಪ್ರತಿನಿಧಿಸುವ ಮಳಲಿಕೊಪ್ಪ ಗ್ರಾಮದಲ್ಲಿ ಗ್ರಾಮ ಪಂಚಾಯತ್ ಅನುದಾನದಲ್ಲಿ ವಿವಿಧ ಊರುಗಳಿಗೆ ತೆರಳುವ ಮಾರ್ಗಕ್ಕೆ ನಾಮಫಲಕವನ್ನು ಅಳವಡಿಸಲಾಗಿತ್ತು ಆದರೆ ಕಳೆದ ಬುಧವಾರ ರಾತ್ರಿ ಕಿಡಿಗೇಡಿಗಳು 15 ಕ್ಕೂ ಹೆಚ್ಚು ನಾಮಫಲಕವನ್ನು…

Read More

ಹೊಸನಗರ ಮತ್ತು ಜಯನಗರದಲ್ಲಿ ಸಂಭ್ರಮದ ಈದ್ ಮಿಲಾದ್ ಮೆರವಣಿಗೆ | Eid milad

ಹೊಸನಗರ ಪಟ್ಟಣ ಹಾಗೂ ಜಯನಗರದಲ್ಲಿ ಇಂದು ಮುಸ್ಲಿಂ ಬಾಂಧವರು ಸಂಭ್ರಮ ಸಡಗರದಿಂದ ಈದ್ ಮಿಲಾದ್ ಮೆರವಣಿ ಗೆಯಲ್ಲಿ ಪಾಲ್ಗೊಂಡು ಪ್ರವಾದಿ ಮಹಮದ್ ರವರ ಜನ್ಮದಿನವನ್ನು ಶ್ರದ್ದಾಪೂರ್ವಕವಾಗಿ ಆಚರಿಸಿದರು. ಈ ಸಂದರ್ಭದಲ್ಲಿ ಮಸೀದಿಯ ಧರ್ಮ ಗುರುಗಳು ಸಂದೇಶ ನೀಡಿ ಪ್ರವಾದಿ ಅವರ ಆಲೋಚನೆಗಳು ಅತ್ಯಂತ ಪ್ರಸ್ತುತವಾಗಿದೆ ಉತ್ತಮ ಸಮಾಜ ನಿರ್ಮಾಣಕ್ಕೆ ಅವರ ಗುರಿ ಸಂದೇಶಗಳು ಪೂರಕವಾಗಿದೆ ಮಾನವ ಜೀವನದ ಸಮಗ್ರ ಸುಧಾರಣೆ ಪ್ರವಾದಿ ಅವರ ಗುರಿಯಾಗಿತ್ತು.ಪ್ರವಾದಿಯವರ ಆಶೋತ್ತರಗಳು ಕೇವಲ ಇಸ್ಲಾಂ ಸಮುದಾಯಕ್ಕೆ ಮಾತ್ರವಲ್ಲದೆ ಜಗತ್ತಿನ ಮಾನವ ಕುಲದ ಪ್ರತಿಯೊಬ್ಬರಿಗೂ…

Read More

ಜಗತ್ತಿನ ಶ್ರೇಷ್ಠ ವಿಜ್ಞಾನಿಗಳ ಪಟ್ಟಿ ಬಿಡುಗಡೆ : ಕುವೆಂಪು ವಿವಿಯ ಬಿ ಜೆ ಗಿರೀಶ್, ಬಿಇ ಕುಮಾರಸ್ವಾಮಿಯವರಿಗೆ ಸ್ಥಾನ

ಶಿವಮೊಗ್ಗ : ಅಮೆರಿಕಾದ ಪ್ರತಿಷ್ಠಿತ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ ಹೊರ ತಂದಿರುವ ವಿಶ್ವದ ಟಾಪ್ ಶೇ.2ರಷ್ಟು ವಿಜ್ಞಾನಿಗಳ ಪಟ್ಟಿಯಲ್ಲಿ ಕುವೆಂಪು ವಿಶ್ವ ವಿದ್ಯಾಲಯದ ಡಾ. ಬಿ. ಜೆ ಗಿರೀಶ್ ಮತ್ತು ಡಾ. ಬಿ. ಇ. ಕುಮಾರಸ್ವಾಮಿಯವರು ಸ್ಥಾನ ಪಡೆದಿದ್ದಾರೆ. ಎಲ್ಸೇವಿಯರ್ ಸಂಸ್ಥೆಯ ಸಹಯೋಗದೊಂದಿಗೆ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಜೆರೋಯಿನ್ ಬಾಸ್, ಕೆವಿನ್ ಬೋಯಾಕ್ ಮತ್ತು ಜಾನ್ ಪಿ.ಎ. ಇವೊನ್ನಿಡಿಸ್ ಅವರನ್ನೊಳಗೊಂಡ ಸಂಶೋಧನಾ ತಂಡ ಸಿದ್ಧಪಡಿಸಿರುವ ವಿಶ್ವದ ಟಾಪ್ 2% ವಿಜ್ಞಾನಿಗಳ ಡೇಟಾಬೇಸ್‌ ಅಕ್ಟೋಬರ್ 19ರಂದು ಬಿಡುಗಡೆಯಾಗಿದ್ದು, ಅಂತರ್ಜಾಲದಲ್ಲಿ ಮುಕ್ತವಾಗಿ ಲಭ್ಯವಿದೆ….

Read More

ವಿವಾಹಿತ ಮಹಿಳೆ ನಾಪತ್ತೆ : ಸುಳಿವು ಪತ್ತೆಗೆ ಮನವಿ

2021 ರ ಏಪ್ರಿಲ್ 13 ರಂದು ಅನುಷಾ ಕೋಂ ಆನಂದ, 26 ವರ್ಷ, ಗೃಹಿಣಿ ಈಕೆ ನಗರದ ಹೊಸಮನೆ 06 ನೇ ಕ್ರಾಸ್‍ನಲ್ಲಿರುವ ತನ್ನ ನಿವಾಸದಿಂದ ಕಾಣೆಯಾಗಿರುತ್ತಾರೆ.       ಅಂದು ರಾತ್ರಿ 8 ಗಂಟೆ ಹೊತ್ತಿಗೆ ಮನೆಯಿಂದ ಹೊರಗೆ ಹೋದವಳು ಹಿಂತಿರುಗಿ ಬಂದಿರುವುದಿಲ್ಲ. ಅಕ್ಕ ಪಕ್ಕ, ನೆಂಟರ ಮನೆ ಹೀಗೆ ಎಲ್ಲೆಡೆ ಹುಡುಕಿದರೂ ಪತ್ತೆಯಾಗಿರುದಿಲ್ಲ. ಕಾಣೆಯಾದ ಮಹಿಳೆ ಅನುಷಾ 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕೋಲು ಮುಖ, ಎಣ್ಣೆಗೆಂಪು ಮೈಬಣ್ಣ ಹೊಂದಿದ್ದು, ಕಾಣೆಯಾದ…

Read More

ಆಹ್ವಾನ ಸಿಗದಿದ್ದಕ್ಕೆ ಕಾರ್ಯಕ್ರಮದಲ್ಲೇ ಕಾಂಗ್ರೆಸ್​ MLC ಪ್ರತಿಭಟನೆ : ಕೈ ಮುಗಿದು ವೇದಿಕೆಗೆ ಕರೆದ ಈಶ್ವರಪ್ಪ

ಶಿವಮೊಗ್ಗ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಪರಿಷತ್ ಸದಸ್ಯ ಆರ್.ಪ್ರಸನ್ನ ಕುಮಾರ್​ಗೆ ಆಹ್ವಾನ ನೀಡದೆ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ ಎಂದು ಅರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಶಿವಮೊಗ್ಗ-ಚಿತ್ರದುರ್ಗ ರಸ್ತೆ ಮೇಲ್ದರ್ಜೆಗೆ, ರಾಷ್ಟ್ರೀಯ ಹೆದ್ದಾರಿಯಲ್ಲಿ ರೈಲ್ವೆ ಮೇಲ್ಸೇತುವೆ ಹಾಗೂ ತುಂಗಾ ನದಿಗೆ ನೂತನ ಸೇತುವೆ ಕಾಮಗಾರಿ ಸೇರಿ ಒಟ್ಟು 580.98 ಕೋಟಿ ರೂ ಕಾಮಗಾರಿಗೆ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಚಾಲನೆ ನೀಡಲು ಆಗಮಿಸಿದ್ದರು. ಈ ವೇಳೆ ಹೊಳೆಹೊನ್ನೂರು ರಸ್ತೆಯಲ್ಲಿ ನಡೆದ ಗುದ್ದಲಿ ಪೂಜೆ ಕಾರ್ಯಕ್ರಮದ…

Read More