ಬಾರ್ ಅಂಡ್ ರೆಸ್ಟೋರೆಂಟ್ ಸ್ಥಳಾಂತರ ವಿರೋದಿಸಿ ರಿಪ್ಪನ್ ಪೇಟೆ ಸಾರ್ವಜನಿಕರ ವೇದಿಕೆಯಿಂದ ಪ್ರತಿಭಟನೆ: ಶಾಸಕರಾದ ಹರತಾಳು ಹಾಲಪ್ಪರ ಮಧ್ಯಸ್ಥಿಕೆಯಿಂದ ಪರಿಹಾರ
ರಿಪ್ಪನ್ ಪೇಟೆ:: ಇಲ್ಲಿನ ಗ್ರಾ.ಪಂ ವ್ಯಾಪ್ತಿಯಲ್ಲಿ ಪಟ್ಟಣದಿಂದ ಹೊರಗಿದ್ದ ಬಾರ್ ಗಳನ್ನು ಏಕಾಏಕಿ ವಿನಾಯಕ ವೃತ್ತದ ಬಸ್ ನಿಲ್ದಾಣದ ಪಕ್ಕದ ಅಂಗಡಿಯಲ್ಲಿ ತೆರೆದಿದ್ದು ಹಾಗೂ ತೀರ್ಥಹಳ್ಳಿ ರಸ್ತೆಯಲ್ಲಿ ಮತ್ತೊಂದು ಬಾರ್ ಅನ್ನು ತೆರೆಯಲು ಕಾಮಗಾರಿ ನೆಡೆಸುತ್ತಿದ್ದು. ಇದರಿಂದ ಸಾರ್ವಜನಿಕರಿಗೆ, ಶಾಲಾ-ಕಾಲೇಜು ಮಕ್ಕಳಿಗೆ ತೊಂದರೆಯಾಗುತ್ತದೆ ಎಂದು ರಿಪ್ಪನ್ ಪೇಟೆ ಸಾರ್ವಜನಿಕರ ವೇದಿಕೆಯಿಂದ ಪ್ರತಿಭಟನೆ ನಡೆಸಲಾಯಿತು. ಈ ಸಂಧರ್ಭದಲ್ಲಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಶಾಸಕರಾದ ಹರತಾಳು ಹಾಲಪ್ಪ ನವರು ಸಾರ್ವಜನಿಕರ ಅಹವಾಲು ಸ್ವೀಕರಿಸಿ, ಅಬಕಾರಿ ಜಿಲ್ಲಾಧಿಕಾರಿ ಮತ್ತು ತಾಲೂಕು ಅಬಕಾರಿ…