ಅಕಾಲಿಕ ಖಾಯಿಲೆಯಿಂದ ಬಳಲುತಿದ್ದ ಯುವತಿಗೆ ಸಹಾಯ ಹಸ್ತ::
ರಿಪ್ಪನ್ ಪೇಟೆ: ರಿಪ್ಪನ್ ಪೇಟೆ ಸಮೀಪದ ಕೆಂಚನಾಲ ಗ್ರಾಮ ಪಂಚಾಯತ್ ನ ಚಂದಳ್ಳಿ ಗ್ರಾಮದ ಚಂದ್ರಮ್ಮ ರವರ 28 ವಯಸ್ಸಿನ ಪುತ್ರಿ ಚೇತನಳಿಗೆ ಬಾಲ್ಯದಿಂದಲು ಮದುಮೇಹ ಕಾಯಿಲೆ ಆವರಿಸಿದ್ದು,ಈ ಖಾಯಿಲೆಯಿಂದ ದೃಷ್ಟಿಯನ್ನು ಕಳೆದುಕೊಂಡಿದ್ದು,ನಡೆದಾಡುವ ಸ್ಥಿತಿಯಲ್ಲಿರದ ಮಗಳನ್ನು 28 ವರ್ಷದಿಂದ ತಾಯಿಯೊಬ್ಬರೇ ಕಷ್ಟದಿಂದ ಸಾಕುತಿದ್ದಾರೆ.ಈ ವಿಚಾರ ತಾ ಪಂ ಮಾಜಿ ಅಧ್ಯಕ್ಷರಾದ ವೀರೇಶ್ ಆಲವಳ್ಳಿ ರವರ ಗಮನಕ್ಕೆ ಬಂದ ತಕ್ಷಣ ಹುಂಚ ಮಠದ ಪರಮಪೂಜ್ಯ ಗುರುಗಳಾದ ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರು ಹಾಗೂ ಮೂಲೆಗದ್ದೆ ಮಠದ ಪರಮಪೂಜ್ಯ…