ಪಂಜಾಬ್ ಸರ್ಕಾರದ ವಿರುದ್ಧ ಹೆದ್ದಾರಿಪುರದಲ್ಲಿ ಪಂಜಿನ ಮೆರವಣಿಗೆ

ಹೆದ್ದಾರಿಪುರ : ಪ್ರಧಾನಿ ಮೋದಿ ಅವರಿಗೆ ಅವಮಾನ ಮಾಡಿರುವ ಮತ್ತು ಅವರ ಪ್ರಯಾಣಕ್ಕೆ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸಿರುವ ಪಂಜಾಬ್ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿ ಹೆದ್ದಾರಿಪುರದಲ್ಲಿ ಬಿಜೆಪಿ ಮಹಾಶಕ್ತಿ ಕೇಂದ್ರ ಘಟಕದ ವತಿಯಿಂದ ಪಂಜಿನ ಮೆರವಣಿಗೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ  ಮಂಜುನಾಥ್ ಎಂ,ಬಿ, ಪಕ್ಷದ ಹಿರಿಯ ಮುಖಂಡರಾದ ಸುರೇಶ್ ಸಿಂಗ್,ಕೀರ್ತಿ ಗೌಡ್ರು, ಪಂಚಾಯತ್ ಪ್ರಮೂಕ್ ಆದರ್ಶ ಡಿ ಗೌಡ, ಕಲ್ಲೂರ್ ಗಂಗಾಧರ್,ಪ್ರವೀಣ್ ಬಟ್, ಸಂತೋಷ್ ಕಲ್ಕೂಪ್ಪ, ಮಂಜುನಾಥ್ ಶೇಟ್ ಹೆದ್ದಾರೀಪುರ, ರಾಮಣ್ಣ , ಕಿರಣ್ ಕಣಬಂದೂರು,ಅರುಣ್…

Read More

ಕರ್ನಾಟಕ ಕಾನೂನು ವಿವಿ ನಿಗದಿತ ವೇಳಾಪಟ್ಟಿಯಂತೆ ಪರೀಕ್ಷೆ ನಡೆಸುವಂತೆ ಸಿಬಿಆರ್ ರಾಷ್ಟ್ರೀಯ ಕಾನೂನು ವಿದ್ಯಾರ್ಥಿಗಳಿಂದ ಆಗ್ರಹ :

ಶಿವಮೊಗ್ಗ: ಕರ್ನಾಟಕ ಕಾನೂನು ವಿವಿ ನಿಗಧಿತ ವೇಳಾಪಟ್ಟಿಯಂತೆ ಪರೀಕ್ಷೆಗಳನ್ನು ನಡೆಸದೇ ಇರುವುದರಿಂದಾಗಿ ಮೂರು ಮತ್ತು ಐದು ವರ್ಷದ ಕಾನೂನು ವಿದ್ಯಾರ್ಥಿಗಳು ಕೋರ್ಸ್ ಮುಗಿಸಲು ಒಂದು ವರ್ಷ ಹೆಚ್ಚುವರಿಯಾಗಿ ಓದಬೇಕಾಗುತ್ತದೆ. ಇದನ್ನು ಸರಿಪಡಿಸಬೇಕು ಎಂದು ಆಗ್ರಹಿಸಿ ಇಂದು ಸಿ.ಬಿ.ಆರ್. ರಾಷ್ಟ್ರೀಯ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರು ಮತ್ತು ವಿವಿ ಕುಲಪತಿಗಳಿಗೆ ಮನವಿ ಸಲ್ಲಿಸಿದರು. 2020ನೇ ಸಾಲಿನ ಡಿಸೆಂಬರ್ ನಲ್ಲಿ ನಿಗಧಿಯಾಗಿದ್ದ ಸೆಮಿಸ್ಟರ್ ಪರೀಕ್ಷೆಗಳನ್ನು ಕೋವಿಡ್ ಕಾರಣದಿಂದಾಗಿ 2021ರ ಮಾರ್ಚ್ನನಲ್ಲಿ…

Read More

ಜಿಂಕೆ ಚರ್ಮ ,ಕೊಂಬು ಮಾರಾಟಕ್ಕೆ ಯತ್ನ – ಸಾಗರ ಮೂಲದ ವ್ಯಕ್ತಿ ಬಂಧನ | Arrested

ಜಿಂಕೆ ಚರ್ಮ ,ಕೊಂಬು ಮಾರಾಟಕ್ಕೆ ಯತ್ನ –  ಸಾಗರ ಮೂಲದ ವ್ಯಕ್ತಿ ಬಂಧನ  ಜಿಂಕೆ ಚರ್ಮ, ಕೊಂಬುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಶಿವಮೊಗ್ಗ ಮೂಲದ ಆರೋಪಿಯನ್ನು ಬೆಂಗಳೂರು ಮಹದೇವಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಚಂದ್ರಶೇಖರಪ್ಪ ಗೌಡ (43) ಎಂಬಾತನನ್ನು ಬಂಧಿಸಲಾಗಿದೆ.  ಆರೋಪಿಯಿಂದ ಒಂದು ಜಿಂಕೆ ಚರ್ಮ, 12 ಜಿಂಕೆ ಕೊಂಬುಗಳು ಹಾಗೂ 2 ಕಾಡೆಮ್ಮೆ ಕೊಂಬುಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಮಹದೇವಪುರ ಠಾಣಾ ವ್ಯಾಪ್ತಿಯಲ್ಲಿ ಅಪರಿಚಿತ ವ್ಯಕ್ತಿ ಜಿಂಕೆ ಚರ್ಮ ಮಾರಾಟಕ್ಕೆ…

Read More

ಮನೆಯವರ ಬುದ್ದಿ ಮಾತಿಗೆ ಬೇಸತ್ತು ನೇಣು ಬಿಗಿದುಕೊಂಡು 9 ನೇ ತರಗತಿ ವಿದ್ಯಾರ್ಥಿ ಸಾವು

ಮನೆಯವರ ಬುದ್ದಿ ಮಾತಿಗೆ ಬೇಸತ್ತು ನೇಣು ಬಿಗಿದುಕೊಂಡು 9 ನೇ ತರಗತಿ ವಿದ್ಯಾರ್ಥಿ ಸಾವು ಚೆನ್ನಾಗಿ ಓದಿಕೊಳ್ಳುವಂತೆ ಮನೆಯವರು ಹೇಳಿದ ಬುದ್ದಿ ಮಾತಿಗೆ ಮನನೊಂದು ನಿಖಿಲ್ ಆತ್ಮಹ**ತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿವೆ. ಈ ಕುರಿತಂತೆ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾಗರ : ಮನೆಯಲ್ಲಿಯೇ ನೇ*ಣು ಬಿಗಿದುಕೊಂಡು ಹೈಸ್ಕೂಲ್ ವಿದ್ಯಾರ್ಥಿಯೋರ್ವ ಆತ್ಮಹ**ತ್ಯೆಗೆ ಶರಣಾದ ಘಟನೆ ಜಿಲ್ಲೆಯ ಸಾಗರ ತಾಲೂಕಿನ ಆವಿನಹಳ್ಳಿ ಹೋಬಳಿಯ ತುಂಬೆ ಗ್ರಾಮದಲ್ಲಿ ನಡೆದಿದೆ. ನಿಖಿಲ್ (14) ಆತ್ಮಹ**ತ್ಯೆಗೆ ಶರಣಾದ ವಿದ್ಯಾರ್ಥಿ ಎಂದು…

Read More

ಸಿಗಂದೂರು ದೇವಸ್ಥಾನಕೆ ಬಂದಿದ್ದ ಭಕ್ತಾಧಿಗಳ ಜೀಪ್ ಕಂದಕಕ್ಕೆ ಉರುಳಿ ಓರ್ವ ಮಹಿಳೆ ಸಾವು : ಉಳಿದ ಪ್ರಯಾಣಿಕರ ಸ್ಥಿತಿ ಗಂಭೀರ

ಸಾಗರ ತಾಲೂಕಿನ ತುಮರಿ ಬಳಿಯ ವಕ್ಕೋಡಿ ತಿರುವಿನಲ್ಲಿ ಕಂದಕಕ್ಕೆ ಟೆಂಪೋ ಟ್ರ್ಯಾಕ್ಸ್ ಉರುಳಿ ಬಿದ್ದು ಓರ್ವ ಮಹಿಳೆ ಮೃತ ಪಟ್ಟಿರುವ ಘಟನೆ ನಡೆದಿದೆ. ಸಿಗಂದೂರು ದೇವಾಲಯಕ್ಕೆ ಆಗಮಿಸುತ್ತಿದ್ದ  ಕುಷ್ಟಗಿಯ ಭಕ್ತಾದಿಗಳು ಇದ್ದ ಜೀಪ್ ಕಂದಕಕ್ಕೆ ಬಿದ್ದು ಗೌರಮ್ಮ ಎನ್ನುವವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನುಳಿದವರಿಗೆ ತುಮರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಸಾಗರ ಆಸ್ಪತ್ರೆಗೆ ಕಳುಹಿಸಲಾಗಿದೆ.  ಇವತ್ತು ದ್ವೀಪದಲ್ಲಿ ಎರಡು ಅಫಘಾತವಾದ ಕಾರಣ 108 ಮೊದಲ ಅಫಘಾತಕ್ಕೆ ಸೇವೆ ನೀಡಲು ಕುಂದಾಪುರ ಹೋದ ಕಾರಣ ಲಭ್ಯವಾಗಲಿಲ್ಲ. ಜಂಟಿ 108…

Read More

RIPPONPETE | ಬಟ್ಟೆಮಲ್ಲಪ್ಪದಿಂದ ನಾಪತ್ತೆಯಾಗಿದ್ದ ಇಬ್ಬರು ಬಾಲಕರು ಪತ್ತೆ

RIPPONPETE | ಬಟ್ಟೆಮಲ್ಲಪ್ಪದಿಂದ ನಾಪತ್ತೆಯಾಗಿದ್ದ ಇಬ್ಬರು ಬಾಲಕರು ಪತ್ತೆ ರಿಪ್ಪನ್‌ಪೇಟೆ : ಬಟ್ಟೆಮಲ್ಲಪ್ಪ ಗ್ರಾಮದಿಂದ ನಾಪತ್ತೆಯಾಗಿದ್ದ ಇಬ್ಬರು ಬಾಲಕರನ್ನು ಶಿವಮೊಗ್ಗದಲ್ಲಿ ರಿಪ್ಪನ್‌ಪೇಟೆ ಪೊಲೀಸರು ಪತ್ತೆ ಹಚ್ಚಿ, ಪಟ್ಟಣಕ್ಕೆ ವಾಪಾಸು ಕರೆತಂದಿದ್ದು, ಮರಳಿ ಪೋಷಕರಿಗೆ ಒಪ್ಪಿಸಿದ್ದಾರೆ. ಬಟ್ಟೆಮಲ್ಲಪ್ಪ ಗ್ರಾಮದ ನಿವಾಸಿಗಳಾದ ಸಾತ್ವಿಕ್ (13) ನಿರಂಜನ್ (13)ಎಂಬ ಇಬ್ಬರು ಬಾಲಕರು ಬಟ್ಟೆಮಲ್ಲಪ್ಪದಿಂದ ಶಾಲೆಗೆ ತೆರಳುತ್ತೇವೆ ಎಂದು ಗುರುವಾರ ಬೆಳಿಗ್ಗೆ ನಾಪತ್ತೆಯಾಗಿದ್ದರು. ಶಾಲಾ ಸಮವಸ್ತ್ರ ದೊಂದಿಗೆ ನಾಪತ್ತೆಯಾಗಿದ್ದ ಇಬ್ಬರು ಬಾಲಕರ ಬಗ್ಗೆ ಪೋಷಕಕರಿಗೆ ತಿಳಿಯುತಿದ್ದಂತೆ ರಿಪ್ಪನ್‌ಪೇಟೆ ಪಿಎಸ್‌ಐ ಪ್ರವೀಣ್ ಎಸ್ ಪಿ…

Read More

ಮಾನವೀಯತೆ ಮೆರೆದ ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು :

ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯನ್ನು ಉಪಚರಿಸಿ ಆಸ್ಪತ್ರೆಗೆ ತನ್ನದೇ ಕಾರಿನಲ್ಲಿ  ಕಳುಹಿಸಿಕೊಡುವ ಮೂಲಕ ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಮಾನವೀಯತೆ ಮೆರೆದ ಘಟನೆ ಇಂದು ನಡೆದಿದೆ. ಅಪಘಾತದಲ್ಲಿ ಗಾಯಗೊಂಡು ರಸ್ತೆಯಲ್ಲಿ ನರಳಾಡುತ್ತಿದ್ದರೂ ಮೊಬೈಲ್​ನಲ್ಲಿ ಪೋಟೋ ತೆಗೆಯುವಲ್ಲಿ ತಲ್ಲೀನರಾಗಿರುವವರೇ ಹೆಚ್ಚಾಗಿ ಇರುತ್ತಾರೆ. ಈ ಮಧ್ಯೆ ಅಪಘಾತದಲ್ಲಿ ಗಾಯಗೊಂಡವರನ್ನು ತನ್ನದೇ ಕಾರಿನಲ್ಲಿ ಕರೆತಂದು ಆಸ್ಪತ್ರೆಗೆ ದಾಖಲಿಸಿ ಸಾಗರದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಮಾನವೀಯತೆ ಮೆರೆದಿದ್ದಾರೆ. ಸಾಗರದಿಂದ ಹೊಸನಗರಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಹುಲಿದೇವರ ಬನ ಗ್ರಾಮದ…

Read More

ರಿಪ್ಪನ್‌ಪೇಟೆಯ ಏಳು ಬೂತ್ ಗಳಲ್ಲಿ ಬೇಳೂರಿಗೆಷ್ಟು ಮತ??? ಹರತಾಳಿಗೆಷ್ಟು ಮತ ???? ಇಲ್ಲಿದೆ ನಿಖರ ಮಾಹಿತಿ|Election Result

ರಿಪ್ಪನ್‌ಪೇಟೆಯ ಏಳು ಬೂತ್ ಗಳಲ್ಲಿ ಬೇಳೂರಿಗೆಷ್ಟು ಮತ??? ಹರತಾಳಿಗೆಷ್ಟು ಮತ ???? ಇಲ್ಲಿದೆ ನಿಖರ ಮಾಹಿತಿ ರಿಪ್ಪನ್‌ಪೇಟೆ : ಸಾಗರ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು ಬೇಳೂರು ಗೋಪಾಲಕೃಷ್ಣ 15971 ಮತಗಳ ಅಂತರದಿಂದ ಗೆದ್ದಿದ್ದಾರೆ. ರಿಪ್ಪನ್‌ಪೇಟೆ ಗ್ರಾಪಂ ವ್ಯಾಪ್ತಿಯ ಏಳು ಬೂತಗಳಲ್ಲಿ ಕಾಂಗ್ರೆಸ್ ಪಕ್ಷದ ಬೇಳೂರು ಗೋಪಾಲಕೃಷ್ಣ ಮತ್ತು ಬಿಜೆಪಿ ಪಕ್ಷದ ಹರತಾಳು ಹಾಲಪ್ಪ ಈ ಕೆಳಕಂಡಂತೆ ಮತ ಪಡೆದಿದ್ದಾರೆ. ಬರುವೆ 1  ಬೇಳೂರು ಗೋಪಾಲಕೃಷ್ಣ – 486 ಹರತಾಳು ಹಾಲಪ್ಪ – 371 ಬರುವೆ…

Read More

Ripponpete | ಧರ್ಮ ಜಾಗೃತಿಗಾಗಿ ಶ್ರೀಶೈಲ ಜಗದ್ಗುರು ನಡಿಗೆ ಮಲೆನಾಡ ಕಡೆಗೆ

Ripponpete | ಧರ್ಮ ಜಾಗೃತಿಗಾಗಿ ಶ್ರೀಶೈಲ ಜಗದ್ಗುರು ನಡಿಗೆ ಮಲೆನಾಡ ಕಡೆಗೆ ರಿಪ್ಪನ್‌ಪೇಟೆ: ಗುರು-ವಿರಕ್ತವರ್ಗ ಬೇರೆಬೇರೆ ಎಂಬ ಭಾವನೆ ಸರಿಯಾದುದಲ್ಲ. ಗುರು-ವಿರಕ್ತ ಪರಂಪರೆ ಒಂದೇ ಆಗಿದ್ದು, ಸಮಾಜದ ಧಾರ್ಮಿಕ ಭಾವನೆಗೆ ಎರಡೂ ಕಣ್ಣುಗಳಿದ್ದಂತೆ ಎಂಬ ಹಿನ್ನೆಲೆಯಲ್ಲಿ ಧರ್ಮದ ಪ್ರಬೋದನೆ ಮತ್ತು ಧರ್ಮ ಜಾಗೃತಿ ಸಾರುವ ನಿಟ್ಟಿನಲ್ಲಿ ಗುರು-ವಿರಕ್ತರು ಸಮಾಗಮಗೊಳ್ಳುತ್ತಿರುವುದಾಗಿ ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು. ಪಟ್ಟಣದ ಸಮೀಪದ ಬೆಳಕೋಡು ಹಾಲಸ್ವಾಮಿಗೌಡರು ಮಂಗಳವಾರ ಆಯೋಜಿಸಲಾಗಿದ್ದ ಇಷ್ಟಲಿಂಗ ಮಹಾಪೂಜೆ ಮತ್ತು ಧರ್ಮಜಾಗೃತಿ ಸಮಾರಂಭದ ದಿವ್ಯಸಾನಿಧ್ಯವಹಿಸಿ…

Read More

ಕೋಡೂರು ಸರ್ಕಾರಿ ಶಾಲೆಯಲ್ಲಿ ‘ಮಕ್ಕಳ ಸಂತೆ’—ವಿದ್ಯಾರ್ಥಿಗಳಲ್ಲಿ ವ್ಯವಹಾರ ಜ್ಞಾನಕ್ಕೆ ಉತ್ತೇಜನ

Children’s Market event was successfully organized at Koduru Government Higher Primary School, where students showcased entrepreneurial skills by selling vegetables, snacks, and healthy drinks with support from parents and teachers. ಕೋಡೂರು ಸರ್ಕಾರಿ ಶಾಲೆಯಲ್ಲಿ ‘ಮಕ್ಕಳ ಸಂತೆ’—ವಿದ್ಯಾರ್ಥಿಗಳಲ್ಲಿ ವ್ಯವಹಾರ ಜ್ಞಾನಕ್ಕೆ ಉತ್ತೇಜನ ರಿಪ್ಪನ್‌ಪೇಟೆ : ಇಲ್ಲಿನ ಕೋಡೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿ ‘ಮಕ್ಕಳ ಸಂತೆ’ ಕಾರ್ಯಕ್ರಮವನ್ನು ಉತ್ಸಾಹಭರಿತವಾಗಿ ಆಯೋಜಿಸಲಾಗಿತ್ತು….

Read More