ಜಾನಪದ ಸಮೂಹ ಗಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ :
ಹೊಸನಗರ : ಇತ್ತೀಚೆಗೆ ಧಾರವಾಡದಲ್ಲಿ ನಡೆದ ರಾಜ್ಯ ಮಟ್ಟದ ಸರ್ಕಾರಿ ನೌಕರರ ಸಾಂಸ್ಕ್ರತಿಕ ಮೇಳದಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಶಿಕ್ಷಕರ ಸಮೂಹವು ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದೆ. ಇದೇ ತಿಂಗಳು 15,16,17 ರಂದು ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ 75ನೇ ಆಜಾದ್ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಸಾಧನೆಗೈದ ತಾಲೂಕಿನ ಪ್ರತಿಭಾವಂತ ಶಿಕ್ಷಕರುಗಳಾದ ತೀರ್ಥಕುಮಾರ್ ,ದುಗ್ಗಪ್ಪ,ಮೋಹನ್ ಕುಮಾರ್ ಸಿ,ಪ್ರಕಾಶ್,ಮೋಹನ್ ಹೆಚ್ ಆರ್ ,ತಿಮ್ಮಪ್ಪ ಕಣಬಂದೂರು ,ದೊಡ್ಡಪ್ಪ,ಸೈಯದ್ ಇರ್ಫ಼ಾನ್ ,ಮನೋಹರ…