MSIL ರಾಯಭಾರಿಯಾಗಿ ಆಯ್ಕೆಯಾದ ರಾಷ್ಟ್ರೀಯ ಹಾಕಿ ಕ್ರೀಡಾಪಟು ರಿಪ್ಪನ್‌ಪೇಟೆಯ ಪೂಜಿತಗೌಡ : 5 ಲಕ್ಷದ ಚೆಕ್ ವಿತರಿಸಿದ ಹರತಾಳು ಹಾಲಪ್ಪ
ಹಾಕಿ ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವ ರಿಪ್ಪನ್ ಪೇಟೆಯ ಪ್ರತಿಭಾನ್ವಿತ ಕ್ರೀಡಾ ತಾರೆ ಪೂಜಿತ ಗೌಡ 5 ವರ್ಷಕ್ಕೆ ಕರ್ನಾಟಕ ಎಂಎಸ್ ಐಎಲ್ ಸಂಸ್ಥೆಯ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾಗಿದ್ದಾರೆ. ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕರು ಮತ್ತು ಎಂಎಸ್ ಐಎಲ್ ಅಧ್ಯಕ್ಷರಾದ ಹರತಾಳು ಹಾಲಪ್ಪ ರವರು ಕ್ರೀಡಾ ಪ್ರತಿಭೆ ಪೂಜಿತ ಗೌಡ ರವರಿಗೆ ಎಂಎಸ್ ಐ ಎಲ್ ವತಿಯಿಂದ ಚೆಕ್ ವಿತರಿಸಿದರು. ನಂತರ ಮಾತನಾಡಿದ ಶಾಸಕರು ಗ್ರಾಮೀಣ ಭಾಗದ ಹಾಕಿ ಪ್ರತಿಭೆಯೊಬ್ಬಳು ರಾಷ್ಟ್ರ ಮಟ್ಟದಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶನ…